ರಾಜ್ಯ

10 ಸಾವಿರ ಹಣಕ್ಕಾಗಿ ಮಗು ಕಿಡ್ನಾಪ್, ವಿಮಾನದಲ್ಲಿ ತೆರಳಿ ಮಗುವಿನ ರಕ್ಷಣೆ ಮಾಡಿದ ಬೆಂಗಳೂರು ಪೊಲೀಸರು!

ವ್ಯವಹಾರಕ್ಕೆ ಸಂಬಂಧಿಸಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೂರು ವರ್ಷದ ಮಗನನ್ನು ಅಪಹರಿಸಿದ ಪ್ರಕರಣ ಸುಖಾಂತ್ಯ ಕಂಡಿದ್ದು, ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಮಡಿಲಿಗೆ ಸೇರಿಸಿದ್ದಾರೆ.

10 ಸಾವಿರ ಹಣಕ್ಕಾಗಿ ಮಗು ಕಿಡ್ನಾಪ್, ವಿಮಾನದಲ್ಲಿ ತೆರಳಿ ಮಗುವಿನ ರಕ್ಷಣೆ ಮಾಡಿದ ಬೆಂಗಳೂರು ಪೊಲೀಸರು!
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ವ್ಯವಹಾರಕ್ಕೆ ಸಂಬಂಧಿಸಿದ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ಸ್ನೇಹಿತನ ಮೂರು ವರ್ಷದ ಮಗನನ್ನು ಅಪಹರಿಸಿದ ಪ್ರಕರಣ ಸುಖಾಂತ್ಯ ಕಂಡಿದ್ದು, ಮಗುವನ್ನು ಪೊಲೀಸರು ಸುರಕ್ಷಿತವಾಗಿ ಪೋಷಕರ ಮಡಿಲಿಗೆ  ಸೇರಿಸಿದ್ದಾರೆ.

ಹೆಣ್ಣೂರು ನಿವಾಸಿ ಇಬಾದ್‌ ರೆಹಮತ್‌ ಅವರ ಮೂರು ವರ್ಷದ ಪುತ್ರನನ್ನು ಬೆಂಗಳೂರು ಪೊಲೀಸರು ರಕ್ಷಿಸಿದ್ದು, ಇದೀಗ ಪುಟ್ಟ ಮಗು ತನ್ನ ಪೋಷಕರ ಮಡಿಲು ಸೇರಿದೆ. ಅಂತೆಯೇ ಅಪಹರಣ ಮಾಡಿದ್ದ ಆರೋಪಿ ಉತ್ತರ​ಪ್ರದೇಶ  ಮೂಲದ ಶಂಶಾದ್‌ ಅಲಿ ಪರಾರಿಯಾಗಿದ್ದು, ಆತನ ಬಂಧ​ನಕ್ಕೆ ಬಲೆ ಬೀಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಏನಿದು ಘಟನೆ?
ಆರೋಪಿ ಶಂಶಾದ್‌ ಅಲಿ ಮತ್ತು ರೆಹಮತ್‌ ಮೂಲತಃ ಉತ್ತರಪ್ರದೇಶದವರಾಗಿದ್ದು, ಇಬ್ಬರು ಸ್ನೇಹಿತರಾಗಿದ್ದಾರೆ. ಕೆಲ ವರ್ಷಗಳ ಹಿಂದೆ ನಗರಕ್ಕೆ ಬಂದಿದ್ದ ಇವರು ಗುತ್ತಿಗೆ ಪಡೆದು ಪೇಂಟಿಂಗ್‌ ಕೆಲಸ ಮಾಡಿಕೊಂಡಿದ್ದರು. ಇಬ್ಬರು ಆಯೂಬ್‌ ಎಂಬುವರ ಬಳಿ ಗುತ್ತಿಗೆ ಪಡೆದು ಪೇಂಟಿಂಗ್‌ ಮಾಡಿಕೊಂಡಿದ್ದರು. ಆಯೂಬ್‌ ಖಾನ್‌ ಬಳಿ ರೆಹಮತ್‌. 20 ಸಾವಿರ ಹಣ ಪಡೆದು, ಸ್ನೇಹಿತ ಶಂಶಾದ್‌ ಗೆ ಹತ್ತು ಸಾವಿರ ಮಾತ್ರ ಕೊಟ್ಟಿದ್ದಾರೆ, ಶಂಶಾದ್‌ ಕೇಳಿದಾಗ 10  ಸಾವಿರ ಪಡೆರುವುದಾಗಿ ಹೇಳಿ ರೆಹಮತ್‌ ಮೋಸ ಮಾಡಿದ್ದರು. ಮಾಲೀಕ ಆಯೂಬ್‌ ಗೆ ಕರೆ ಮಾಡಿ ವಿಚಾರಿ​ಸಿ​ದಾಗ 20 ಸಾವಿರ ಹಣವನ್ನು ರೆಹಮತ್‌ ಪಡೆದಿರುವುದಾಗಿ ತಿಳಿಸಿದ್ದರು.

ಇದರಿಂದ ಕೋಪಗೊಂಡ ಆರೋಪಿ ನನ್ನ ಪಾಲಿನ ಹಣ ಕೊಡುವಂತೆ ಸ್ನೇಹಿತನಿಗೆ ತಾಕೀತು ಮಾಡಿದ್ದ. ಸಬೂಬು ಹೇಳಿಕೊಂಡು ಇಬಾದ್‌ ರೆಹಮತ್‌ ಕಾಲ ತಳ್ಳುತ್ತಿದ್ದ. ಕೆರಳಿದ ಶಂಶಾದ್‌ ಸ್ನೇಹಿತನಿಂದ ಹಣ ವಸೂಲಿ  ಮಾಡಬೇಕೆಂದು ಸಂಚು ರೂಪಿಸಿ ಏಪ್ರಿಲ್ 11ರಂದು ರೆಹಮತ್‌ ಜತೆ ಕೆಲಸಕ್ಕೆ ಹೋಗದೆ ಮನೆಯಲ್ಲೇ ಉಳಿದುಕೊಂಡ.  ಸಮಯ ನೋಡಿ ಶಂಶಾದ್ ರೆಹಮತ್‌ ನ ಗಂಡು ಮಗುವನ್ನು ಅಪಹರಿಸಿದ್ದ. ಮಗು ಕಾಣದೆ ಇದ್ದಾಗ  ಪೋಷಕರು ಆತಂಕಗೊಂಡು ಹೆಣ್ಣೂರು ಪೊಲೀಸರಿಗೆ ದೂರು ನೀಡಿದ್ದರು.

 ಏಪ್ರಿಲ್13ರಂದು ರೆಹಮತ್‌ ಗೆ ಕರೆ ಮಾಡಿದ ಆರೋಪಿ ಶಂಶಾದ್‌, 50 ಸಾವಿರ ಹಣ ನೀಡಿದರೆ ಮಗವನ್ನು ಬಿಡುತ್ತೇನೆ. ಇಲ್ಲದಿದ್ದರೆ ನಿನ್ನ ಮಗನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ. ಪೊಲೀಸರು ಆರೋಪಿ ಮೊಬೈಲ್‌  ನಂಬರ್‌ ವಿವರ ಪಡೆದು ಪರಿಶೀಲನೆ ನಡೆಸಿದಾಗ ಹುಬ್ಬಳ್ಳಿಯಲ್ಲಿ ಸಿಗ್ನಲ್‌ ನೀಡಿತು. ರೈಲ್ವೇ ಪೊಲೀಸರ ಸಹಾಯದಿಂದ ಎರಡೂ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸಿದಾಗ ಅಲ್ಲಿಂದ ಪರಾರಿಯಾಗಿದ್ದ. ಬಳಿಕ ಉತ್ತರ ಪ್ರದೇಶದ  ಮುರಾದಾಬಾದ್‌ ಗೆ ನಿಜಾಮುದ್ದೀನ್‌ ರೈಲಿನಲ್ಲಿ ಪ್ರಯಾಣ ಬೆಳೆಸುತ್ತಿರುವುದು ಗೊತ್ತಾಯಿತು. ಆರೋಪಿ ಮುರಾದಾಬಾದ್‌ ಮಲ್ಲಕ್‌ ಪುರದಲ್ಲಿ ಅಡಗಿರುವುದು ತಿಳಿದ ಪೊಲೀಸರು, ಬೆಂಗಳೂರಿನಿಂದ ವಿಮಾನದಲ್ಲಿ ಬಾಲಕನ ತಂದೆ  ಜೊತೆಯಲ್ಲಿ ದೆಹಲಿಗೆ ತೆರಳಿದ್ದರು. ದೆಹಲಿಯಿಂದ ಬಸ್‌ ನಲ್ಲಿ ಮಲ್ಲಕ್‌ ಪುರಕ್ಕೆ ತೆರಳಿ ಸ್ಥಳೀಯ ಪೊಲೀಸರ ಸಹಾಯದಿಂದ ಪಡೆದು ಆರೋಪಿಯನ್ನು ಬಂಧಿಸಲು ಮುಂದಾದಾಗ ಆರೋಪಿ ಮಗುವನ್ನು ತಳ್ಳಿ ಪರಾರಿಯಾದ ಎಂದು  ಪೊಲೀಸರು ತಿಳಿಸಿದ್ದಾರೆ.

ಪ್ರಸ್ತುತ ಘಟನೆಯಲ್ಲಿ ಮಗುವಿಗೆ ಯಾವುದೇ ರೀತಿಯ ಗಾಯಗಳಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. ಮಗುವನ್ನು ಪೋಷಕ ವಶಕ್ಕೆ ನೀಡಿರುವ ಪೊಲೀಸರು ಆರೋಪಿ ಶಂಶಾದ್ ಗಾಗಿ ತೀವ್ರ ಬಲೆ ಬೀಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.