Kangana Ranauth

ಬಾಲಿವುಡ್ ನಟಿ ಕಂಗನಾ ರಾನಾವತ್ ಗೆ ಕೊರೋನಾ ಪಾಸಿಟಿವ್
ಬಾಲಿವುಡ್ ನಟಿ ಕಂಗನಾ ರಾನಾವತ್ ಕೊರೋನಾ ಸೋಂಕಿಗೆ ಒಳಗಾಗಿದ್ದಾರೆ. ತಮಗೆ ಸೋಂಕು ತಗುಲಿರುವುದಾಗಿ ನಟಿ ಕಂಗನಾ ಹೇಳಿಕೊಂಡಿದ್ದಾರೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್, ಸೋದರಿ ರಂಗೋಲಿ ಚಂಡೆಲ್ ಗೆ ಮತ್ತೊಮ್ಮೆ ಪೊಲೀಸ್ ಸಮನ್ಸ್ ಜಾರಿ
ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಆಕೆಯ ಸೋದರಿ ರಂಗೋಲಿ ಚಾಂಡೆಲ್ ಅವರಿಗೆ ಮುಂಬೈ ಪೊಲೀಸ್ ಮೂರನೇ ಬಾರಿ ಸಮನ್ಸ್ ಜಾರಿ ಮಾಡಿದೆ. ಇದೇ ತಿಂಗಳ 23 ಮತ್ತು 24ರಂದು ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದೆ.

'ನಾನು ಮುಂಬೈ ತೊರೆಯುತ್ತಿದ್ದೇನೆ, ಪಿಒಕೆ ಹೋಲಿಕೆ ಸತ್ಯವಾಗಿದೆ':ಕಂಗನಾ ರಾನಾವತ್
ಬಾಲಿವುಡ್ ನಟಿ ಕಂಗನಾ ರಾನಾವತ್ ಮುಂಬೈ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಕಳೆದ ಸೆಪ್ಟೆಂಬರ್ 9ರಂದು ಮಹಾರಾಷ್ಟ್ರ ಸರ್ಕಾರದೊಂದಿಗೆ ಅದರಲ್ಲೂ ಶಿವಸೇನೆಯೊಂದಿಗೆ ವಿವಾದದ ಮಧ್ಯೆ ಕೇಂದ್ರ ಸರ್ಕಾರ ನೀಡಿದ್ದ ವೈ+ ಭದ್ರತೆ ನಡುವೆ ನಗರಕ್ಕೆ ಬಂದಿದ್ದರು.

'ನಾನು ಮಾದಕ ವ್ಯಸನಿಯಾಗಿದ್ದೆ'ಎಂದು ಕಂಗನಾ ರಾನಾವತ್ ಒಪ್ಪಿಕೊಳ್ಳುತ್ತಿರುವ ವಿಡಿಯೊ ವೈರಲ್ !
ಚಿತ್ರರಂಗಕ್ಕೆ ಬಂದ ಆರಂಭದ ದಿನಗಳಲ್ಲಿ ತಾನು ಮಾದಕ ವಸ್ತು ವ್ಯಸನಿಯಾಗಿದ್ದೆ ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳಿರುವ ವಿಡಿಯೊ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಹರಿದಾಡುತ್ತಿದೆ. ಈ ವಿಡಿಯೊವನ್ನು ಕಂಗನಾ ಅವರೇ ಕಳೆದ ಮಾರ್ಚ್ ನಲ್ಲಿ ಲಾಕ್ ಡೌನ್ ಸಮಯದಲ್ಲಿ ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಹಾಕಿಕೊಂಡಿದ್ದರು.

ಮಹಾರಾಷ್ಟ್ರ ಸರ್ಕಾರದೊಂದಿಗೆ ಕಿತ್ತಾಟ:ಕಂಗನಾ ರಾನಾವತ್ ಗೆ ಡ್ರಗ್ ಪರೀಕ್ಷೆ ನಡೆಸಲು ಆದೇಶ
ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಮಹಾರಾಷ್ಟ್ರ ಸರ್ಕಾರದ ನಡುವಿನ ತಿಕ್ಕಾಟ ಸದ್ಯಕ್ಕೆ ನಿಲ್ಲುವ ಲಕ್ಷಣ ಕಾಣುತ್ತಿಲ್ಲ, ಮುಂಬೈಯ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಕಚೇರಿಯನ್ನು ಧ್ವಂಸ ಮಾಡಲು ಹೊರಟ ಸರ್ಕಾರಕ್ಕೆ ಹೈಕೋರ್ಟ್ ತಡೆ ತಂದ ನಂತರ ಅದು ಅರ್ಧಕ್ಕೆ ನಿಂತಿದೆ.

'ನಿಮ್ಮ ಮೌನವನ್ನು ಇತಿಹಾಸ ತೀರ್ಮಾನ ಮಾಡುತ್ತದೆ':ಸೋನಿಯಾ ಗಾಂಧಿಗೆ ಕಂಗನಾ ರಾನಾವತ್ ಪ್ರಶ್ನೆ
ಮಹಾರಾಷ್ಟ್ರ ಸರ್ಕಾರದಲ್ಲಿ ಮೈತ್ರಿಕೂಟವಾಗಿರುವ ಕಾಂಗ್ರೆಸ್ ತಮ್ಮ ವಿವಾದದಲ್ಲಿ ಮಧ್ಯೆ ಪ್ರವೇಶಿಸಿ ತಮಗೆ ನ್ಯಾಯ ಒದಗಿಸಿಕೊಡಬೇಕೆಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರನ್ನು ಒತ್ತಾಯಿಸಿದ್ದಾರೆ.

ಮುಂಬೈಯ ತಮ್ಮ ಕಟ್ಟಡ ಶರದ್ ಪವಾರ್ ಗೆ ಸೇರಿದ್ದು:ಕಂಗನಾ ರಾನಾವತ್
ಮಹಾನಗರಿ ಮುಂಬೈಯಲ್ಲಿ ತಾವು ವಾಸಿಸುತ್ತಿರುವ ಕಟ್ಟಡ ಶರದ್ ಪವಾರ್ ಅವರಿಗೆ ಸೇರಿದ್ದು ಎಂದು ಬಾಲಿವುಡ್ ನಟಿ ಕಂಗನಾ ರಾನಾವತ್ ಹೇಳುತ್ತಿದ್ದಂತೆ ಅವರು ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ ಬಗ್ಗೆ ಹೇಳುತ್ತಿದ್ದಾರೆ ಎಂದು ಕೆಲವು ಮಾಧ್ಯಮಗಳಲ್ಲಿ, ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯಾಯಿತು.

ಬಂಗಲೆ ನಿರ್ಮಾಣದಲ್ಲಿ ಅಕ್ರಮ ನಡೆದಿಲ್ಲ, ನನ್ನ ಶತ್ರುಗಳು ಮುಂಬೈ ಪಿಒಕೆ ಎಂದು ಸಾಬೀತುಪಡಿಸಿದ್ದಾರೆ:ಕಂಗನಾ ರಾನಾವತ್
ಮಹಾನಗರ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ನನಗೆ ಭಾಸವಾಗುತ್ತಿದೆ ಎಂದು ಹೇಳಿ ಶಿವಸೇನಾ ನಾಯಕರೊಂದಿಗೆ ತೀವ್ರ ವಿವಾದ ಮಾಡಿಕೊಂಡು ಸರ್ಕಾರದ ಭದ್ರತೆಯೊಂದಿಗೆ ಮುಂಬೈ ಮಹಾನಗರಕ್ಕೆ ಬುಧವಾರ ಹೊರಟ ಬಾಲಿವುಡ್ ನಟಿ ಕಂಗನಾ ರಾನಾವತ್ ಗೆ ಅವರ ಮುಂಬೈ ಬಂಗಲೆಯ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಹೇಳಿ ಪಾಲಿಕೆ ನೆಲಸಮ ಮಾಡಿತು.

ಮುಂಬೈಗೆ ಹೊರಟ ನಟಿ ಕಂಗನಾಗೆ ಮಹಾನಗರ ಪಾಲಿಕೆ ಶಾಕ್:ಬಂಗಲೆಯ ಒಂದು ಭಾಗ ನೆಲಸಮ, ಹೈಕೋರ್ಟ್ ಮೊರೆ ಹೋದ ನಟಿ
ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.

