KIA

ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಜಪ್ತಿ ಮಾಡಿದ್ದ 2.5 ಕೆಜಿ ಚಿನ್ನ ನಾಪತ್ತೆ: ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು
ದೇಶಕ್ಕೆ ಚಿನ್ನ ಕಳ್ಳಸಾಗಣೆ ಮಾಡುವ ಹಲವು ಪ್ರಯತ್ನಗಳನ್ನು ವಿಫಲಗೊಳಿಸಿದ ವೇಳೆ ವಶಪಡಿಸಿಕೊಳ್ಳಲಾಗಿದ್ದ 2.5 ಕೆಜಿ ಚಿನ್ನ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಕಾರ್ಗೊ ವಿಭಾಗದ ಗೋದಾಮಿನಿಂದ ನಾಪತ್ತೆಯಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ಸಿಬಿಐ ಎಸಿಬಿ ಘಟಕದಲ್ಲಿ ದೂರು ದಾಖಲಾಗಿದೆ.

100 ದಿನದಲ್ಲಿ ಬೆಂಗಳೂರಿನಿಂದ 10.04 ಲಕ್ಷ ಮಂದಿ ವಿಮಾನದಲ್ಲಿ ಪ್ರಯಾಣ
ಕೊರೋನಾ ಲಾಕ್ಡೌನ್ ಸಡಿಲಿಕೆ ಬಳಿಕ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಸ್ವದೇಶಿ ವಿಮಾನ ಸೇವೆ ಪುನಾರಂಭಗೊಂಡು ಮಂಗಳವಾರಕ್ಕೆ ನೂರು ದಿನ ಪೂರೈಸಿದೆ. ಈ ಅವಧಿಯಲ್ಲಿ ವಿಮಾನ ನಿಲ್ದಾಣದಿಂದ ದೇಶದ 49 ನಗರಗಳಿಗೆ 10.04 ಲಕ್ಷ ಮಂದಿ ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ.

ಕೊರೋನಾ ಎಫೆಕ್ಟ್: ಕೆಐಎನಲ್ಲಿ ಇಳಿಕೆ ಕಂಡ ಚಿನ್ನ ಕಳ್ಳಸಾಗಾಣೆ ಪ್ರಕರಣ
ಕೊರೋನಾ ವೈರಸ್ ಪರಿಣಾಮ ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಸುವ ಪ್ರಯಾಣಿಕರ ಸಂಖ್ಯೆ ಶೇ.90ಕ್ಕಿಂತಲೂ ಹೆಚ್ಚು ಕುಸಿತ ಕಂಡಿದ್ದು, ಇದರಿಂದಾಗಿ ಅಕ್ರಮವಾಗಿ ಚಿನ್ನ ಕಳ್ಳಸಾಗಣೆ ಮೇಲೆ ಗಂಭೀರ ಪರಿಣಾಮ ಬೀರಿದೆ.

ಕೊರೋನಾ ಎಫೆಕ್ಟ್: ಪ್ರಯಾಣಿಕರ ಸುರಕ್ಷತೆಗಾಗಿ ಎಸಿ ತಾಪಮಾನ 25 ಡಿಗ್ರಿಗೆ ಇಳಿಸಿದ ಕೆಐಎ
ತಂಪು ಹಾಗೂ ಶೀತ ವಾತಾವರಣದಲ್ಲಿ ಕೊರೋನಾ ಪರಿಣಾಮ ಹೆಚ್ಚಾಗುವ ಹಿನ್ನೆಲೆಯಲ್ಲಿ ಪ್ರಯಾಣಿಕರ ಸುರಕ್ಷತೆಗಾಗಿ ಕೆಂಪೇಗೌಡ ವಿಮಾನ ನಿಲ್ದಾಣವು ಎಸಿ ತಾಪಮಾನವನ್ನು 25 ಡಿಗ್ರಿಗೆ ನಿಗದಿಪಡಿಸಿದೆ ಎಂದು ತಿಳಿದುಬಂದಿದೆ.

ಕೆಐಎಗೆ ಸಂಪರ್ಕಿಸುವ ಮೆಟ್ರೋ ಬ್ಲೂ ಲೈನ್ ಮಾರ್ಗಕ್ಕೆ ಹೊಸ ವಿನ್ಯಾಸ!
ಬಹು ನಿರೀಕ್ಷಿತ ಬೆಂಗಳೂರಿನ ನಮ್ಮ ಮೆಟ್ರೋ ಯೋಜನೆಯ ನೀಲಿ ಬಣ್ಣದ ಲೈನ್ ಮಾರ್ಗಕ್ಕೆ ಹೊಸ ವಿನ್ಯಾಸ ನೀಡಲಾಗಿದ್ದು, ಈ ಲೈನ್ ನಲ್ಲಿ ಬರುವ 2 ನಿಲ್ದಾಣಗಳು ಭಾಗಶಃ ಸುರಂಗಮಾರ್ಗದ ನಿಲ್ದಾಣಗಳಾಗಿರುತ್ತವೆ ಎಂದು ತಿಳಿದುಬಂದಿದೆ.

ವಿಮಾನ ನಿಲ್ದಾಣ ಆವರಣದಲ್ಲಿ ಕೆಂಪೇಗೌಡರ ಕಂಚಿನ ಪ್ರತಿಮೆಗೆ ಮುಖ್ಯಮಂತ್ರಿ ಯಡಿಯೂರಪ್ಪ ಶಿಲಾನ್ಯಾಸ
ವಿಶ್ವದ ಅತೀ ಎತ್ತರದ್ದು ಎಂದೇ ಬಣ್ಣಿಸಲಾಗುತ್ತಿರುವ ಬೆಂಗಳೂರು ನಿರ್ಮಾತೃ, ನಾಡಪ್ರಭು ಕೆಂಪೇಗೌಡರ ಬೃಹತ್ ಪ್ರತಿಮೆ ನಿರ್ಮಾಣ ಕಾಮಗಾರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಶನಿವಾರ ಶಂಕುಸ್ಥಾಪನೆ ನೆರವೇರಿಸಿದ್ದಾರೆ.

ಬೆಂಗಳೂರು: ವಿಮಾನಯಾನ ಕ್ಷೇತ್ರದ ಮೇಲೆ ಕೊರೋನಾ ಎಫೆಕ್ಟ್: ಪ್ರಯಾಣಿಕರ ಸಂಖ್ಯೆಯಲ್ಲಿ ಶೇ.50ರಷ್ಟು ಕುಸಿತ!
ವಿಶ್ವಾದ್ಯಂತ ಮರಣ ಮೃದಂಗ ಭಾರಿಸುತ್ತಿರುವ ಕೊರೋನಾ ವೈರಸ್ ನಿಂದಾಗಿ ದೇಶದ ಎಲ್ಲ ಕ್ಷೇತ್ರಗಳೂ ಗಂಭೀರ ಪರಿಣಾಮ ಎದುರಿಸುತ್ತಿದ್ದು, ಇದರಿಂದ ವಿಮಾನಯಾನ ಕ್ಷೇತ್ರದ ಮೇಲೆ ಗಂಭೀರ ಹೊಡೆತ ಬಿದ್ದಿದೆ.

ತಾಂತ್ರಿಕ ದೋಷ: ಕೆಐಎಗೆ ಮರಳಿದ ಗೋ ಏರ್ ವಿಮಾನ, ನಿಲ್ದಾಣದಲ್ಲೇ ಪ್ರಯಾಣಿಕರ ಪ್ರತಿಭಟನೆ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ರಾತ್ರಿ ಥೈಲ್ಯಾಂಡ್ ನ ಪುಕೆಟ್ ತೆರಳುತ್ತಿದ್ದ ಗೋ ಏರ್ ವಿಮಾನ ತಾಂತ್ರಿಕ ದೋಷದಿಂದ ಬೆಂಗಳೂರಿಗೆ ಮರಳಿತು.

ಕನಕಪುರ ರಸ್ತೆಗಿಳಿಯಲಿದೆ 'ವಾಯು ವಜ್ರ' -ಜ. 1ರಿಂದ ಕೆಐಎಗೆ ನೇರ ಬಸ್ ಸೇವೆ
ಬಿಎಂಟಿಸಿ ವಾಯು ವಜ್ರ ಬಸ್ ಗಳು ಇನ್ನು ಮುಂದೆ ಕನಕಪುರ ರಸ್ತೆಯಲ್ಲಿ ಸಹ ಸಂಚರಿಸಲಿವೆ. ವಾಯು ವಜ್ರ ಬಸ್ಸುಗಳನ್ನು ನೈಸ್ ರಸ್ತೆಗೆ ವಿಸ್ತರಿಸಬೇಕೆಂದು ಕನಕಪುರ ರಸ್ತೆಯ ನಿವಾಸಿಗಳು ಬಹುಕಾಲದಿಂದ ಕೇಳುತ್ತಿದ್ದು ಈ ಬೇಡಿಕೆ ಜನವರಿ 1 ರಿಂದ ನೆರವೇರಲಿದೆ.ಈ ಭಾಗದ ಅನೇಕರು ನಿಯಮಿತವಾಗಿ ವಿಮಾನ ನಿಲ್ದಾಣ ಕಡೆಗೆ ಸಂಚರಿಸುವ ಬಸ್ಸುಗಳಿಗೆ ಬೇಡಿಕೆ ಇಟ್ಟಿದ್ದರುಏಕೆಂದರೆ ಅವರೆ

