Karnataka

ಕಾವೇರಿ ಜಲ ವಿವಾದ: ಕರ್ನಾಟಕದಿಂದ 9,000 ಕ್ಯೂಸೆಕ್ ನೀರು ಬಿಡುಗಡೆಯಾದರೂ, ಕೊರತೆ ಇದೆ-ತಮಿಳುನಾಡು; ಸೆಪ್ಟೆಂಬರ್ 15ಕ್ಕೆ ಮತ್ತೆ ವಿಚಾರಣೆ
ಸಂಚಿತ ಕೊರತೆಯನ್ನು ನೀಗಿಸಲು ತಮಿಳುನಾಡಿನ ಕೋರಿಕೆಯನ್ನು ಮರುಪರಿಶೀಲಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ಅವರು ಸುಪ್ರೀಂ ಕೋರ್ಟ್ ನ್ನು ಒತ್ತಾಯಿಸಿದರು.

ನೇಪಾಳದಲ್ಲಿ ಹಠಾತ್ ಪ್ರವಾಹ: ಕರ್ನಾಟಕದ 13 ಮಂದಿ ನಾಪತ್ತೆ; ಇನ್ನೂ ಸುಳಿವು ಸಿಕ್ಕಿಲ್ಲ ಎಂದ ಸಿಎಂ ಡಿ.ಕೆ ಶಿವಕುಮಾರ್
ಒಟ್ಟು 28 ಮಂದಿಯ ಪೈಕಿ ನಾಲ್ವರು ಸುರಕ್ಷಿತವಾಗಿರುವುದು ಖಚಿತಪಟ್ಟಿದೆ ಮತ್ತು ಉಳಿದ 24 ಮಂದಿಯ ಪತ್ತೆಗೆ ಪ್ರಯತ್ನಗಳು ನಡೆಯುತ್ತಿವೆ ಎಂದು ಶುಕ್ರವಾರ ರಾಜ್ಯ ಸರ್ಕಾರ ತಿಳಿಸಿತ್ತು.

ಗೃಹಲಕ್ಷ್ಮಿ ಯೋಜನೆಗೆ 3 ವರ್ಷ: 'ಇದು ಮಹಿಳಾ ಸಬಲೀಕರಣವಲ್ಲ, ದೊಡ್ಡ ಹಗರಣ'; ಆರ್. ಅಶೋಕ್ ವಾಗ್ದಾಳಿ
ಕಳೆದ ಮೂರು ವರ್ಷಗಳಿಂದ ಗೃಹಲಕ್ಷ್ಮಿ ಯೋಜನೆಯ ಹೆಸರಿನಲ್ಲಿ ಸರ್ಕಾರ ಭ್ರಷ್ಟಾಚಾರ, ಅಕ್ರಮ ಮತ್ತು ಹಣದ ದುರುಪಯೋಗದಲ್ಲಿ ತೊಡಗಿದೆ. ಇಂತಹ ಪರಿಸ್ಥಿತಿಯಲ್ಲಿ ಮೂರನೇ ವರ್ಷಾಚರಣೆಯನ್ನು ಯಾವ ಆಧಾರದ ಮೇಲೆ ಆಚರಿಸಲಾಗುತ್ತಿದೆ?

NEET ಹಗರಣಕ್ಕೆ ಬ್ರೇಕ್ ಹಾಕಲು ರಾಜ್ಯ ಸರ್ಕಾರ ಸನ್ನದ್ಧ: ಮತ್ತೆ KEA ಮೂಲಕವೇ ಪರೀಕ್ಷೆ ನಡೆಸಲು ಮುಂದು..?
ರಾಜ್ಯಮಟ್ಟದಲ್ಲಿ ಪ್ರವೇಶ ಪರೀಕ್ಷೆಗಳನ್ನು ನಡೆಸುವಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ಪಾರದರ್ಶಕವಾಗಿರುವ ಸಿಇಟಿ ವ್ಯವಸ್ಥೆ ವೀರಪ್ಪ ಮೊಯ್ಲಿ ಅವರ ಆಡಳಿತದ ಅವಧಿಯಲ್ಲೇ ಜಾರಿಗೆ ಬಂದಿತ್ತು. ಯಾವುದೇ ಅಡೆತಡೆಗಳಿಲ್ಲದೆ ಪರೀಕ್ಷೆಗಳನ್ನು ನಡೆಸುವ ಪರಿಣತಿ ನಮ್ಮಲ್ಲಿದೆ.

ಮೈಸೂರು ದಸರಾ: ಗಜಪಡೆ ತೂಕ ಪರೀಕ್ಷೆ ಪೂರ್ಣ; ತೂಕದಲ್ಲಿ 9 ಆನೆಗಳ ಪೈಕಿ ಶ್ರೀಕಾಂತನೇ ನಂ.1
ಮೊದಲ ತಂಡದಲ್ಲಿ ಶ್ರೀಕಾಂತ 5,770 ಕೆ.ಜಿ. ತೂಕದೊಂದಿಗೆ ಅತಿ ಹೆಚ್ಚು ತೂಕ ಹೊಂದಿರುವ ಆನೆಯಾಗಿ ಹೊರಹೊಮ್ಮಿದೆ. ನಂತರದ ಸ್ಥಾನದಲ್ಲಿ ಏಕಲವ್ಯ 5,610 ಕೆ.ಜಿ. ತೂಕ ಹೊಂದಿದೆ.

ಬರಪೀಡಿತ ತಾಲೂಕುಗಳ ಪಟ್ಟಿಗೆ ಇನ್ನಷ್ಟು ತಾಲೂಕು ಸೇರ್ಪಡೆ: DCM ಡಾ. ಜಿ.ಪರಮೇಶ್ವರ್
ಆಗಸ್ಟ್ ಅಂತ್ಯದ ವೇಳೆಗೆ ಅಥವಾ ಸೆಪ್ಟೆಂಬರ್ ಮೊದಲ ವಾರದಲ್ಲಿ ರಾಜ್ಯದ ಬರ ಪರಿಸ್ಥಿತಿಗೆ ಸಂಬಂಧಿಸಿದ ಸಮಗ್ರ ಮನವಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗುವುದು. ಬೆಳೆ ಹಾನಿಯ ಅಂದಾಜು ಕಾರ್ಯ ನಡೆಯುತ್ತಿದ್ದು, ಅದರ ವರದಿ ಆಧರಿಸಿ ಬರ ಪರಿಹಾರದ ಮನವಿ ಸಿದ್ಧಪಡಿಸಲಾಗುವುದು.
BJP ಪಾದಯಾತ್ರೆಗೆ ಕಾಂಗ್ರೆಸ್ ಕೌಂಟರ್: ನಾಗೇಂದ್ರ ಬೆನ್ನಿಗೆ ನಿಂತ 'ಕೈ' ಪಡೆ; ST ಸಮುದಾಯದ ಅಸ್ತ್ರ ಪ್ರಯೋಗಕ್ಕೆ ಮುಂದು..!
ತಾವು ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಅವಕಾಶ ನೀಡುವಂತೆ ನಾಗೇಂದ್ರ ಪಕ್ಷದ ನಾಯಕತ್ವಕ್ಕೆ ಮನವಿ ಮಾಡಿದ್ದು, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದರೆ ಬಿಜೆಪಿಯನ್ನು ರಾಜಕೀಯವಾಗಿ ಎದುರಿಸಲು ಸಾಧ್ಯವಾಗಲಿದೆ ಎಂಬುದು ಅವರ ವಾದವಾಗಿದೆ ಎನ್ನಲಾಗಿದೆ.

ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಬದ್ಧ: ಸಿಎಂ ಡಿ.ಕೆ ಶಿವಕುಮಾರ್
ತೇಗದ ಮರಗಳ ಬೆಳೆಸುವಿಕೆಯನ್ನು ಉತ್ತೇಜಿಸಲು ಸರ್ಕಾರ ‘ತೇಗ ಸಿರಿ’ ಯೋಜನೆ ಜಾರಿಗೆ ತರಲು ಉದ್ದೇಶಿಸಿದ್ದು, ಈ ಯೋಜನೆಯಡಿ ಪ್ರತಿವರ್ಷ ಒಂದು ಕೋಟಿ ಮರಗಳನ್ನು ನೆಡುವ ಗುರಿ ಹೊಂದಲಾಗಿದೆ.

ಮೇಕೆದಾಟು ಯೋಜನೆ: ಕೇಂದ್ರದ ಬಾಗಿಲು ತಟ್ಟಲು ರಾಜ್ಯ ಸರ್ಕಾರ ಸಜ್ಜು; ಪ್ರತಿಪಕ್ಷಗಳನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳುತ್ತೇವೆ- ಡಿ.ಕೆ ಶಿವಕುಮಾರ್..!
ಗ್ರಾಮೀಣ ರೈತರು ಮತ್ತಷ್ಟು ಬಲಿಷ್ಠರಾಗಬೇಕು. ನಮ್ಮ ಆಹಾರ ಭದ್ರತೆಗೆ ಕನ್ನಂಬಾಡಿ (ಕೆಆರ್‌ಎಸ್) ಜಲಾಶಯ ಎಷ್ಟು ಮಹತ್ವದ್ದೋ, ಅದೇ ರೀತಿ ಕಾವೇರಿ ನೀರನ್ನು ಸಂರಕ್ಷಿಸುವ ಕೆಲಸ ಮಾಡಬೇಕು.

