Karnataka Election 2023

ಕರ್ನಾಟಕ ಚುನಾವಣೆ 2023: ಕಾಂಗ್ರೆಸ್ ಪಕ್ಷದ ನೂತನ ಜಿಲ್ಲಾ ವೀಕ್ಷಕರ ನೇಮಕ: ಎಐಸಿಸಿ
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ಇತ್ತ ಕಾಂಗ್ರೆಸ್ ಪಕ್ಷ ನೂತನ ಜಿಲ್ಲಾ ವೀಕ್ಷಕರನ್ನು ಶುಕ್ರವಾರ ನೇಮಿಸಿದೆ.

ನಾಮಪತ್ರ ಹಿಂಪಡೆಯಲು ಜೆಡಿಎಸ್ ಅಭ್ಯರ್ಥಿಗೆ ಆಮಿಷ: ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ FIR
ನಾಮಪತ್ರ ಹಿಂಪಡೆಯುವಂತೆ ಜೆಡಿಎಸ್ ಅಭ್ಯರ್ಥಿಗೆ ಆಮಿಷವೊಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಅಭ್ಯರ್ಥಿ ವಿ ಸೋಮಣ್ಣ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಕರ್ನಾಟಕ ವಿಧಾನಸಭೆ ಚುನಾವಣೆ: ನೀತಿ ಸಂಹಿತೆ ಉಲ್ಲಂಘನೆ, 730 FIR ದಾಖಲಿಸಿದ ಚುನಾವಣಾ ಆಯೋಗ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿರುವಂತೆಯೇ ರಾಜಕೀಯ ಮುಖಂಡರು, ಕಾರ್ಯಕರ್ತರ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಸಂಖ್ಯೆಯೂ ಹೆಚ್ಚಾಗಿದ್ದು, ಚುನಾವಣಾ ಆಯೋಗ ಈವರೆಗೂ 730 FIRಗಳನ್ನು ದಾಖಲಿಸಿದೆ.

ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಒಂದು ಪಕ್ಷಕ್ಕೆ ನಾನು ಸೀಮಿತ ಅಲ್ಲ, ಯಾರ ಪರವಾಗಿ ಟಿಕೆಟ್ ಕೇಳುವುದೂ ಇಲ್ಲ: ಕಿಚ್ಚ ಸುದೀಪ್ ಸ್ಪಷ್ಟನೆ
ನಾನು ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ, ಯಾರ ಪರವಾಗಿ ಚುನಾವಣೆಯಲ್ಲಿ ಟಿಕೆಟ್ ಕೇಳುವುದೂ ಇಲ್ಲ, ಟಿಕೆಟ್ ಕೇಳುವಷ್ಟು ದೊಡ್ಡವನು ನಾನಲ್ಲ, ಅಬ್ಬಬ್ಬಾ ಅಂದರೆ ಸಿನಿಮಾ ನೋಡಲು ಟಿಕೆಟ್ ಕೊಡಿಸಬಹುದು ಅಷ್ಟೆ, ಸಿಎಂ ಬೊಮ್ಮಾಯಿಯವರೊಂದಿಗೆ ಸುದ್ದಿಗೋಷ್ಠಿಯಲ್ಲಿ ಭಾಗವಹಿಸುತ್ತಿರುವುದು ಸತ್ಯ ಎಂದು ಸ್ಯಾಂಡಲ್ ವುಡ್ ನಟ ಕಿಚ್ಚ ಸುದೀಪ್ ತಿಳಿಸಿದ್ದಾರೆ.

ಕರ್ನಾಟಕ ಚುನಾವಣೆ ಹಿನ್ನಲೆ, ಬಹು ನಿರೀಕ್ಷಿತ ಬನ್ನೇರುಘಟ್ಟ ಜೈವಿಕ ಉದ್ಯಾನವನದ ಚಿರತೆ ಸಫಾರಿ ಮತ್ತಷ್ಟು ವಿಳಂಬ
ಬನ್ನೇರುಘಟ್ಟ ಜೈವಿಕ ಉದ್ಯಾನವನದ ಬಹು ನಿರೀಕ್ಷಿತ ಚಿರತೆ ಸಫಾರಿ ಮತ್ತಷ್ಟು ವಿಳಂಬವಾಗಲಿದ್ದು, ಕರ್ನಾಟಕ ವಿಧಾನಸಭೆ ಚುನಾವಣೆ ಇದಕ್ಕೆ ಕಾರಣ ಎನ್ನಲಾಗಿದೆ.

ಕರ್ನಾಟಕ: ವೋಟಿಗಾಗಿ ನೋಟು ಗೊತ್ತು.. ಸೈಟೂ ಕೊಡ್ತಾರಾ..? ರಾಮನಗರ ಬಿಜೆಪಿ ಟಿಕೆಟ್ ಆಕಾಂಕ್ಷಿಯಿಂದ ಹೊಸ ಸ್ಕೀಂ!
ಕರ್ನಾಟಕ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಆರಂಭವಾಗಿರುವಂತೆಯೇ ರಾಜಕೀಯ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳ ಪ್ರಚಾರ ತಾರಕಕ್ಕೇರಿದ್ದು, ಇಲ್ಲೊಬ್ಬ ನಾಯಕ ಮತದಾರರಿಗೆ ಸೈಟು ನೀಡುವ ಭರವಸೆ ನೀಡಿದ್ದಾರೆ.

'ಸಿದ್ಧರಾಮಯ್ಯ ಕೋಲಾರಕ್ಕೆ ಬರುತ್ತಿದ್ದಾರೆ, ಅವರಿಗೆ ಬೆಂಬಲ ನೀಡಿ': ಕೃಷ್ಣ ಬೈರೇಗೌಡ
ಕಾಂಗ್ರೆಸ್ ನಾಯಕ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೋಲಾರಕ್ಕೆ ಆಗಮಿಸುತ್ತಿದ್ದು, ಅವರಿಗೆ ಬೆಂಬಲ ನೀಡಿ ಎಂದು ಹೇಳುವ ಮೂಲಕ ಸಿದ್ದರಾಮಯ್ಯ ಅವರ ಕೋಲಾರ ಸ್ಪರ್ಧೆ ಕುರಿತು ಕಾಂಗ್ರೆಸ್ ನಾಯಕ ಕೃಷ್ಣ ಬೈರೇಗೌಡ ಸುಳಿವು ನೀಡಿದ್ದಾರೆ.

