'ನಾನು ಮುಂಬೈ ತೊರೆಯುತ್ತಿದ್ದೇನೆ, ಪಿಒಕೆ ಹೋಲಿಕೆ ಸತ್ಯವಾಗಿದೆ':ಕಂಗನಾ ರಾನಾವತ್
ಬಾಲಿವುಡ್ ನಟಿ ಕಂಗನಾ ರಾನಾವತ್ ಮುಂಬೈ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಕಳೆದ ಸೆಪ್ಟೆಂಬರ್ 9ರಂದು ಮಹಾರಾಷ್ಟ್ರ ಸರ್ಕಾರದೊಂದಿಗೆ ಅದರಲ್ಲೂ ಶಿವಸೇನೆಯೊಂದಿಗೆ ವಿವಾದದ ಮಧ್ಯೆ ಕೇಂದ್ರ ಸರ್ಕಾರ ನೀಡಿದ್ದ ವೈ+ ಭದ್ರತೆ ನಡುವೆ ನಗರಕ್ಕೆ ಬಂದಿದ್ದರು.

ಮುಂಬೈ: ಬಾಲಿವುಡ್ ನಟಿ ಕಂಗನಾ ರಾನಾವತ್ ಮುಂಬೈ ತೊರೆಯುವುದಾಗಿ ಪ್ರಕಟಿಸಿದ್ದಾರೆ. ಕಳೆದ ಸೆಪ್ಟೆಂಬರ್ 9ರಂದು ಮಹಾರಾಷ್ಟ್ರ ಸರ್ಕಾರದೊಂದಿಗೆ ಅದರಲ್ಲೂ ಶಿವಸೇನೆಯೊಂದಿಗೆ ವಿವಾದದ ಮಧ್ಯೆ ಕೇಂದ್ರ ಸರ್ಕಾರ ನೀಡಿದ್ದ ವೈ+ ಭದ್ರತೆ ನಡುವೆ ನಗರಕ್ಕೆ ಬಂದಿದ್ದರು.
ಮುಂಬೈ ತೊರೆಯುವ ತಮ್ಮ ನಿರ್ಧಾರವನ್ನು ಟ್ವೀಟ್ ಮೂಲಕ ಪ್ರಕಟಿಸಿರುವ ಅವರು, ಭಾರವಾದ ಹೃದಯಗಳಿಂದ ಮುಂಬೈ ತೊರೆಯುತ್ತಿದ್ದೇನೆ. ಇಷ್ಟು ದಿನ ನನ್ನ ಮೇಲೆ ನಿರಂತರ ದಾಳಿ ಮಾಡುತ್ತಾ, ಭಯೋತ್ಪಾದಕರಂತೆ ನನ್ನ ಮೇಲೆ ಬೆದರಿಕೆ ಹಾಕಿದ್ದು, ನಿಂದನೆ ಮಾಡಿದ್ದು, ನನ್ನ ಕಚೇರಿಯನ್ನು ಧ್ವಂಸ ಮಾಡಿದ್ದು, ನನ್ನ ಸುತ್ತ ಭದ್ರತೆ ಇರುವಂತೆ ಮಾಡಿದ್ದು ಇವುಗಳೆಲ್ಲವನ್ನೂ ನೋಡಿದಾಗ ಮುಂಬೈ ಪಾಕ್ ಆಕ್ರಮಿತ ಕಾಶ್ಮೀರದಂತೆ ಭಾಸವಾಗುತ್ತಿದೆ ಎಂದು ನಾನು ಹೇಳಿದ ಮಾತು ಸತ್ಯವೆನ್ನುವುದು ಮತ್ತಷ್ಟು ಸಾಬೀತಾಗುತ್ತಿದೆ, ನನ್ನ ಸಾದೃಶ್ಯ ಸರಿಯಾಗಿದೆ ಎನಿಸುತ್ತಿದೆ ಎಂದು ಬರೆದುಕೊಂಡಿದ್ದಾರೆ.
ನಿರ್ಮಾಣದ ವೇಳೆ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಬೃಹನ್ ಮುಂಬೈ ಮಹಾನಗರ ಪಾಲಿಕೆ ಕಂಗನಾ ರಾನಾವತ್ ಅವರ ಕಚೇರಿಯ ಒಂದು ಭಾಗವನ್ನು ಕಳೆದ 9ರಂದು ಧ್ವಂಸಗೊಳಿಸಿತ್ತು. ಇದು ಶಿವಸೇನೆಯ ರಾಜಕೀಯ ಪಿತೂರಿ ಕೃತ್ಯ ಎಂದು ಕಂಗನಾ ಆರೋಪಿಸಿದ್ದರು. ಇದಕ್ಕೂ ಮುನ್ನ ಮುಂಬೈಯನ್ನು ಪಾಕ್ ಆಕ್ರಮಿತ ಕಾಶ್ಮೀರ ಎಂದು ಹೋಲಿಸಿ ಕಂಗನಾ ಮತ್ತು ಶಿವಸೇನಾ ನಾಯಕರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು.
ಹಿಂದಿಯಲ್ಲಿ ಮತ್ತೊಂದು ಟ್ವೀಟ್ ನಲ್ಲಿ ಕಂಗನಾ, ನಮ್ಮನ್ನು ಕಾಪಾಡುವವರೇ ಕೊಲ್ಲುವವರಾದಾಗ ಅವರು ಪ್ರಜಾಪ್ರಭುತ್ವಕ್ಕೆ ನೋವುಂಟುಮಾಡುವವರು, ಧಕ್ಕೆ ತರುವವರು ಆಗಿರುತ್ತಾರೆ. ನಾನು ದುರ್ಬಳಲು ಎಂದು ಭಾವಿಸಿಕೊಂಡು ದೊಡ್ಡ ತಪ್ಪು ಮಾಡುತ್ತಿದ್ದಾರೆ. ನನ್ನನ್ನು ಹೆದರಿಸಲು ಪ್ರಯತ್ನಿಸುವ ಮೂಲಕ, ನನ್ನನ್ನು ಕೀಳಾಗಿ ನೋಡುವ ಮೂಲಕ, ಅವರು ತಮ್ಮ ನಿಜವಾದ ರೂಪವನ್ನು, ಬುದ್ದಿಯನ್ನು ತೋರಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ನಿನ್ನೆ ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೊಶ್ಯಾರಿ ಅವರನ್ನು ಭೇಟಿ ಮಾಡಿದ್ದ ನಟಿ ಕಂಗನಾ ತಮಗೆ ಸರ್ಕಾರ ಮುಂಬೈಯಲ್ಲಿ ಉಳಿದುಕೊಳ್ಳಲು ತೊಂದರೆ, ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


