kannada

KFC ವಿರುದ್ಧ ಕನ್ನಡ ಕಹಳೆ: ಸಾಮಾಜಿಕ ಜಾಲತಾಣದಲ್ಲಿ #KFCಕನ್ನಡಬೇಕು ಟ್ರೆಂಡ್, ಹಳೆಯ ವಿಡಿಯೋ ಎಂದು ಕೆಎಫ್ ಸಿ ಸ್ಪಷ್ಟನೆ
ಬೆಂಗಳೂರಿನ ಕೆಎಫ್ಸಿ ಮಳಿಗೆಯಲ್ಲಿ ಮಹಿಳೆಯೊಬ್ಬರು ಕನ್ನಡ ಹಾಡು ಹಾಕದ ಕಾರಣದಿಂದಾಗಿ ಕೆಎಫ್ಸಿ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ಅಯ್ಯೋ. ಕನ್ನಡ ಕಟುಕರ ಕೈಯ್ಯಲ್ಲಿ ಸಿಕ್ಕಿಕೊಂಡಿದೆ: ರಾಷ್ಟ್ರೀಯ ಪಕ್ಷಗಳ ದಾದಾಗಿರಿ ದಿನೇದಿನೆ ಹೆಚ್ಚುತ್ತಿದೆ: ಎಚ್.ಡಿ ಕೆ
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) 25ನೇ ಘಟಿಕೋತ್ಸವದಲ್ಲಿ ಕನ್ನಡಕ್ಕೆ ಅಪಮಾನ ಮಾಡಲಾಗಿದೆ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ ಕುಮಾರಸ್ವಾಮಿ ಅಭಿಪ್ರಾಯ ಪಟ್ಟಿದ್ದಾರೆ.

ಫ್ಯಾಮಿಲಿ ಮ್ಯಾನ್ ಆಗಿ ಜಗತ್ತನ್ನು ರಕ್ಷಿಸುವ ಜೇಮ್ಸ್ ಬಾಂಡ್; ಮುಗಿದ ಡೇನಿಯಲ್ ಕ್ರೇಗ್ 007 ಅಧ್ಯಾಯ: ನೋ ಟೈಮ್ ಟು ಡೈ ಚಿತ್ರ ವಿಮರ್ಶೆ
ಇದುವರೆಗಿನ ಬಾಂಡ್ ಸಿನಿಮಾಗಳಲ್ಲಿ ಆತ ಸ್ತ್ರೀಲೋಲ, ಮೋಜು ಪ್ರಿಯ, ಜೂಜು ಪ್ರಿಯ, ಹೆಣ್ಣುಮಕ್ಕಳ ಹಾಟ್ ಫೇವರಿಟ್ ಎಂಬಂತೆ ತೋರಿಸಲಾಗುತ್ತಿತ್ತು. ಆದರೆ ಈ ಸಿನಿಮಾದಲ್ಲಿ ಬಾಂಡ್ ಫ್ಯಾಮಿಲಿ ಮ್ಯಾನ್ ಆಗಿ ಬದಲಾಗುವುದನ್ನು ಕಾಣಬಹುದಾಗಿದೆ. ವಿ.ಸೂ- ಆಕ್ಷನ್ ಚಿತ್ರ ಎನ್ನುವ ಖಾತರಿಯಲ್ಲಿ ಕರ್ಚೀಫ್ ಜೊತೆಗಿಟ್ಟುಕೊಳ್ಳಲು ಮರೆಯದಿರಿ.

ವಿಜಯ್ ಪ್ರಕಾಶ್ ಹಾಡಿರುವ ಕಲಾವಿದನ ಸೋಲು ಗೆಲುವು ಕುರಿತ 'ಆರಾಮ್ಸೆ' ಆಲ್ಬಂ ಸಾಂಗ್ ವೈರಲ್
ಕನಸುಗಳನ್ನು ಹೊತ್ತು ಚಿತ್ರರಂಗಕ್ಕೆ ಬರುವ ಕಲಾವಿದನ ಮನಸ್ಸಿನ ತೊಳಲಾಟವನ್ನು ವಿವರಿಸುವ ವಿಡಿಯೋ ಆಲ್ಬಮ್ ಆರಾಮ್ಸೆ (Aaramse) ಸದ್ಯ ಯೂಟ್ಯೂಬ್ನಲ್ಲಿ (You Tube) ವೈರಲ್ ಆಗಿದೆ.

ಸ್ಯಾಂಡಲ್ ವುಡ್ ಕಲಾವಿದರ ಕ್ರಿಕೆಟ್ ಪಂದ್ಯಾವಳಿ 'ಬಾಕ್ಸ್ ಕ್ರಿಕೆಟ್ ಲೀಗ್'ಗೆ ಚಾಲನೆ
ಕೊರೊನಾದಿಂದ ಮನೆಯಲ್ಲೇ ಉಳಿಯುವಂತಾಗಿ ಜಡ್ಡುಗಟ್ಟಿರುವ ಮನಸ್ಸುಗಳಿಗೆ ಈ ಪಂದ್ಯಾವಳಿಯಿಂದ ಮನರಂಜನೆ ಜೊತೆಗೆ ಚೈತನ್ಯ ದೊರೆಯುವ ವಿಶ್ವಾಸವನ್ನು ಆಯೋಜಕ ಕಮರ್ ವ್ಯಕ್ತಪಡಿಸಿದ್ದಾರೆ.

ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಕಾರ್ಯಕ್ರಮದಲ್ಲಿ ಕನ್ನಡ ಕಡೆಗಡನೆ ಏಕೆ?: ಸಚಿವ ಸುನೀಲ್ ಕುಮಾರ್
ನಮ್ಮ ಮೆಟ್ರೋ ರೈಲು ಮಾರ್ಗ ಉದ್ಘಾಟನೆ ಸಂದರ್ಭದಲ್ಲಿ ಕನ್ನಡವನ್ನು ಕಡೆಗಣನೆ ಮಾಡಿರುವುದು ಗಂಭೀರ ಸ್ವರೂಪದ ಲೋಪ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಅಭಿಪ್ರಾಯ ಪಟ್ಟಿದ್ದಾರೆ.

ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಕನ್ನಡದ 'ಪೆಡ್ರೋ' ಚಿತ್ರ ಆಯ್ಕೆ
ರಿಷಬ್ ಶೆಟ್ಟಿ ನಿರ್ಮಾಣದ ಹಾಗೂ ನಟೇಶ್ ಹೆಗಡೆ ನಿರ್ದೇಶನದ ‘ಪೆಡ್ರೋ’ ಸಿನಿಮಾ ದಕ್ಷಿಣ ಕೊರಿಯಾದ ಬುಸಾನ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದ್ದು, ಬುಸಾನ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಾಣುತ್ತಿರುವ ಮೊದಲ ಕನ್ನಡದ ಸಿನಿಮಾ ಎಂಬ ಹೆಗ್ಗಳಿಕೆಯನ್ನು ಪಡೆದುಕೊಂಡಿದೆ.

ಬಿಜೆಪಿ ಆಡಳಿತದಲ್ಲಿ ರಾಜ್ಯದಲ್ಲಿ ಕನ್ನಡಿಗನೂ ಅನಾಥ, ಕನ್ನಡವೂ ಅನಾಥ: ಕಾಂಗ್ರೆಸ್
ನೂತನ ಕೆಂಗೇರಿವರೆಗಿನ ಮೆಟ್ರೋ ಮಾರ್ಗ ಉದ್ಘಾಟನೆ ಸಮಾರಂಭದಲ್ಲಿ ಕನ್ನಡ ನಿರ್ಲಕ್ಷ್ಯ ಧೋರಣೆ ವಿರುದ್ಧ ಪ್ರತಿಪಕ್ಷ ಕಾಂಗ್ರೆಸ್ ಕಿಡಿಕಾರಿದೆ.

'ಮಾಯಾ ಬಜಾರ್' ರಾಧಾಕೃಷ್ಣ ರೆಡ್ಡಿ ನಿರ್ದೇಶನಲ್ಲಿ ಕನ್ನಡ-ತೆಲುಗು ದ್ವಿಭಾಷಾ ಸಿನಿಮಾ
2016 ರಲ್ಲಿ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಬ್ಯಾನರ್ ಅಡಿಯಲ್ಲಿ ತಯಾರಾದ ಮಾಯಾಬಜಾರ್ ಸಿನಿಮಾವನ್ನು ರಾಧಾಕೃಷ್ಣ ರೆಡ್ಡಿ ನಿರ್ದೇಶನ ಮಾಡಿದ್ದರು.

