'ಅಚ್ಚರಿ ಬದಲಾವಣೆ'.. ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ?; ಪ್ರಧಾನಿ ಮೋದಿ ಗೆ ಪಿ ಚಿದಂಬರಂ ಪ್ರಶ್ನೆ
ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.

ಚೆನ್ನೈ: ಕಾಂಗ್ರೆಸ್ ಪಕ್ಷದ ಬಜರಂಗದಳ ಸಂಘಟನೆ ನಿಷೇಧ ವಿಚಾರವಾಗಿ ಬಿಜೆಪಿ ಆಕ್ರೋಶ ಭರಿತ ಪ್ರಚಾರ ಮುಂದುವರೆದಿರುವಂತೆಯೇ ಇದಕ್ಕೆ ತಿರುಗೇಟು ನೀಡಿರುವ ಮಾಜಿ ಕೇಂದ್ರ ಸಚಿವ ಮತ್ತು ಹಿರಿಯ ಕಾಂಗ್ರೆಸ್ ನಾಯಪ ಪಿ ಚಿದಂಬರಂ ಬಜರಂಗದಳ ‘ಬಜರಂಗಬಲಿ’ ಆಗಿದ್ದೇಗೆ? ಎಂದು ಪ್ರಶ್ನಿಸಿದ್ದಾರೆ.
ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ‘ನಮ್ಮ ಪಕ್ಷವು ಕರ್ನಾಟಕ ವಿಧಾನಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಬಜರಂಗದಳ ಸಂಘಟನೆ ನಿಷೇಧಿಸುವುದಾಗಿ ಹೇಳಿಲ್ಲ. ಆದರೆ, ದ್ವೇಷ ಬಿತ್ತುವ ಎಲ್ಲ ಸಂಘಟನೆಗಳಿಗೆ ಎಚ್ಚರಿಕೆ ಕೊಡುವ ರೀತಿ ಕಾನೂನಿನಡಿ ನಿರ್ಣಾಯಕ ಕ್ರಮದ ಭರವಸೆ ನೀಡಿದೆ. ಒಂದು ಸಂಘಟನೆ ನಿಷೇಧಿಸುವುದು ನ್ಯಾಯಾಂಗ ಪ್ರಕ್ರಿಯೆ. ಬಜರಂಗದಳವು ಬಜರಂಗಬಲಿ ಆಗಿದ್ದೇಗೆ ಎನ್ನುವುದೇ ನನಗೆ ಅಚ್ಚರಿ. ಈ ‘ಮಾಂತ್ರಿಕ ರೂಪಾಂತರ’ ವಿವರಿಸಬಹುದೇ? ಬಜರಂಗದಳವನ್ನು ಬಜರಂಗಬಲಿಗೆ ಸಮೀಕರಿಸಿರುವುದು ಸರಿಯೇ’ ಎಂದು ಬಿಜೆಪಿ ವಿರುದ್ಧ ಟೀಕಾ ಪ್ರಹಾರ ನಡೆಸಿದರು.
‘ಕರ್ನಾಟಕವು ಉದಾರವಾದಿ, ಪ್ರಜಾಸತ್ತಾತ್ಮಕ, ಬಹುಸಂಖ್ಯಾತ, ಸಹಿಷ್ಣು ಮತ್ತು ಪ್ರಗತಿಪರ ರಾಜ್ಯ. ಇದನ್ನು ಪ್ರತಿಪಾದಿಸುವವರು ಬೇಕಾ ಅಥವಾ ಸರ್ವಾಧಿಕಾರ, ಅಸಹಿಷ್ಣುತೆ ಪ್ರತಿಪಾದಿಸುವವರು ಬೇಕಾ? ಎನ್ನುವುದನ್ನು ರಾಜ್ಯದ ಜನರು ಆಯ್ಕೆ ಮಾಡುವಷ್ಟು ಬುದ್ಧಿವಂತರಿದ್ದಾರೆ. ಪ್ರಜಾಪ್ರಭುತ್ವಕ್ಕಾಗಿ ಮತ್ತು ಕರ್ನಾಟಕದ ಭವಿಷ್ಯಕ್ಕಾಗಿ, ಬಿಜೆಪಿ ಗೆಲ್ಲದಂತೆ ನಾವು ತಡೆಯಬೇಕು ಮತ್ತು ಇಲ್ಲಿನ ಗೆಲುವನ್ನು ನೆರೆಯ ರಾಜ್ಯಗಳಲ್ಲಿ ಹೋರಾಟಕ್ಕೆ ನಾವು ಬಳಸಿಕೊಳ್ಳಬೇಕು’ ಎಂದರು.
ಇದನ್ನೂ ಓದಿ: ಬಜರಂಗದಳ ನಿಷೇಧ ವಿವಾದ: ಮೇ 9 ರಂದು ವಿಎಚ್ಪಿ, ಬಜರಂಗದಳ ಪ್ರತಿಭಟನೆ, ರಾಷ್ಟ್ರವ್ಯಾಪಿ ‘ಹನುಮಾನ್ ಚಾಲೀಸಾ’ ಪಠಣ
‘ಏಕರೂಪ ನಾಗರಿಕ ಸಂಹಿತೆ (ಯುಸಿಸಿ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ವಿಷಯಗಳು ಸಮಾಜ ವಿಭಜಿಸುವ ಮತ್ತು ಸಂಘರ್ಷ ಸೃಷ್ಟಿಸುವ ಸಾಮರ್ಥ್ಯ ಹೊಂದಿವೆ. ಇದರಿಂದ ಉತ್ತರ ಭಾರತದ ಕೆಲವು ರಾಜ್ಯಗಳು ಮತ್ತು ಈಶಾನ್ಯದ ರಾಜ್ಯಗಳಲ್ಲಿ ಏನೆಲ್ಲಾ ನಡೆಯಿತು ಎನ್ನುವುದನ್ನು ನೋಡಿದ್ದೇವೆ. ಇದರ ಪಾಠವನ್ನು ಕರ್ನಾಟಕದ ಜನರೂ ಅರ್ಥ ಮಾಡಿಕೊಂಡಿದ್ದಾರೆ. ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿನ ಈ ಭರವಸೆಗಳು ಅಥವಾ ಪ್ರಸ್ತಾವಗಳನ್ನು ಜನರು ತಿರಸ್ಕರಿಸುವ ವಿಶ್ವಾಸವಿದೆ ಎಂದು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


