karnataka police

ಆಟೋ ಚಾಲಕರು ದುಪ್ಪಟ್ಟು ಹಣ ಕೇಳಿದರೆ ದೂರು ನೀಡಿ: ಪೊಲೀಸರು!
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ಕರೆ ನೀಡಿರುವ ಕರ್ನಾಟಕ ಬಂದ್ ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ರಾಜಧಾನಿ ಬೆಂಗಳೂರಿನ ಹಲವೆಡೆ ಕೆಲ ಆಟೋ ಚಾಲಕರು ದುಬಾರಿ ಹಣ ಕೇಳುತ್ತಿರುವ ಕುರಿತು ವರದಿಯಾಗಿದೆ.

ಕರ್ನಾಟಕ ಬಂದ್: ಕೋಲಾರ ಕಲ್ಲು ತೂರಾಟಕ್ಕೆ ಯತ್ನಿಸಿದ 8 ಮಂದಿ ಬಂಧನ!
ಬಯಲು ಸೀಮೆಗೆ ಶಾಶ್ವತ ನೀರಾವರಿ, ಮಹದಾಯಿ-ಕಳಸಾ ಬಂಡೂರಿ ಯೋಜನೆಯ ತ್ವರಿತ ಜಾರಿ, ಮೇಕೆದಾಟು ಯೋಜನೆ ಜಾರಿ, ರೈತರ ಸಾಲ ಮನ್ನಾ ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ವಿವಿಧ ಕನ್ನಡ ಪರ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕೋಲಾರದಲ್ಲಿ ವ್ಯಾಪಕವಾಗಿದೆ.

"ಪ್ರತಿಷ್ಠೆಯ ಬಂದ್"; ಪರಸ್ಪರ ಕೆಸರೆರಚಾಟದಲ್ಲಿ ಕನ್ನಡಪರ ಸಂಘಟನೆಗಳು!
ಬಯಲು ಸೀಮೆ ಭಾಗಕ್ಕೆ ಕುಡಿಯುವ ನೀರು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಒತ್ತಾಯಿಸಿ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ವಿವಿಧ ಕನ್ನಡಪರ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿರುವಂತೆಯೇ ಕನ್ನಡ ಪರ ಸಂಘಟನೆಗಳಲ್ಲಿನ ಬಿರುಕು ಕೂಡ ಬಟಾ ಬಯಲಾಗಿದೆ.

ಬೆಂಗಳೂರು: ಅಪ್ರಾಪ್ತ ಬಾಲಕಿ ಮೇಲೆ ಸಾಮೂಹಿಕ ಅತ್ಯಾಚಾರ; ಮೂವರ ಬಂಧನ
ರಾಜಧಾನಿ ಬೆಂಗಳೂರಿನಲ್ಲಿ ಮತ್ತೊಂದು ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದ್ದು, ಚಾಟ್ಸ್ ಕೊಡಿಸುವ ನೆಪದಲ್ಲಿ ಅಪ್ರಾಪ್ತ ಬಾಲಕಿಯನ್ನು ಕರೆದೊಯ್ದ ಮೂವರು ದುಷ್ಕರ್ಮಿಗಳು ಸತತ 5 ದಿನಗಳ ಕಾಲ ಸಾಮೂಹಿಕ ಅತ್ಯಾಚಾರವೆಸಗಿರುವ ಘಟನೆ ಬೆಳಕಿಗೆ ಬಂದಿದೆ.

ಕಪಾಟಿನಲ್ಲಿದ್ದ ಮಹಿಳೆ ಶವದ ರಹಸ್ಯ; ಆಸ್ತಿಗಾಗಿ ಮೊಮ್ಮಗನಿಂದಲೇ ಅಜ್ಜಿಯ ಕೊಲೆ?
ನಗರದ ಕೆಂಗೇರಿ ಉಪನಗರದ ಮನೆಯೊಂದರ ಕಪಾಟಿನಲ್ಲಿ ಪತ್ತೆಯಾಗಿದ್ದ ವೃದ್ಧೆಯ ಶವದ ರಹಸ್ಯವನ್ನು ಪೊಲೀಸರು ಬೇದಿಸಿದ್ದು, ಆ ಶವ ಮನೆ ಮಾಲಕಿ 70 ವರ್ಷ ವಯಸ್ಸಿನ ಶಾಂತಲಾ ಅಲಿಯಾಸ್ ಶಾಂತಾಕುಮಾರಿ ಅವರದ್ದು ಎಂದು ತಿಳಿದುಬಂದಿದೆ.

10 ಸಾವಿರ ಹಣಕ್ಕಾಗಿ ಮಗು ಕಿಡ್ನಾಪ್, ವಿಮಾನದಲ್ಲಿ ತೆರಳಿ ಮಗುವಿನ ರಕ್ಷಣೆ ಮಾಡಿದ ಬೆಂಗಳೂರು ಪೊಲೀಸರು!
ವ್ಯವಹಾರಕ್ಕೆ ಸಂಬಂಧಿಸಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೂರು ವರ್ಷದ ಮಗನನ್ನು ಅಪಹರಿಸಿದ ಪ್ರಕರಣ ಸುಖಾಂತ್ಯ ಕಂಡಿದ್ದು, ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

ವಿದ್ಯಾರ್ಥಿನಿಯರ ಒಳಉಡುಪು ಧರಿಸುತ್ತಿದ್ದ ವಿಕೃತಕಾಮಿ ಅಬು ತಾಲೀಮ್ ಬಂಧನ!
ನಗರದ ಮಹಾರಾಣಿ ಕಾಲೇಜಿನ ಹಾಸ್ಟೆಲ್ ಗೆ ನುಗ್ಗಿ ವಿದ್ಯಾರ್ಥಿನಿಯರ ಉಳಉಡುಪುಗಳನ್ನು ಧರಿಸಿ ಓಡಾಡುತ್ತಿದ್ದ ವಿಕೃತಕಾಮಿಯನ್ನು ಬಂಧಿಸುವಲ್ಲಿ ಕೊನೆಗೂ ಪೊಲೀಸರು ಯಶಸ್ವಿಯಾಗಿದ್ದಾರೆ.

ನನ್ನ ಮೇಲೆ ಹಲ್ಲೆ ಮಾಡಿದ್ದು ಇವನೇ: ಎಟಿಎಂ ದಾಳಿಕೋರನ ಗುರುತಿಸಿದ ಜ್ಯೋತಿ ಉದಯ್
ನಗರದ ಎನ್ ಆರ್ ವೃತ್ತದಲ್ಲಿರುವ ಕಾರ್ಪೊರೇಷನ್ ಬ್ಯಾಂಕ್ ಎಟಿಎಂನಲ್ಲಿ ಜ್ಯೋತಿ ಉದಯ್ ಅವರ ಮೇಲೆ ಭೀಕರ ಹಲ್ಲೆ ನಡೆಸಿ ಪರಾರಿಯಾಗಿದ್ದ ಆರೋಪಿ ಮಧುಕರ್ ರೆಡ್ಡಿ ಅಲಿಯಾಸ್ ಮದನ್ ರೆಡ್ಡಿಯನ್ನು ಸಂತ್ರಸ್ತೆ ಜ್ಯೋತಿ ಉದಯ್ ಅವರು ಗುರುತಿಸಿದ್ದಾರೆ.

ಮತ್ತೋರ್ವ ವಿಚಾರವಾದಿ ಹತ್ಯೆಗೆ ಸಂಚು; ಮಂಗಳೂರಿನಲ್ಲಿ ನರೇಂದ್ರ ನಾಯಕ್ ಹತ್ಯೆಗೆ ಯತ್ನ!
ಖ್ಯಾತ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಹತ್ಯೆಗೆ ಯತ್ನ ನಡೆಸಿರುವ ಘಟನೆ ಮಂಗಳೂರಿನ ಉರ್ವದಲ್ಲಿ ನಡೆದಿದೆ ಎಂದುತಿಳಿದುಬಂದಿದೆ.

