ಮುಂಬೈಗೆ ಹೊರಟ ನಟಿ ಕಂಗನಾಗೆ ಮಹಾನಗರ ಪಾಲಿಕೆ ಶಾಕ್:ಬಂಗಲೆಯ ಒಂದು ಭಾಗ ನೆಲಸಮ, ಹೈಕೋರ್ಟ್ ಮೊರೆ ಹೋದ ನಟಿ
ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮತ್ತು ಶಿವಸೇನೆ ನಾಯಕರ ನಡುವಿನ ವಾದ-ವಿವಾದ ಇದೀಗ ಮುಂಬೈ ಮಹಾನಗರ ಪಾಲಿಕೆಯ ಕಟ್ಟಡ ಧ್ವಂಸ ಕಾರ್ಯಾಚರಣೆಯವರೆಗೆ ಬಂದು ನಿಂತಿದೆ.
ಇಂದು ಬೆಳಗ್ಗೆ ಮುಂಬೈ ಮಹಾನಗರ ಪಾಲಿಕೆ ನಟಿಗೆ ಆಘಾತವನ್ನುಂಟುಮಾಡಿದ್ದು, ಮುಂಬೈಯ ಬಾಂದ್ರಾದ ಪಾಲಿ ಹಿಲ್ಸ್ ನಲ್ಲಿರುವ ಕಂಗನಾ ಬಂಗಲೆಯನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಜೆಸಿಬಿ ಮೂಲಕ ನೆಲಸಮ ಮಾಡುವ ಕಾರ್ಯ ಮಾಡಿದೆ. ಇಂದು ಬೆಳಗ್ಗೆ ಈ ಕಾರ್ಯಾಚರಣೆ ನಡೆಸಿದ್ದು ಬಂಗಲೆಯನ್ನು ವಿಸ್ತರಿಸಿ ಕಟ್ಟುವಾಗ ಅಕ್ರಮ ನಡೆದಿದೆ ಎಂದು ಬಂಗಲೆ ಮುಂದೆ ಹಚ್ಚಿರುವ ನೊಟೀಸ್ ನಲ್ಲಿ ತಿಳಿಸಿದೆ.
ಈ ಬಗ್ಗೆ ಕಂಗನಾ ರಾನಾವತ್ ಅವರ ಪರ ವಕೀಲ ಪಿಟಿಐ ಸುದ್ದಿಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದು ಇಂದು ಬೆಳಗ್ಗೆ ತುರ್ತು ವಿಚಾರಣೆಗೆ ನಾವು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೇವೆ. ಬಿಎಂಸಿಯ ಧ್ವಂಸ ಕಾರ್ಯಾಚರಣೆಗೆ ಮಧ್ಯಂತರ ತಡೆ ತರಬೇಕೆಂದು ಕೋರಿದ್ದೇವೆ ಎಂದರು.
ಇಂದು ಅಪರಾಹ್ನ ಮುಂಬೈ ಹೈಕೋರ್ಟ್ ಕಂಗನಾ ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸುವ ಸಾಧ್ಯತೆಯಿದೆ.
ಶಿವಸೇನೆ ನಾಯಕರ ಜೊತೆ ತಾವು ಸೈದ್ಧಾಂತಿಕ ಭಿನ್ನತೆ ಹೊಂದಿರುವುದಕ್ಕೆ ಮಹಾರಾಷ್ಟ್ರ ಸರ್ಕಾರ ತಮ್ಮನ್ನು ಗುರಿಯಾಗಿಟ್ಟುಕೊಂಡು ಈ ಕೆಲಸ ಮಾಡುತ್ತಿದೆ ಎಂದು 33 ವರ್ಷದ ನಟಿ ಕಂಗನಾ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


