kannada

ಸುದೀಪ್ ಕೈರುಚಿ ಸವಿದ ತಮಿಳು ಚಿತ್ರ ನಿರ್ದೇಶಕ ವೆಂಕಟ್ ಪ್ರಭು!
ಭೇಟಿ ಬಗ್ಗೆ ಪ್ರಶ್ನಿಸಿದಾಗ ಮನ್ಕಥಾ ಚಿತ್ರ ನಿರ್ದೇಶಕ ವೆಂಕಟ್ ಪ್ರಭು ಅವರು ವಿಶೇಷವೇನಿಲ್ಲ, ಮುಂದಿನ ಪ್ರಾಜೆಕ್ಟ್ ಗಳ ಕಥೆಗಳು ಮತ್ತು ವಿಕ್ರಾಂತ್ ರೋಣ ಸಿನಿಮಾ ಕುರಿತು ಮಾತುಕತೆ ನಡೆಸಿದ್ದಾಗಿ ಹೇಳಿದ್ದಾರೆ.

'ಡೇರ್ ಡೆವಿಲ್ ಮುಸ್ತಾಫಾ' ಚಿತ್ರತಂಡದಿಂದ ಲೇಖಕ ಪೂರ್ಣಚಂದ್ರ ತೇಜಸ್ವಿ ಜನ್ಮದಿನ ಪ್ರಯುಕ್ತ ವಿಶೇಷ ಸ್ಪರ್ಧೆ
'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಸಿನಿಮಾ ನಿರ್ಮಾಣದ ಹಂತದಲ್ಲಿರುವಾಗಲೇ ಚಿತ್ರತಂಡ ಲೇಖಕ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರ ಜನ್ಮದಿನದ ಪ್ರಯುಕ್ತ 6- 16ರ ವಯೋಮಾನದವರಿಗಾಗಿ ವಿಶೇಷ ಸ್ಪರ್ಧೆಯೊಂದನ್ನು ಆಯೋಜಿಸಿದೆ.

ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!
ಆಬ್ರಕಡಾಬ್ರ ಎಂದರೆ ಬರೀ ಮ್ಯಾಜಿಕ್ ಮಂತ್ರವಲ್ಲ, ಬದುಕಿನ ಅರ್ಥದ ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ನವ ನಿರ್ದೇಶಕ ಶಿಶಿರ್ ರಾಜ್ ಮೋಹನ್.

ಅವಕಾಶಗಳು ನಮ್ಮನ್ನರಸಿ ಬಂದಾಗ ಸುಮ್ಮನೆ ಕೂರಬಾರದು: ನಟ ಧನಂಜಯ್ ಟಾಕಿಂಗ್
ಸಾಲು ಸಾಲು ಸಿನಿಮಾ ಅವಕಾಶಗಳು ಧನಂಜಯ್ ಅವರನ್ನು ಆಗಸ್ಟ್ ತಿಂಗಳಲ್ಲಿ ಹುಡುಕಿಕೊಂಡು ಬಂದಿದ್ದೇ ಅವರು ಬ್ಯುಸಿಯಾಗಲು ಕಾರಣ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೊಳ್ಳೆ ಕಥೆಯುಳ್ಳ ಸಿನಿಮಾ ಅವಕಾಶಗಳು ಅವರನ್ನರಸಿ ಬಂದಿದ್ದು ಅವರ ಸಂತಸವನ್ನು ಇಮ್ಮಡಿಗೊಳಿಸಿದೆ.

ಕಾರ್ಗಿಲ್ ನೆಲದಲ್ಲಿ ಕನ್ನಡದ ಕಂಪು: ಇಲ್ಲಿದೆ ಸಂಸದ ತೇಜಸ್ವೀ ಸೂರ್ಯ- ಕಾರ್ಗಿಲ್ ಕೌನ್ಸಿಲರ್ ಕನ್ನಡ ಸಂಭಾಷಣೆ!
ಕನ್ನಡ ಭಾಷೆಯನ್ನು ನಮ್ಮ ನಾಡಿನಾಚೆ ಕೇಳುವುದು ವರ್ಣನಾತೀತ ಆನಂದ ನೀಡುತ್ತದೆ. ಇಂಥಹದ್ದೇ ಒಂದು ವಿಶೇಷವಾದ ವಿಡಿಯೋ ಈಗ ವೈರಲ್ ಆಗತೊಡಗಿದೆ.

ಕನ್ನಡೇತರರಿಗಾಗಿ ಪ್ರತ್ಯೇಕ ಪಠ್ಯಪುಸ್ತಕ ಮತ್ತು ಪರೀಕ್ಷಾ ವ್ಯವಸ್ಥೆ: ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಂಪಿ ಕನ್ನಡ ವಿವಿ ವಿನೂತನ ಕಾರ್ಯಕ್ರಮ
ಕನ್ನಡೇತರರು ಕರುನಾಡ ಭಾಷೆ ಕನ್ನಡವನ್ನು ಕಲಿಯಲು ಉತ್ತೇಜನ ನೀಡುವ ಸಲುವಾಗಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಮತ್ತು ಹಂಪಿ ಕನ್ನಡ ವಿವಿ ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಕನ್ನಡೇತರರಿಗಾಗಿಯೇ ಪ್ರತ್ಯೇಕ ಪಠ್ಯಪುಸ್ತಕ ಮತ್ತು ಪರೀಕ್ಷೆಗಳನ್ನು ಆಯೋಜಿಸಲು ತೀರ್ಮಾನಿಸಲಾಗಿದೆ. ಅದಕ್ಕಾಗಿ ಆನ್ ಲೈನ್ ಮಾದರಿಯನ್ನೂ ಸಿದ್ಧಪಡಿಸಲಾಗುವುದು ಎಂದು ತಿಳಿದುಬಂದಿದೆ.

ತಂದೆ ಶಂಕರ್ ಸಿಂಗ್ ಕುರಿತ ಪುಸ್ತಕದ ಮುಖಪುಟ ಅನಾವರಣಗೊಳಿಸಿದ ರಾಜೇಂದ್ರ ಸಿಂಗ್ ಬಾಬು
ಕನ್ನಡ ಚಿತ್ರರಂಗದ ಪ್ರಾರಂಭದ ದಿನಗಳಲ್ಲಿ ಹಲವು ಅತ್ಯುತ್ತಮ ಚಿತ್ರಗಳನ್ನು ಕೊಟ್ಟ ನಿರ್ಮಾಪಕ ಡಿ ಶಂಕರ್ ಸಿಂಗ್ ಅವರ ಕುರಿತು ಪುಸ್ತಕವನ್ನು ಬರೆಯುತ್ತಿರುವ ಶಂಕರ್ ಸಿಂಗ್ ಪುತ್ರ ಪುಸ್ತಕದ ಮುಖಪುಟವನ್ನು ಅನಾವರಣಗೊಳಿಸಿದ್ದಾರೆ.

ನಾನು ಮಾತಾಡುವುದಕ್ಕಿಂತ ನನ್ನ ಕೆಲಸ ಮಾತಾಡಬೇಕು: ವಿಜಯ ರಾಘವೇಂದ್ರ
ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರನಟ, ಚಿನ್ನಾರಿ ಮುತ್ತಾ ಎಂದೇ ಜನಪ್ರಿಯತೆ ಗಳಿಸಿರುವ ವಿಜಯ ರಾಘವೇಂದ್ರ ಅವರು 'ಸೀತಾರಾಂ ಬಿನೊಯ್'' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಇದು ಅವರ 50ನೇ ಚಿತ್ರ.

ವೀಡಿಯೊ: ಭಾರತದಲ್ಲಿನ ಬ್ರಿಟಿಷ್ ರಾಯಭಾರಿಗೆ ಕನ್ನಡ ಕಲಿಸಿದ ರಾಹುಲ್ ದ್ರಾವಿಡ್
ಟೀಮ್ ಇಂಡಿಯಾದ ಕೋಚ್, ಮಾಜಿ ಕ್ರಿಕೆಟಿಗ ರಾಹುಲ್ ದ್ರಾವಿಡ್ ಅವರು ಭಾರತ-ಇಂಗ್ಲೆಂಡ್ ಟೆಸ್ಟ್ ಸರಣಿಯ ವೇಳೆ ಭಾರತದಲ್ಲಿನ ಬ್ರಿಟಿಷ್ ಹೈಕಮಿಷನರ್ ಅಲೆಕ್ಸ್ ಎಲ್ಲಿಸ್ ಅವರಿಗೆ ಕನ್ನಡ ಕಲಿಸಿದ್ದಾರೆ.

