KIA

KIA ನಲ್ಲಿರುವ BESCOM EV ಚಾರ್ಜಿಂಗ್ ಸ್ಟೇಷನ್‌ನಲ್ಲಿ ವಿದ್ಯುತ್ ಸಂಗ್ರಹಕ್ಕೆ ಬಳಸಲ್ಪಟ್ಟ ಬ್ಯಾಟರಿಗಳ ಉಪಯೋಗ!
ಈಗಿರುವ ಬೆಸ್ಕಾಂನ 224ಕೆವಿ ಪವರ್ ಸ್ಟೇಷನ್ ಜಾಗದಲ್ಲಿ ಈ ಬಳಸಿದ ಕಾರು ಬ್ಯಾಟರಿ ಕೇಂದ್ರ ತಲೆ ಎತ್ತಲಿದೆ. ಇದು ವಿಮಾನ ನಿಲ್ದಾಣದ ಪಾರ್ಕಿಂಗ್ ವಲಯದಿಂದ 1.5 ಕಿಮೀ ದೂರದಲ್ಲಿದೆ. ಈ ಕೇಂದ್ರದಲ್ಲಿ ಒಮ್ಮೆಗೆ 24 ವಾಹನಗಳನ್ನು ಚಾರ್ಜ್ ಮಾಡಬಹುದು. ಮೂರು ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳನ್ನು ಸಹ ಇಲ್ಲಿ ಸ್ಥಾಪಿಸಲಾಗುತ್ತಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚಿನ್ನ ಕಳ್ಳಸಾಗಣೆಗೆ ಯತ್ನ: 1.7 ಕೋಟಿ ರೂ. ಮೌಲ್ಯದ ಚಿನ್ನ ವಶಕ್ಕೆ, ಮೂವರ ಬಂಧನ
ಥಾಯ್ಲೆಂಡ್ ದೇಶದ ಬ್ಯಾಂಕಾಂಕ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ 3 ವಿದೇಶಿಗರಿಂದ ರೂ.1.71 ಕೋಟಿ ಮೌಲ್ಯದ 2.44 ಕೆಜಿ ಚಿನ್ನವನ್ನು ಜಪ್ತಿ ಮಾಡಿದ್ದಾರೆ.

2035 ರೊಳಗೆ ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೇಕು: ಎಂ ಬಿ ಪಾಟೀಲ್
'ಹೊಸ ವಿಮಾನ ನಿಲ್ದಾಣವು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 50 ರಿಂದ 60 ಕಿ.ಮೀ ದೂರದಲ್ಲಿರಬೇಕು. ತುಮಕೂರು ಮತ್ತು ಚಿತ್ರದುರ್ಗದಲ್ಲಿ ವಿಮಾನ ನಿಲ್ದಾಣ ಯೋಜನೆಯ ಉದ್ದೇಶ ಹೊಂದಿಲ್ಲ ಆದರೆ, ಬೆಂಗಳೂರಿಗೆ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಗ್ಗೆ ಯೋಚಿಸುತ್ತಿದ್ದೇವೆ'

ಬೆಂಗಳೂರಿನಲ್ಲಿ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 5 ಸಾವಿರ ಎಕರೆ ಭೂಮಿ ಅಗತ್ಯ- ಎಂ ಬಿ ಪಾಟೀಲ್
ರಾಜ್ಯ ಸರಕಾರದ ಮನಸ್ಸಿನಲ್ಲಿ ಕನಕಪುರ ರಸ್ತೆ, ಮೈಸೂರು ರಸ್ತೆ, ಮಾಗಡಿ, ದೊಡ್ಡಬಳ್ಳಾಪುರ, ಡಾಬಸಪೇಟೆ, ತುಮಕೂರು ಮುಂತಾದ ಸ್ಥಳಗಳಿವೆ ಎಂದು ಅವರು ಮಾಹಿತಿ ನೀಡಿದರು.

Currency Smuggling: ಚೆನ್ನೈ ಮೂಲದ ವ್ಯಕ್ತಿ ಬಂಧನ, 50 ಲಕ್ಷ ರೂ. ಮೌಲ್ಯದ ಕರೆನ್ಸಿ ವಶಕ್ಕೆ!
50 ಲಕ್ಷಕ್ಕೂ ಅಧಿಕ ಮೌಲ್ಯದ ವಿದೇಶಿ, ಭಾರತೀಯ ಕರೆನ್ಸಿ ನೋಟುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಆರೋಪದ ಮೇಲೆ ಚೆನ್ನೈ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.

ಬೆಂಗಳೂರು: ಬ್ಯಾಗ್'ನಲ್ಲಿ ಬಾಂಬ್ ಇದೆ ಎಂದು ಆತಂಕ ಸೃಷ್ಟಿಸಿದ ವಿಮಾನ ಪ್ರಯಾಣಿಕನ ವಿರುದ್ಧ ಪ್ರಕರಣ ದಾಖಲು!
ಲಗೇಜ್ ತಪಾಸಣೆ ವೇಳೆ ಬ್ಯಾಗ್‌ನಲ್ಲಿ ಬಾಂಬ್ ಇದೆ ಎಂದು ಹೇಳಿ ಪ್ರಯಾಣಿಕನೊಬ್ಬ ಆತಂಕ ಸೃಷ್ಟಿಸಿದ ಘಟನೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ 2ರಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಮಾರ್ಚ್ 28 ರಂದು ಈ ಘಟನೆ ನಡೆದಿದೆ.

ಬೆಂಗಳೂರು: ಕೆಐಎಯಲ್ಲಿ 2.63 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಚಿನ್ನ ವಶಕ್ಕೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಇಬ್ಬರು ಪ್ರಯಾಣಿಕರಿಂದ 2.63 ಕೋಟಿ ರೂಪಾಯಿ ಮೌಲ್ಯದ 4.249 ಗ್ರಾಂ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಬೆಂಗಳೂರು: ಕೆಐಎಯಲ್ಲಿ ಐದು ಗಂಟೆಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆ ಚಿನ್ನ ವಶ
ನಗರದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ದಾಖಲೆಯ 5 ಗಂಟೆಗಳಲ್ಲಿ ಮೂರು ವಿಭಿನ್ನ ಪ್ರಕರಣಗಳಲ್ಲಿ 9 ಕೆಜಿಗೂ ಹೆಚ್ಚು ಕಳ್ಳಸಾಗಣೆಯಾದ ಚಿನ್ನವನ್ನು ಬೆಂಗಳೂರಿನ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

ಕೆಐಎ ಟರ್ಮಿನಲ್ 2ನಲ್ಲಿ ರಾಮನ ಸ್ಮರಣೆ ಗೀತೆ, ನೃತ್ಯ: ಚರ್ಚೆ ಹುಟ್ಟುಹಾಕಿದ ವಿಡಿಯೋ!
ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್ 2 ನಲ್ಲಿ ಕೆಲ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ರಾಮನ ಕುರಿತು ಹಾಡು ಹಾಗೂ ನೃತ್ಯ ಮಾಡಿದ್ದು, ಈ ಕುರಿತ ವೀಡಿಯೋವೊಂದು ಚರ್ಚೆಗೆ ಗ್ರಾಸವಾಗಿದೆ.

