Karnataka Election 2023

'ಅಚ್ಚರಿ ಬದಲಾವಣೆ'.. ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ?; ಪ್ರಧಾನಿ ಮೋದಿ ಗೆ ಪಿ ಚಿದಂಬರಂ ಪ್ರಶ್ನೆ
ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.

'ಮಸೀದಿ ಕಟ್ಟಿಸಿದ್ದು ಕಾಂಗ್ರೆಸ್.. ನೀವು ಇಲ್ಲಿ ಪ್ರಚಾರ ಮಾಡಬೇಡಿ': ಚಾಮರಾಜಪೇಟೆ ಜೆಡಿಎಸ್ ಅಭ್ಯರ್ಥಿ ಮೇಲೆ 'ಕೈ' ಕಾರ್ಯಕರ್ತರ ಹಲ್ಲೆ
ಕರ್ನಾಟಕ ಚುನಾವಣೆ ಹಿನ್ನಲೆಯಲ್ಲಿ ಪ್ರಚಾರ ನಡೆಸುತ್ತಿದ್ದ ಜೆಡಿಎಸ್ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ನಡೆದಿದೆ.

'ಮಾತು ವಾಪಸ್ ತೆಗೊಳ್ಳಿ': ಚುನಾವಣೆ ಪ್ರಚಾರ ಕುರಿತು ಸಂಬರ್ಗಿ ವ್ಯಂಗ್ಯ; ಸಿನಿಮಾ ಸ್ಟೈಲ್ ನಲ್ಲೇ ತಿರುಗೇಟು ಕೊಟ್ಟ ಶಿವಣ್ಣ
ತಮ್ಮ ಚುನಾವಣಾ ಪ್ರಚಾರದ ಬಗ್ಗೆ ಆಕ್ಷೇಪಾರ್ಹ ಟ್ವೀಟ್ ಮಾಡಿರುವ ಮಾಜಿ ಬಿಗ್ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿಗೆ ನಟ ಶಿವರಾಜ್ ಕುಮಾರ್ ಸಿನಿಮಾ ಸ್ಟೈಲ್ ನಲ್ಲೇ ತಿರುಗೇಟು ನೀಡಿದ್ದಾರೆ.

ರಾಜಕಾರಣಿ ಹೆಸರಿನಲ್ಲಿ 3 ಕೆಜಿ 653 ಗ್ರಾಂ ಚಿನ್ನ, 85 ಲಕ್ಷ ರೂ ಸುಲಿಗೆ: ಸಿಟಿ ಮಾರುಕಟ್ಟೆಯಲ್ಲಿ ಪ್ರಕರಣ
ವಿಧಾನಸಭೆ ಚುನಾವಣೆಯನ್ನು ತಮ್ಮ ದುರುಪಯೋಗಕ್ಕೆ ಬಳಸಿಕೊಂಡಿರುವ ಒಂದು ಗ್ಯಾಂಗ್ ಚಿನ್ನದ ವ್ಯಾಪಾರಿಯಿಂದ ಬರೊಬ್ಬರಿ 3ಕೆಜಿ 653 ಗ್ರಾಂ ಚಿನ್ನ, 85 ಲಕ್ಷ ರೂ ಸುಲಿಗೆ ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.

ಅಭ್ಯರ್ಥಿಗಳಿಗೆ ಹಣ ರವಾನೆ ಆರೋಪ; ಬೆಂಗಳೂರು, ಮೈಸೂರಿನಲ್ಲಿ ಮತ್ತೆ ಐಟಿ ದಾಳಿ, 15 ಕೋಟಿ ರೂ. ಗೂ ಅಧಿಕ ನಗದು ವಶ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿರುವ ಅಭ್ಯರ್ಥಿಗಳಿಗೆ ಹಣ ರವಾನೆ ಮಾಡುತ್ತಿದ್ದ ಆರೋಪದ ಮೇರೆಗೆ ಬೆಂಗಳೂರು ಮತ್ತು ಮೈಸೂರಿನಲ್ಲಿ ಐಟಿ ಅಧಿಕಾರಿಗಳು ಹಲವು ಫೈನಾನ್ಶಿಯರ್ ಗಳ ಮನೆ ಮತ್ತು ಕಚೇರಿಗಳ ದಾಳಿ ಮಾಡಿದ್ದಾರೆ.

ಮೋದಿ ರೋಡ್ ಶೋ ಸೇರಿ ಎಲ್ಲ ಪಕ್ಷಗಳ ಚುನಾವಣಾ ರೋಡ್ ಶೋಗೆ ಹೈಕೋರ್ಟ್ ಗ್ರೀನ್ ಸಿಗ್ನಲ್: PIL ವಜಾ
ಬೆಂಗಳೂರಿನಲ್ಲಿ ಭಾನುವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಸೇರಿದಂತೆ ಎಲ್ಲ ಪಕ್ಷಗಳ ರೋಡ್ ಶೋಗೆ ಹೈ ಕೋರ್ಟ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ, ರೋಡ್ ಶೋಗೆ ಅನುಮತಿ ನೀಡಬಾರದು ಎಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಕರ್ನಾಟ ಹೈಕೋರ್ಟ್ ವಜಾಗೊಳಿಸಿದೆ.

ಹಸಿರು ಮೆಣಸಿನಕಾಯಿ, 7 ರೇಯ್ಸ್ ಪೆನ್ ನಿಬ್, ಕೇಕ್, ವಜ್ರ ಮತ್ತು ಸಿಸಿಟಿವಿ ಕ್ಯಾಮೆರಾ: ಪಕ್ಷೇತರರಿಂದ ತರಾವರಿ ಚಿಹ್ನೆ ಆಯ್ಕೆ
ಹಾಲಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮಾತ್ರವಲ್ಲದೇ ನೂರಾರು ಪಕ್ಷೇತರ ಅಥವಾ ಸ್ವತಂತ್ರ್ಯ ಅಭ್ಯರ್ಥಿಗಳೂ ಸ್ಪರ್ದಿಸಿದ್ದು ಅವರಿಗೆ ತರಹೇವಾರಿ ಚುನಾವಣಾ ಚಿನ್ಹೆಗಳನ್ನು ನೀಡಲಾಗಿದೆ.

ಪ್ರಧಾನಿ ಮೋದಿ ಬೆಂಗಳೂರು ರೋಡ್ ಶೋ ಮುಂದೂಡಿ: HD ಕುಮಾರಸ್ವಾಮಿ ಆಗ್ರಹ... ಕಾರಣ ಏನು ಗೊತ್ತಾ?
ಪ್ರಧಾನಿ ನರೇಂದ್ರ ಮೋದಿ ಅವರ ಬೆಂಗಳೂರು ರೋಡ್ ಶೋವನ್ನು ಮುಂದೂಡಬೇಕು ಎಂದು ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಕರ್ನಾಟಕ ಚುನಾವಣೆ 2023: ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆ ಜಗದೀಶ್ ಶೆಟ್ಟರ್ರ 27 ಆಪ್ತರ ಉಚ್ಚಾಟನೆ ಮಾಡಿದ ಬಿಜೆಪಿ
ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಮಾಜಿ ಸಿಎಂ ಹಾಗೂ ಹುಬ್ಬಳ್ಳಿ-ಧಾರವಾಡ ಕೇಂದ್ರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಅವರ 27 ಆಪ್ತರನ್ನು ಬಿಜೆಪಿ ಪಕ್ಷದಿಂದ ಶುಕ್ರವಾರ ಉಚ್ಚಾಟನೆ ಮಾಡಲಾಗಿದೆ.

