Koppal

ಐಸಿಸ್ ಜೊತೆ ನಂಟು: ಗಂಗಾವತಿ ಹಣ್ಣಿನ ವ್ಯಾಪಾರಿ ಶಿವಮೊಗ್ಗ ಪೊಲೀಸರ ವಶಕ್ಕೆ!
ನಿಷೇಧಿತ ಉಗ್ರ ಸಂಘಟನೆ ಐಸಿಸ್ ಜೊತೆ ನಂಟು ಹೊಂದಿದ ಆರೋಪದ ಮೇರೆಗೆ ಗಂಗಾವತಿಯಲ್ಲಿ ವ್ಯಕ್ತಿಯೋರ್ವನನ್ನು ಶಿವಮೊಗ್ಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಕೊಪ್ಪಳ: ಕುಡಿಯುವ ನೀರು ಪೂರೈಕೆಗೆ ಆಗ್ರಹ, ಗ್ರಾಮ ಪಂಚಾಯಿತಿ ಸದಸ್ಯರ ಧರಣಿ
ಕೊಪ್ಪಳ ಜಿಲ್ಲೆಯ ಸಿದ್ದಾಪುರ ಗ್ರಾಮದಲ್ಲಿ ಕುಡಿಯುವ ನೀರು ಪೂರೈಕೆಗೆ ಆಗ್ರಹಿಸಿ ಗ್ರಾಮ ಪಂಚಾಯಿತಿ ಸದಸ್ಯರು ಧರಣಿ ನಡೆಸುತ್ತಿದ್ದಾರೆ.

ಕೊಪ್ಪಳ: ವಾರದಿಂದ ಪ್ರವಾಹ ನಡುಗಡ್ಡೆಯಲ್ಲಿ ಸಿಲುಕಿದ್ದ ಕುರಿಗಾಹಿ, ಕುರಿಗಳ ರಕ್ಷಣೆ
ರಾಜ್ಯದಲ್ಲಿ ಮಳೆ ಅಬ್ಬರ ಮುಂದುವರೆದಿರುವಂತೆಯೇ ನದಿಗಳು ಉಕ್ಕಿ ಹರಿಯುತ್ತಿದ್ದು ಅತ್ತ ಕೊಪ್ಪಳದಲ್ಲಿ ಕುರಿ ಕಾಯಲು ಹೋಗಿ ಒಂದು ವಾರದಿಂದ ಪ್ರವಾಹಕ್ಕೆ ಸಿಲುಕಿದ್ದ ಕುರಿಗಾಹಿಗಳನ್ನು ಮತ್ತು ನೂರಾರು ಕುರಿಗಳನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಕೊಪ್ಪಳ: ಹುಲಿಹೈದರ್ ಗ್ರಾಮದಲ್ಲಿ ಗುಂಪು ಘರ್ಷಣೆ; 2 ಸಾವು, 6 ಮಂದಿಗೆ ಗಾಯ, ಪ್ರತಿಭಟನೆ
ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಸಂಭವಿಸಿದ ಮಾರಾಮಾರಿಯಲ್ಲಿ ಕನಿಷ್ಛ ಇಬ್ಬರು ಸಾವನ್ನಪ್ಪಿ 6 ಮಂದಿ ಗಾಯಗೊಂಡಿರುವ ಘಟನೆ ಗುರುವಾರ ಕೊಪ್ಪಳದಲ್ಲಿ ನಡೆದಿದೆ.

ಭೀಕರ ವಿಡಿಯೋ: ದೇವಸ್ಥಾನದ ರಸ್ತೆ ಮೇಲೆ ಮಲಗಿದ್ದವರ ಮೇಲೆ ಹರಿದ ಗೂಡ್ಸ್ ಗಾಡಿ; ಓರ್ವ ಸ್ಥಳದಲ್ಲೇ ಸಾವು, ಹಲವರಿಗೆ ಗಾಯ
ದೇವಸ್ಥಾನದ ರಸ್ತೆ ಮೇಲೆ ಮಲಗಿದ್ದವರ ಮೇಲೆ ಗೂಡ್ಸ್ ಗಾಡಿಯೊಂದು ಹರಿದ ಪರಿಣಾಮ ಓರ್ವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರಿಗೆ ಗಾಯವಾಗಿವೆ.

ಕೊಪ್ಪಳ: ರಸ್ತೆ ಅಪಘಾತದಲ್ಲಿ ಐವರು ಸ್ಥಳದಲ್ಲೇ ದುರ್ಮರಣ, ಕೆಲವರ ಸ್ಥಿತಿ ಚಿಂತಾಜನಕ
ಲಾರಿ ಡಿಕ್ಕಿಯಾಗಿ ಸ್ಕಾರ್ಪಿಯೋ ಕಾರಿನಲ್ಲಿದ್ದ ಐವರು ಸ್ಥಳದಲ್ಲಿಯೇ ದುರ್ಮರಣ ಹೊಂದಿರುವ ಘಟನೆ ಕೊಪ್ಪಳ ಜಿಲ್ಲೆ ಯಲಬುರ್ಗಾ ತಾಲೂಕಿನ ಬಾನಪುರ ಗ್ರಾಮದ ಬಳಿ ತಡರಾತ್ರಿ ಸಂಭವಿಸಿದೆ.

ಕೆಐಎಡಿಬಿ ಭೂ ಸ್ವಾಧೀನ, 15 ವರ್ಷದಿಂದ ಕೊಪ್ಪಳದ ಈ ರೈತನಿಗೆ ಇನ್ನೂ ಸಿಗದ ಪರಿಹಾರ!
ಜಿಲ್ಲೆಯ ಕುಕನೂರು ತಾಲೂಕಿನ ಬಿನ್ನಾಳ್ ಗ್ರಾಮದ ರೈತ ಅಂದಾನಗೌಡ ಪಾಟೀಲ್ ಅವರ ಭೂಮಿಯನ್ನು ಸ್ವಾಧೀನಪಡಿಸಿಕೊಂಡು 15 ವರ್ಷಗಳ ಕಳೆದರೂ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ದಿ ಮಂಡಳಿ(ಕೆಐಎಡಿಬಿ) ಇನ್ನೂ ಪರಿಹಾರ ನೀಡಿಲ್ಲ.

ಕೊಪ್ಪಳ ಗವಿಸಿದ್ದೇಶ್ವರ ಮಠದ ವಸತಿ ನಿಲಯಕ್ಕೆ ರಾಜ್ಯ ಸರ್ಕಾರದಿಂದ 10 ಕೋಟಿ ರೂ. ಬಿಡುಗಡೆ
ಕೊಪ್ಪಳದ ಗವಿಸಿದ್ದೇಶ್ವರ ಮಠದ ಉಚಿತ ವಸತಿ ಮತ್ತು ಪ್ರಸಾದ ನಿಲಯ ಕಟ್ಟಡ ನಿರ್ಮಾಣಕ್ಕೆ 10 ಕೋಟಿ ರೂ. ಬಿಡುಗಡೆ ಮಾಡುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅವರು ಮಂಗಳವಾರ ಹಣಕಾಸು ಇಲಾಖೆಗೆ...

ಕೊಪ್ಪಳ: ಸಂಗೀತಗಾರನ ಮಗಳ ಮದುವೆಗೆ ಹಣ ಸಂಗ್ರಹಿಸಲು ಗ್ರಾಮಸ್ಥರಿಂದ ನಾಟಕ ಪ್ರದರ್ಶನ
ಎರಡು ಬಾರಿ ಕೋವಿಡ್ ಲಾಕ್‌ಡೌನ್ ನಿಂದಾಗಿ ಗಾಯಕರು, ಸಂಗೀತಕಾರರು ಸೇರಿದಂತೆ ಗ್ರಾಮೀಣ ಭಾಗದ ಹಲವು ಜನರ ಜೀವನ ಸಂಕಷ್ಟಕ್ಕೆ ಸಿಲುಕಿದ್ದು, ಕೊಪ್ಪಳ ಜಿಲ್ಲೆಯ ವಡಗನಾಳ್ ಗ್ರಾಮಸ್ಥರು ನಾಟಕ ಪ್ರದರ್ಶನ ಏರ್ಪಡಿಸುವ ಮೂಲಕ

