ತಾಂತ್ರಿಕ ದೋಷ: ಕೆಐಎಗೆ ಮರಳಿದ ಗೋ ಏರ್ ವಿಮಾನ, ನಿಲ್ದಾಣದಲ್ಲೇ ಪ್ರಯಾಣಿಕರ ಪ್ರತಿಭಟನೆ
ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ರಾತ್ರಿ ಥೈಲ್ಯಾಂಡ್ ನ ಪುಕೆಟ್ ತೆರಳುತ್ತಿದ್ದ ಗೋ ಏರ್ ವಿಮಾನ ತಾಂತ್ರಿಕ ದೋಷದಿಂದ ಬೆಂಗಳೂರಿಗೆ ಮರಳಿತು.

ಬೆಂಗಳೂರು: ಬೆಂಗಳೂರು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಗುರುವಾರ ರಾತ್ರಿ ಥೈಲ್ಯಾಂಡ್ ನ ಪುಕೆಟ್ ತೆರಳುತ್ತಿದ್ದ ಗೋ ಏರ್ ವಿಮಾನ ತಾಂತ್ರಿಕ ದೋಷದಿಂದ ಬೆಂಗಳೂರಿಗೆ ಮರಳಿತು.ಈ ಘಟನೆ ನಡೆದಾಗ 173 ಪ್ರಯಾಣಿಕರೊಂದಿಗೆ ವಿಮಾನ 10,000 ಅಡಿ ಎತ್ತರದಲ್ಲಿ ಹಾರಾಡುತ್ತಿತ್ತು ಎನ್ನಲಾಗಿದೆ.
ಜಿ8 -241, ಸಂಖ್ಯೆಯ ನಿಯೋ ಎ320 ವಿಮಾನ ಶುಕ್ರವಾರ ಬೆಳಗ್ಗೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬೆಳಗ್ಗೆ 2-30 ರ ಸುಮಾರಿನಲ್ಲಿ ಟೇಕಾಪ್ ಆಗಿದೆ. ಆದರೆ, ಹಾರಾಟದ ಮಧ್ಯೆದಲ್ಲಿ ತಾಂತ್ರಿಕ ದೋಷ ಉಂಟಾಗಿ ಬೆಂಗಳೂರಿಗೆ ವಾಪಾಸ್ ಆಗಿದೆ.
ತಾಂತ್ರಿಕ ಸಮಸ್ಯೆಯನ್ನು ಪರಿಹರಿಸಲು ಎಂಜಿನಿಯರ್ ಗಳ ತಂಡ ಮೂರ್ನಾಲ್ಕು ತಾಸು ತೆಗೆದುಕೊಂಡಿತ್ತು. ಅಷ್ಟರಲ್ಲೇ ವಿಮಾನದ ಪೈಲೆಟ್ ಸೇರಿದಂತೆ ಇನ್ನಿತರ ಸಿಬ್ಬಂದಿಯ ಪಾಳಿ ಮುಗಿದುಹೋಗಿತ್ತು. ಹೀಗಾಗಿ, ಪರ್ಯಾಯ ಸಿಬ್ಬಂದಿಯನ್ನು ಗೋಏರ್ ಕಲ್ಪಿಸಿದೆ.
ಆದರೆ, ಶುಕ್ರವಾರ ಬೆಳಗ್ಗೆ ಮಂಜು ಆವರಿಸಿದ ಕಾರಣ ವಿಮಾನ ಹಾರಾಟ ಮತ್ತಷ್ಟು ವಿಳಂಬವಾಯಿತು. ಇದರಿಂದಾಗಿ ವಿಮಾನದಲ್ಲಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಏರ್ಲೈನ್ಸ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು. ಮಂಜು ಮುಸುಕಿದ ವಾತಾವರಣ ತುಂಬಾ ಹೊತ್ತಿನವರೆಗೂ ಮುಂದುವರೆದ ಕಾರಣ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಲಾಯಿತು.
ತಾಂತ್ರಿಕ ಕಾರಣದಿಂದ ಸುಮಾರು 6 ತಾಸು ವಿಮಾನದೊಳಗೆ ಕುಳಿತಿದ್ದ ನೂರಕ್ಕೂ ಹೆಚ್ಚು ಪ್ರಯಾಣಿಕರು ಗೋ ಏರ್ ಏರ್ ಲೈನ್ಸ್ ವಿರುದ್ಧ ವಿಮಾನ ನಿಲ್ದಾಣದಲ್ಲಿ ಘೋಷಣೆ ಕೂಗಿ ಪ್ರತಿಭಟನೆ ನಡೆಸಿದ ಘಟನೆಯೂ ನಡೆದಿದೆ. ಪ್ರಯಾಣಿಕರಿಗೆ ತೊಂದರೆಯಾದ ಹಿನ್ನೆಲೆಯಲ್ಲಿ ಗೋ ಏರ್ ಕಂಪನಿ ವಿಷಾಧ ವ್ಯಕ್ತಪಡಿಸಿದೆ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


