ಪುತ್ರನಿಗೆ ಅಪಘಾತ: ಪರಸ್ಪರ ಆರೋಪ-ಪ್ರತ್ಯಾರೋಪ; ನೊಂದು ದಂಪತಿ ಆತ್ಮಹತ್ಯೆ
ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಅವರ ಪುತ್ರನಿಗೆ ತಲೆಗೆ ಗಾಯವಾಗಿತ್ತು. ಕೂಡಲೇ ಆತನನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (KIMS) ದಾಖಲಿಸಲಾಗಿತ್ತು.

ಶಿರವಾಡ (ಉತ್ತರ ಕನ್ನಡ): ಮಗನ ಅಪಘಾತಕ್ಕೆ ಪರಸ್ಪರ ಆರೋಪ-ಪ್ರತ್ಯಾರೋಪ ಮಾಡಿಕೊಂಡು ಜಗಳವಾಡುತ್ತಿದ್ದ ದಂಪತಿ ಆತ್ಮಹತ್ಯೆಗೆ ಶರಣಾದ ಪರಿಣಾಮ, ಹದಿಹರೆಯದ ಮಗ ಅನಾಥನಾದ ಹೃದಯವಿದ್ರಾವಕ ಘಟನೆ ಕಾರವಾರ ಹೊರವಲಯದ ಶಿರವಾಡದಲ್ಲಿ ನಡೆದಿದೆ.
ವಿಜಯ ವಡ್ಡರ್ (36ವ) ಭಾನುವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರೆ, ಆಳೇವಾಡ–ಕೋಡಿಬಾಗ್ ಹಿನ್ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಅವರ ಪತಿ ವೆಂಕಟೇಶ್ ವಡ್ಡರ್ (38ವ) ಅವರ ಮೃತದೇಹ ಮಂಗಳವಾರ ಪತ್ತೆಯಾಗಿದೆ.
ಸ್ನೇಹಿತನೊಂದಿಗೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಅವರ ಪುತ್ರ ತಲೆಗೆ ಗಾಯವಾಗಿತ್ತು. ಕೂಡಲೇ ಆತನನ್ನು ಕಾರವಾರ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗೆ (KIMS) ದಾಖಲಿಸಲಾಗಿತ್ತು. ವೈದ್ಯರು ಸಣ್ಣ ಶಸ್ತ್ರಚಿಕಿತ್ಸೆ ನಡೆಸಿದ್ದು, ಆತನಿಗೆ 18 ವರ್ಷ ತುಂಬಿದ ಬಳಿಕ ಮತ್ತೊಂದು ಶಸ್ತ್ರಚಿಕಿತ್ಸೆ ಮಾಡಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ವೆಂಕಟೇಶ್ ಅವರು ಊರಿನಲ್ಲಿ ಇರಲಿಲ್ಲ. ತಮ್ಮ ಪುತ್ರ ಅಪಘಾತಕ್ಕೀಡಾಗಿರುವ ವಿಷಯ ತಿಳಿದು ವಾಪಸ್ ಬಂದ ಅವರು, ಮಗನನ್ನು ಸರಿಯಾಗಿ ನೋಡಿಕೊಳ್ಳಲಿಲ್ಲ ಎಂದು ಪತ್ನಿ ವಿಜಯಾ ಅವರನ್ನು ದೂಷಿಸಿದ್ದರು. ಈಗಾಗಲೇ ಮಗನ ಅಪಘಾತದಿಂದ ಖಿನ್ನರಾಗಿದ್ದ ವಿಜಯಾ ಅವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡರು.
ವಿಜಯಾ ಅವರ ಆತ್ಮಹತ್ಯೆಗೆ ವೆಂಕಟೇಶ್ ಅವರೇ ಕಾರಣ ಎಂದು ಸಂಬಂಧಿಕರು ಆರೋಪಿಸಿದ್ದಾರೆ. ಬಳಿಕ ವೆಂಕಟೇಶ್ ಅವರು ಆಸ್ಪತ್ರೆಯಿಂದ ಹೊರಟು, ಪತ್ನಿಗೆ ಆದ ಗತಿಯೇ ತಮಗೂ ಆಗಲಿದೆ ಎಂದು ಹೇಳಿದ್ದರು. ಮಂಗಳವಾರ ಆಳೇವಾಡ–ಕೋಡಿಬಾಗ್ ಹಿನ್ನೀರಿನಲ್ಲಿ ಮೃತದೇಹವೊಂದು ತೇಲುತ್ತಿರುವುದನ್ನು ಕೆಲವರು ಗಮನಿಸಿದ್ದಾರೆ. ಬಳಿಕ ಅದು ವೆಂಕಟೇಶ್ ಅವರ ಮೃತದೇಹ ಎಂಬುದು ಗುರುತಿಸಲಾಯಿತು.
ಆತ್ಮಹತ್ಯೆಯ ಆಲೋಚನೆಗಳು ಕಾಡುತ್ತಿದ್ದರೆ, ಸ್ನೇಹಿತರು ಅಥವಾ ಕುಟುಂಬದವರ ಬಗ್ಗೆ ಆತಂಕವಿದ್ದರೆ ಅಥವಾ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಸಹಾಯ ಪಡೆಯಿರಿ. ಟೆಲಿ-ಮಾನಸ್ 14416 (24x7 ಲಭ್ಯ) ಅಥವಾ ಸ್ನೇಹ ಫೌಂಡೇಶನ್ 044-24640050, ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್‌ನ iCall ಸಹಾಯವಾಣಿ 022-25521111 (ಸೋಮವಾರದಿಂದ ಶನಿವಾರ, ಬೆಳಗ್ಗೆ 8ರಿಂದ ರಾತ್ರಿ 10ರವರೆಗೆ) ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.



