Koppal

ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕ ಕಟ್ಟುವ ಸಂಕಲ್ಪ: ಮುಖ್ಯಮಂತ್ರಿ ಬೊಮ್ಮಾಯಿ
ಸುಭಿಕ್ಷ, ಸುರಕ್ಷಿತ, ಸಮೃದ್ಧ, ಸಂಪದ್ಭರಿತ ಕರ್ನಾಟಕವನ್ನು ಕಟ್ಟುವ ಸಂಕಲ್ಪವನ್ನು ತೊಟ್ಟಿರುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಕೊಪ್ಪಳ: ಮತ್ತೋರ್ವ ಪುನೀತ್ ಅಭಿಮಾನಿ ಸಾವು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಸಾವಿನ ಸುದ್ದಿ ಅರಗಿಸಿಕೊಳ್ಳಲಾಗದೆ ಮತ್ತೋರ್ವ ಅಭಿಮಾನಿಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜ್ಞಾನಪೂರ್ತಿ ನಿಂಗಾಪುರ (40) ಮೃತ ಅಭಿಮಾನಿ ಎನ್ನಲಾಗಿದೆ.

ಕೊಪ್ಪಳ: ವರ್ಣಮಾಲೆಯನ್ನೂ ಕಲಿಯದೆ 30 ಸಾವಿರ ವಿದ್ಯಾರ್ಥಿಗಳು ಪಾಸ್!
ಕೋವಿಡ್ ಸಾಂಕ್ರಾಮಿಕ ರೋಗ ಶೈಕ್ಷಣಿಕ ಕ್ಷೇತ್ರದ ಮೇಲೆ ಆಪಾರ ಪರಿಣಾಮ ಬೀರಿದೆ. 14,140 ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು 29,187 ವಿದ್ಯಾರ್ಥಿಗಳು 1ನೇ ತರಗತಿಯಿಂದ 2ನೇ ತರಗತಿಗೆ ವರ್ಣಮಾಲೆಯನ್ನೂ ಕಲಿಯದೇ ಪಾಸಾಗಿದ್ದಾರೆ.

ಕೋವಿಡ್ ಕೇರ್ ಕೇಂದ್ರಗಳಲ್ಲಿ ಚಿಕಿತ್ಸೆ ಪಡೆದವರಿಗೆ ರೂ.2 ಸಾವಿರ ಬಹುಮಾನ: ಗ್ರಾ.ಪಂ ಅಧ್ಯಕ್ಷನಿಂದ ಬಂಪರ್ ಆಫರ್
ಕೊರೊನಾ ಟೆಸ್ಟ್ ಮಾಡಿಸಿಕೊಂಡವರಿಗೆ ತಲಾ ಐನೂರು ರೂಪಾಯಿ ಕೊಡುವುದಾಗಿ ಹೇರೂರು ಪಂಚಾಯತ್ ಅಧ್ಯಕ್ಷ ಘೋಷಣೆ ಮಾಡಿದ ಬೆನ್ನಲ್ಲೆ, ಇದೀಗ ಕನಕಗಿರಿ ತಾಲೂಕು ಚಿಕ್ಕಮಾದಿನಾಳ ಗ್ರಾಮ ಪಂಚಾಯತ್ ಅಧ್ಯಕ್ಷ ಮತ್ತೊಂದು ಹೆಜ್ಜೆ ಮುಂದೆ ಹೋಗಿ, ತಲಾ 2 ಸಾವಿರ ರೂಪಾಯಿ ಇನಾಮು ಪ್ರಕಟಿಸಿದ್ದಾರೆ.

ಮೇ 17 ರಿಂದ ಕೊಪ್ಪಳದಲ್ಲಿ ಸಂಪೂರ್ಣ ಲಾಕ್‌ಡೌನ್: ಬಿ.ಸಿ.ಪಾಟೀಲ್
ಕೊಪ್ಪಳ ಜಿಲ್ಲೆಯಲ್ಲಿ ಕೊರೋನಾ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯಲ್ಲಿ ಮೇ 17ರಿಂದ 21ರವರೆಗೆ ಐದು ದಿನಗಳ ಕಾಲ ಆರೋಗ್ಯ ಮತ್ತು ಕೃಷಿ ಚಟುವಟಿಕೆಗಳನ್ನು ಹೊರತುಪಡಿಸಿ, ಇತರೆ ಎಲ್ಲವನ್ನು ಸಂಪೂರ್ಣವಾಗಿ ಲಾಕ್‌ಡೌನ್....

ಕೊಪ್ಪಳ: ನಿಶ್ಚಿತಾರ್ಥಕ್ಕೆ ತೆರಳುತ್ತಿದ್ದಾಗ ಮಿನಿ ಬಸ್- ಬೈಕ್ ನಡುವೆ ಡಿಕ್ಕಿ, ಮೂವರ ದುರ್ಮರಣ
ನಿಶ್ಚಿತಾರ್ಥ ಕಾರ್ಯಕ್ರಮಕ್ಕೆ ಮಿನಿ ಬಸ್ ನಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಸ್ ನಲ್ಲಿದ್ದವರು ಹಾಗೂ ಬೈಕ್ ಸವಾರ ಸೇರಿ ಮೂವರು ಸಾವನ್ನಪ್ಪಿದ್ದಾರೆ.

ಕೊಪ್ಪಳ ಜಿಲ್ಲೆಯಲ್ಲಿ ಚಿರತೆ ದಾಳಿಗೆ ಯುವಕ ಬಲಿ
ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲ್ಲೂಕಿನ ಆನೆಗುಂದಿ ಗ್ರಾಮದ ಬಳಿ ಗುರುವಾರ ಬೆಳಿಗ್ಗೆ ಚಿರತೆ ದಾಳಿಯಿಂದ 24 ವರ್ಷದ ಯುವಕ ಮೃತಪಟ್ಟಿದ್ದಾನೆ.

'ನನ್ನ ಕರ್ಮಕ್ಕೆ ಶಿಕ್ಷೆ ಆಗಿದೆ': ಕೆ. ಕಲ್ಯಾಣ್ ದಂಪತಿ ಕಲಹ ಪ್ರಕರಣದ ಆರೋಪಿ ಗಂಗಾ ಕುಲಕುರ್ಣಿ ಡೆತ್ ನೋಟ್
ಸ್ಯಾಂಡಲ್ ವುಡ್ ಚಿತ್ರ ಸಾಹಿತಿ ಕೆ ಕಲ್ಯಾಣ್ ದಾಂಪತ್ಯದಲ್ಲಿ ಹುಳಿ ಹಿಂಡಿದ ಆರೋಪ ಎದುರಿಸುತ್ತಿದ್ದ ಗಂಗಾ ಕುಲಕರ್ಣಿ ಆತ್ಮಹತ್ಯೆ ಮಾಡಿಕೊಂಡಿದ್ದು, ಡೆತ್ ನೋಟ್ ಪತ್ತೆಯಾಗಿದೆ.

ಮನೆಯಲ್ಲೇ ಚಿಕಿತ್ಸೆ ಪಡೆದು ಕೊರೋನಾ ಗೆದ್ದ 105 ವರ್ಷದ ವೃದ್ಧೆ!
ಕೊರೋನಾ ಹಾಟ್'ಸ್ಪಾಟ್ ಎಂದೇ ಹೇಳಲಾಗುತ್ತಿರುವ ಕೊಪ್ಪಳ ಜಿಲ್ಲೆಯಲ್ಲಿ ನಿತ್ಯವೂ ಸಾಲು ಸಾಲು ಸಾವುಗಳು ಸಾಮಾನ್ಯ ಎನ್ನುವಂತಾಗಿದೆ. ಇದರ ಮಧ್ಯೆಯೂ ಕೊಪ್ಪಳ ತಾಲೂಕಿನ ಕಾತರಕಿ ಗ್ರಾಮದ 105 ವರ್ಷದ ಕಮಲಮ್ಮ ಲಿಂಗನಗೌಡ ಹಿರೇಗೌಡ್ರ ಅವರು, ಸೋಂಕು ತಗುಲಿದ್ದರೂ ಮನೆಯಲ್ಲಿಯೇ ಚಿಕಿತ್ಸೆ ಪಡೆದು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ.

