ರಕ್ಷಿತ್ ಶೆಟ್ಟಿ ಚಿತ್ರ ನಿರ್ಮಾಣ ಸಂಸ್ಥೆಯಿಂದ ಹೊಸ ಸಿನಿಮಾ 'ಆಬ್ರಕಡಾಬ್ರ'!
ಆಬ್ರಕಡಾಬ್ರ ಎಂದರೆ ಬರೀ ಮ್ಯಾಜಿಕ್ ಮಂತ್ರವಲ್ಲ, ಬದುಕಿನ ಅರ್ಥದ ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ನವ ನಿರ್ದೇಶಕ ಶಿಶಿರ್ ರಾಜ್ ಮೋಹನ್.

ಬೆಂಗಳೂರು: ನಟ ರಕ್ಷಿತ್ ಶೆಟ್ಟಿಯವರ ಪರಮ್ವಾಹ್ ಸ್ಟುಡಿಯೋ ಆಬ್ರಕಡಾಬ್ರ ಎನ್ನುವ ಹೊಸ ಚಿತ್ರ ನಿರ್ಮಿಸಲು ಸಿದ್ಧತೆ ನಡೆಸಿದೆ. ಈ ಚಿತ್ರವನ್ನು ಉದಯೋನ್ಮುಖ ಬರಹಗಾರ ಮತ್ತು ನಿರ್ದೇಶಕ ಶಿಶಿರ್ ರಾಜ್ ಮೋಹನ್ ಅವರು ನಿರ್ದೇಶಿಸಲಿದ್ದಾರೆ.
ಈ ಹಿಂದೆ ಕಿರಿಕ್ ಪಾರ್ಟಿ, ಹಂಬಲ್ ಪೊಲಿಟಿಶಿಯನ್ ನೊಗ್ರಾಜ್ ಸಿನಿಮಾಗಳನ್ನು ಪರಮ್ವಾಹ್ ಸ್ಟುಡಿಯೊ ಹೊರತಂದಿತ್ತು.ಐದೇ ಸಂಸ್ಥೆಯ 'ಸಕುಟುಂಬ ಸಮೇತ' ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಸಿನಿಮಾದ ಪೋಸ್ಟರ್ ಅನ್ನು ಹಂಚಿಕೊಂಡ ರಕ್ಷಿತ್ ಶೆಟ್ಟಿ ತಮ್ಮ ಸಂಸ್ಥೆಯಿಂದ ಅನಂತ್ ನಾಗ್ ಅಭಿನಯದ ಆಬ್ರಕಡಾಬ್ರ ಚಿತ್ರ ನಿರ್ಮಿಸುತ್ತಿರುವುದಾಗಿ ಘೋಷಿಸಲು ಹೆಮ್ಮೆಯಾಗುತ್ತಿದೆ ಎಂದು ಬರೆದುಕೊಂಡಿದ್ದರು. ವರ್ಷಾ ಕೊಡ್ಗಿ ಅವರು ವಿನ್ಯಾಸ ಮಾಡಿರುವ ಸಿನಿಮಾ ಪೋಸ್ಟರ್ ಸಿನಿಮಾದ ಕಥಾಹಂದರದ ಕುರಿತು ಕುತೂಹಲ ಮೂಡಿಸಿದೆ.
ತಾರಗಣದಲ್ಲಿ ಸಿರಿ ರವಿಕುಮಾರ್, ಬಿ.ವಿ ಶೃಂಗ, ಅವಿನಾಶ್ ರೈ ಮತ್ತಿತರು ಇದ್ದಾರೆ. ನಿರ್ದೇಶಕ ಶಿಶಿರ್ ರಾಜಮೋಹನ್ ಅವರಿಗೆ ಇದು ಮೊದಲ ಸಿನಿಮಾ. ಈ ಹಿಂದೆ ಅವರು ಕಿರುಚಿತ್ರ ಹಾಗೂ ಜಾಹೀರಾತುಗಳನ್ನು ನಿರ್ಮಿಸಿದ್ದಾರೆ.
ಆಬ್ರಕಡಾಬ್ರ ಎಂದರೆ ಅದೊಂದು ಮ್ಯಾಜಿಕ್ ಮಂತ್ರವಲ್ಲ, ಜೀವನದುದ್ದಕ್ಕೂ ನಮಗಾಗುವ ಅರ್ಥೈಸುವಿಕೆ, ಅನಾವರಣ, ಅಸ್ತಿತ್ವದ ಹುಡುಕಾಟ, ಗುರಿ ಎಲ್ಲವೂ ಅದರಲ್ಲಿ ಅಡಗಿದೆ ಎನ್ನುತ್ತಾರೆ ಶಿಶಿರ್.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


