Karwar

8.7 ಕೋಟಿ ರೂ ಸಾರ್ವಜನಿಕ ಹಣ ನೀರು ಪಾಲು: ಸಂಪರ್ಕ ರಸ್ತೆಯೇ ಇಲ್ಲದೆ ಅನಾಥವಾಗಿ ನಿಂತಿದೆ ಕಾರವಾರ ಹೆದ್ದಾರಿ ಸೇತುವೆ, ಸರ್ಕಾರದ ಯಡವಟ್ಟು ಎತ್ತಿ ತೋರಿಸಿದ CAG..!
2024ರ ಮಾರ್ಚ್‌ಗೆ ಅಂತ್ಯಗೊಂಡ ವರ್ಷದ ಸಿಎಜಿ ಅನುಸರಣೆ ಲೆಕ್ಕಪರಿಶೋಧನಾ ವರದಿಯಲ್ಲಿ ಲೋಕೋಪಯೋಗಿ ಇಲಾಖೆ ರಸ್ತೆ ಹಾಗೂ ಸೇತುವೆ ಕಾಮಗಾರಿಗಳ ಯೋಜನೆ ಮತ್ತು ಅನುಷ್ಠಾನದಲ್ಲಿ ಹಲವು ಲೋಪಗಳನ್ನು ಎತ್ತಿ ತೋರಿಸಲಾಗಿದೆ.

ಪುತ್ರನಿಗೆ ಅಪಘಾತ: ಪರಸ್ಪರ ಆರೋಪ-ಪ್ರತ್ಯಾರೋಪ; ನೊಂದು ದಂಪತಿ ಆತ್ಮಹತ್ಯೆ
ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಅವರ ಪುತ್ರನಿಗೆ ತಲೆಗೆ ಗಾಯವಾಗಿತ್ತು. ಕೂಡಲೇ ಆತನನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (KIMS) ದಾಖಲಿಸಲಾಗಿತ್ತು.

ಕಾರವಾರ: ಅರಬೈಲ್ ಘಾಟ್‌ನಲ್ಲಿ ಲಾರಿ-ಕ್ರೂಸರ್ ಮುಖಾಮುಖಿ ಡಿಕ್ಕಿ; 7 ಯುವಕರು ಸ್ಥಳದಲ್ಲೇ ಸಾವು; Video
ಅಪಘಾತಕ್ಕೊಳಗಾದ ತೂಫಾನ್ ಕ್ರೂಸರ್ ವಾಹನದಲ್ಲಿದ್ದ (KA 19 AA 5920) ಚಾಲಕ ಸೇರಿ ಒಟ್ಟು 9 ಜನರು ಧಾರವಾಡ ಮೂಲದವರಾಗಿದ್ದಾರೆ. ಇವರೆಲ್ಲರೂ ಸ್ವಿಗ್ಗಿ ಸಂಸ್ಥೆಯಲ್ಲಿ ಪಾರ್ಟ್ ಟೈಮ್ ಡೆಲಿವರಿ ಬಾಯ್ಸ್ ಆಗಿ ಕೆಲಸ ಮಾಡುತ್ತಿದ್ದರು

ಕಾರವಾರ: ಮಚ್ಚುಮಂಜ ಎಂಬಾತ ಪೊಲೀಸರ ಕೊರಳ ಪಟ್ಟಿ ಹಿಡಿದು ನಿಂದಿಸಿದರೂ ಜೀಪಿನಲ್ಲೇ ಕುಳಿತಿದ್ದ PSI ಅಮಾನತು!
ನಡುರಸ್ತೆಯಲ್ಲಿ ಸಾರ್ವಜನಿಕರ ಎದುರೇ ಪೊಲೀಸರ ಕೊರಳ ಪಟ್ಟಿ ಹಿಡಿದು, ಅವಾಚ್ಯ ಶಬ್ದಗಳಿಂದ ಮಾಜಿ ರೌಡಿ ಶೀಟರ್ 'ಮಚ್ಚುಮಂಜ' ಎಂಬಾತ ನಿಂದಿಸಿದರೂ ಸಹ ಜೀಪ್ನಲ್ಲೇ ಕುಳಿತು ನೋಡುತ್ತಿದ್ದ PSI ಅವರನ್ನು ಅಮಾನತು ಮಾಡಲಾಗಿದೆ.

ಕಾರವಾರ: ಕೆಎಸ್‌ಆರ್‌ಟಿಸಿ ಬಸ್-ಕಾರು ಡಿಕ್ಕಿ; ಭೀಕರ ಅಪಘಾತದಲ್ಲಿ ವೆಬ್ ಡೆವಲಪರ್ ಸಾವು
ಮೃತ ವ್ಯಕ್ತಿಯನ್ನು ವೆಬ್ ಡೆವಲಪರ್ ಮತ್ತು ಮ್ಯಾಕ್ಸ್ ಇನ್ಫೋಟೆಕ್ ಸಂಸ್ಥಾಪಕ ಮುಖೇಶ್ ಕೃಷ್ಣ ಶೆಟ್ಟಿ ಎಂದು ಗುರುತಿಸಲಾಗಿದೆ.

ಒಂದೇ ದಿನದಲ್ಲಿ 6 ಹೆಬ್ಬಾವುಗಳ ರಕ್ಷಣೆ: ಹೊಸ ದಾಖಲೆ ಬರೆದ ಕಾರವಾರ ಅರಣ್ಯ ಸಿಬ್ಬಂದಿ!
ಉತ್ತರ ಕನ್ನಡ ಜಿಲ್ಲೆ ಕಾರವಾರ ತಾಲೂಕಿನ ಕಠಿಣಕೋಣ ಗ್ರಾಮದ ನಿವಾಸಿ ವಿಜಯ ತಳೇಕರ ಅವರ ಮನೆಯ ಆವರಣದಲ್ಲಿ ಕೆಲವು ದಿನಬಳಕೆಯ ವಸ್ತುಗಳನ್ನು ದಾಸ್ತಾನು ಮಾಡಲಾಗಿತ್ತು.

ಕಾರವಾರ: ಹಿಂದೂ ಮನೆಗೆ ಬೆಂಕಿ, ಮುಸ್ಲಿಂ ಯುವಕನ ಬಂಧನ!
ಕುಮಟಾ ತಾಲೂಕಿನ ದೇವರಹಕ್ಕಲ ಗ್ರಾಮದಲ್ಲಿನ ಜಾತ್ರೆಗೆಂದು ದಿನಕರ್ ಕುಟುಂಬ ಸಮೇತರಾಗಿ ತೆರಳಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

Karwar: ಬಸ್ ನಲ್ಲಿ ಯುವತಿಗೆ ಲೈಂಗಿಕ ಕಿರುಕುಳ, ಕಾಮುಕನಿಗೆ ಧರ್ಮದೇಟು.. Video Viral
ಕಾರವಾರದಿಂದ ಅಂಕೋಲಾಗೆ ತೆರಳುತ್ತಿದ್ದ ಯುವತಿ ಬಸ್ ನಲ್ಲಿ ತಮ್ಮ ಸೀಟ್ ನಲ್ಲಿ ನಿದ್ರಿಸುತ್ತಿದ್ದರು. ಸಂತ್ರಸ್ಥ ಯುವತಿ ಕಾರವಾರದಿಂದ ಅಂಕೋಲಾ ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು.


