Karnataka

ಇನ್ನೂ 23 ತಾಲೂಕುಗಳು ಬರಪೀಡಿತ ಪಟ್ಟಿಗೆ ಸೇರ್ಪಡೆ; ಒಟ್ಟು ಸಂಖ್ಯೆ 124ಕ್ಕೆ ಏರಿಕೆ
ಸ್ಥಳ ಪರಿಶೀಲನಾ ಪ್ರಕ್ರಿಯೆ ಮತ್ತು KSNDMC ಸಲ್ಲಿಸಿದ ಸಮಗ್ರ ವರದಿಯ ಆಧಾರದ ಮೇಲೆ ಈಗ ಹೆಚ್ಚುವರಿಯಾಗಿ 23 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮದ್ಯದ ಅಮಲಿನಲ್ಲಿ ಜಡ್ಜ್ ಎದುರೇ ರಂಪಾಟ: ಜೈಲು ಶಿಕ್ಷೆ ವಿಧಿಸಿ ಕುಡುಕ ವಕೀಲನಿಗೆ ತಕ್ಕ ಶಾಸ್ತಿ ಮಾಡಿದ ಹೈಕೋರ್ಟ್..!
ಆರೋಪಿಯ ವರ್ತನೆಯನ್ನು ನಾವು ಗಮನಿಸಿದ್ದೇವೆ. ಆತ ಮಾಡಿದ ಆರಂಭಿಕ ನ್ಯಾಯಾಂಗ ನಿಂದನೆ ಕೃತ್ಯಕ್ಕೆ ಯಾವುದೇ ಪಶ್ಚಾತ್ತಾಪ ವ್ಯಕ್ತಪಡಿಸುವ ಬದಲು, ತನ್ನ ಕೃತ್ಯಗಳನ್ನು ಸಮರ್ಥಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.

ಎಲೆಕ್ಟ್ರಾನಿಕ್ಸ್ ಕ್ಷೇತ್ರದ ಎಲ್ಲಾ ಚಟುವಟಿಕೆಗಳು ರಾಜ್ಯದಲ್ಲೇ ನಡೆಯಬೇಕು: ಎಂ ಬಿ ಪಾಟೀಲ್
ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿರುವ `ಕರ್ನಾಟಕ ವಿದ್ಯುನ್ಮಾನ ನಾಯಕತ್ವ ಸಮಾವೇಶ’ದಲ್ಲಿ ಮಾತನಾಡಿದರು.

ರಾಜ್ಯದ ಬರಪೀಡಿತ ತಾಲೂಕುಗಳ ರೈತರಿಗೆ ಬಿಗ್ ರಿಲೀಫ್: ಬ್ಯಾಂಕ್ ಸಾಲ ಮರುಪಾವತಿಯಲ್ಲಿ ಭಾರಿ ವಿನಾಯಿತಿ ಘೋಷಣೆ!
ಸಾಲ ಮರುಪಾವತಿಗೆ 12 ತಿಂಗಳ ಕಾಲಾವಕಾಶ (ಮೊರಟೋರಿಯಂ) ನೀಡುವುದರ ಜೊತೆಗೆ, ಒಟ್ಟು ಸಾಲ ಮರುಪಾವತಿಯ ಅವಧಿಯನ್ನು ವಿಸ್ತರಿಸಿ ರೈತರಿಗೆ ನೆರವಾಗಲು ನಿರ್ಧರಿಸಲಾಗಿದೆ.

ರಾಜ್ಯದಲ್ಲಿ ಲೋಡ್ ಶೆಡ್ಡಿಂಗ್ ಅನಿವಾರ್ಯ; 101 ತಾಲೂಕುಗಳಲ್ಲಿ ಬರದಿಂದ 18 ಸಾವಿರ ಕೋಟಿ ರೂ ನಷ್ಟ: ಡಾ. ಜಿ.ಪರಮೇಶ್ವರ್; Video
ರಾಜ್ಯದ ಬರ ಪರಿಸ್ಥಿತಿ ಕುರಿತು ಮಾತನಾಡಿದ ಡಾ ಪರಮೇಶ್ವರ್, ಈಗಾಗಲೇ 101 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ನಾಳೆ ಮತ್ತೊಂದು ಅಧಿಸೂಚನೆ ಹೊರಬರುವ ಸಾಧ್ಯತೆ ಇದ್ದು, ಹೆಚ್ಚುವರಿ ತಾಲೂಕುಗಳನ್ನು ಕೂಡ ಬರಪೀಡಿತ ತಾಲೂಕುಗಳ ಪಟ್ಟಿಗೆ ಸೇರಿಸಲಾಗುವುದು ಎಂದರು.

ಅಪೂರ್ಣ, ಪಾಳು ಬಿದ್ದ ಕಟ್ಟಡಗಳು: ಕೊರಗ ಸಮುದಾಯದ ಕುಟುಂಬಗಳಿಗೆ ಇನ್ನೂ 'ಸುರಕ್ಷಿತ ಮನೆ' ಯಾಕಿಲ್ಲ ಗೊತ್ತಾ?
ಒಂದು ಶತಮಾನದ ನಂತರವೂ, 'ವಿಶೇಷವಾಗಿ ದುರ್ಬಲ ಬುಡಕಟ್ಟು ಗುಂಪು' (PVTG) ಎಂದು ವರ್ಗೀಕರಿಸಲಾದ ಅನೇಕ ಕೊರಗ ಕುಟುಂಬಗಳು, ಘನತೆಯ ಅತ್ಯಂತ ಮೂಲಭೂತ ಸಂಕೇತವಾದ 'ಸುರಕ್ಷಿತ ಮನೆ'ಗಾಗಿ ಇನ್ನೂ ಪರದಾಡುತ್ತಿವೆ.

ಪೂರ್ಣಗೊಂಡ ಸಮೀಕ್ಷೆ ಕಾರ್ಯ: ರಾಜ್ಯದಲ್ಲಿ ಎಷ್ಟು ಕೆರೆಗಳಿವೆ ಗೊತ್ತಾ?
ಸಮೀಕ್ಷೆಯು ರಾಜ್ಯಾದ್ಯಂತ 14,18,894 ಅಂತರ್ಜಲ ಯೋಜನೆಗಳು, 77,573 ಮೇಲ್ಮೈ ಜಲ ಯೋಜನೆಗಳು ಮತ್ತು 38,960 ಜಲಮೂಲ(ಕೆರೆಗಳು) ದಾಖಲಿಸಿದೆ

‘ಧರ್ಮಕ್ಕಿಂತ ಮಾನವೀಯತೆ ಮುಖ್ಯ’: 18 ವರ್ಷಗಳಿಂದ ಗಣೇಶೋತ್ಸವಕ್ಕೆ ಮುಸ್ಲಿಂ ಮಹಿಳೆ ಸಾರಥ್ಯ; ಹೋಮ-ಹವನಗಳಲ್ಲಿ ಭಾಗಿ
ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರ ಪಟ್ಟಣದ ಮುಸ್ಲಿಂ ಮಹಿಳೆಯೊಬ್ಬರು ಕಳೆದ 18 ವರ್ಷಗಳಿಂದ ಗಣೇಶೋತ್ಸವ ಸಮಿತಿಯ ನೇತೃತ್ವ ವಹಿಸುವ ಮೂಲಕ ಧಾರ್ಮಿಕ ಸಾಮರಸ್ಯಕ್ಕೆ ಮಾದರಿಯಾಗಿದ್ದಾರೆ.

Kalaburagi: ಚಿಕ್ಕಮ್ಮನ ಜೊತೆ ಲವ್; ಅಕ್ಕನ ಮಗನ ಜೊತೆ ಅಕ್ರಮ ಸಂಬಂಧ; ದುರಂತ ಅಂತ್ಯ!
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸಂಕನೂರು ಬೆಟ್ಟದಲ್ಲಿ ಚಿಕ್ಕಮ್ಮ ಮತ್ತು ಅಕ್ಕನ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

