Jio

ಫೆಬ್ರವರಿಯಲ್ಲಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡ ವೊಡಾಫೋನ್ ಐಡಿಯಾ, ಜಿಯೋಗೆ 62.5 ಲಕ್ಷ ಸೇರ್ಪಡೆ!
ವೊಡಾಫೋನ್ ಐಡಿಯಾ ಫೆಬ್ರವರಿ ತಿಂಗಳಲ್ಲಿ ಬರೋಬ್ಬರಿ 34.6 ಲಕ್ಷ ಗ್ರಾಹಕರನ್ನು ಕಳೆದುಕೊಂಡಿದ್ದು ಈ ವೇಳೆ ರಿಲಯನ್ಸ್ ಜಿಯೋ ಮಾತ್ರ 62.57 ಲಕ್ಷ ಮಂದಿ ಸೇರ್ಪಡೆಗೊಂಡಿದ್ದಾರೆ ಎಂದು ಟ್ರಾಯ್ ಮಾಹಿತಿ ನೀಡಿದೆ.

ಜಿಯೋದಿಂದ ಹೊಸ ವರ್ಕ್ ಫ್ರಮ್ ಹೋಮ್ ತ್ರೈಮಾಸಿಕ ಯೋಜನೆ ಪ್ರಕಟ
ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.

ಜಿಯೋ ಜೊತೆ ಕೈ ಜೋಡಿಸಿದ ಫೇಸ್ ಬುಕ್: ಪುಟಿದೆದ್ದ ಷೇರುಮಾರುಕಟ್ಟೆ
ಸಾಮಾಜಿಕ ಜಾಲತಾಣ ದೈತ್ಯ ಫೇಸ್ ಬುಕ್ ರಿಲಾಯನ್ಸ್ ಇಂಡಸ್ಟ್ರೀಸ್ ಜೊತೆ ಕೈ ಜೋಡಿಸಿದ ಬೆಳವಣಿಗೆ ಬೆನ್ನಲ್ಲೇ ಷೇರುಮಾರುಕಟ್ಟೆ ಪುಟಿದೆದ್ದಿದೆ.

ಮುಕೇಶ್ ಅಂಬಾನಿಯ ಜಿಯೊ ಜೊತೆ ಕೈಜೋಡಿಸಿದ ಫೇಸ್ ಬುಕ್: ಈ ಬಗ್ಗೆ ಮಾರ್ಕ್ ಝುಕರ್ ಬರ್ಗ್ ಹೇಳಿದ್ದೇನು?
ಸೋಷಿಯಲ್ ಮೀಡಿಯಾ ಕಂಪೆನಿ ಫೇಸ್ ಬುಕ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಜೊತೆ ಕೈಜೋಡಿಸಿ ಜಿಯೊಮಾರ್ಟ್ ನಲ್ಲಿ ಹೂಡಿಕೆ ಮಾಡಿ ವಾಣಿಜ್ಯ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ.

ರಿಲಯನ್ಸ್ ಜೊತೆ ಕೈಜೋಡಿಸಿದ ಫೇಸ್ ಬುಕ್: ಜಿಯೊ ಟೆಲಿಕಾಂನಲ್ಲಿ ಶೇ. 10ರಷ್ಟು ಹೂಡಿಕೆ
ಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೊದಲ್ಲಿ ಶೇಕಡಾ 10ರಷ್ಟು ಹೂಡಿಕೆ ಮಾಡುವುದಾಗಿ ಫೇಸ್ ಬುಕ್ ಬುಧವಾರ ಪ್ರಕಟಿಸಿದೆ.

ವರ್ಕ್ ಫ್ರಮ್ ಹೋಮ್ ಗೆ ಪೂರಕವಾಗಿ ಜಿಯೋದಿಂದ ಹೊಸ ಯೋಜನೆ
ಜಿಯೋ ತನ್ನ ಬಳಕೆದಾರರಿಗೆ ತನ್ನ ಹಳೆಯ ರಿರ್ಚಾಜ್ ವೋಚರ್‌ಗಳ ಬದಲಾಯಿಸಿದ್ದು, ಡಬಲ್ ಡೇಟಾ ಮತ್ತು ಹೆಚ್ಚುವರಿ ಬೇರೆ ನೆಟ್‌ವರ್ಕ್‌ಗಳಿಗೆ ಕರೆ ಮಾಡುವ ಟಾಕ್‌ಟೈಮ್ ಒದಗಿಸಲು ಮಂದಾಗಿದೆ.

ಕೊರೋನಾ ವೈರಸ್ ಕುರಿತು ಅರಿವು ಮೂಡಿಸಲು ಕಾಲರ್ ಟ್ಯೂನ್ ಬಳಕೆ
ಚೀನಾದಲ್ಲಿ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ಇದೀಗ ಭಾರತದಲ್ಲೂ ಭೀತಿಯನ್ನು ಹುಟ್ಟಿಸಿದ್ದು, ಈ ಹಿನ್ನೆಲೆಯಲ್ಲಿ ವೈರಸ್ ಕುರಿತು ಅರಿವು ಮೂಡಿಸುವ ಸಲುವಾಗಿ ರಿಂಗ್ ಟೋನ್ ಬದಲಿಗೆ ಕೊರೋನಾ ಜಾಗೃತಿ ಕುರಿತ ಸಂದೇಶಗಳನ್ನು ಕಾಲ್ ಟ್ಯೂನ್ ಆಗಿ ಹಾಕುವಂತೆ ಟಲಿಕಾಂ ಇಲಾಖೆ (ಡಿಒಟಿ) ಟೆಲಿಕಾಂ ಆಪರೇಟರ್ ಗಳಿಗೆ ಸೂಚಿಸಿದೆ ಎಂದು ತಿಳಿದುಬಂದಿದೆ.

ಜಿಯೋ ಲಾಭ ರೂ.1,350 ಕೋಟಿ, ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5ರಷ್ಟು ಏರಿಕೆ!
ಡಿಸೆಂಬರ್ 31, 2019 ಕ್ಕೆ ಅಂತ್ಯವಾದ 2019-20ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ನಿವ್ವಳ ಲಾಭದಲ್ಲಿ ಶೇ.13.5 ರಷ್ಟು ಏರಿಕೆಯಾಗಿದ್ದು, ಇದರ ಮೌಲ್ಯ 11,640 ಕೋಟಿ ರೂಪಾಯಿಗಳಾಗಿದೆ.

ಹಳೆ ಪ್ಲಾನ್ ಮರುಪರಿಚಯಿಸಿದ ಜಿಯೋ ...: ಹೀಗಿದೆ ವಿವರ
ಗ್ರಾಹಕರಿಗೆ ಅತ್ಯಾಕರ್ಷಕ ವಾಯ್ಸ್ ಕಾಲ್ ಯೋಜನೆಗಳನ್ನು ನೀಡುವ ವಿಷಯದ್ಲಲಿ ಟೆಲಿಕಾಂ ಕ್ಷೇತ್ರದಲ್ಲಿ ಮತ್ತೊಮ್ಮೆ ಪೈಪೋಟಿ ನಡೆಯುತ್ತಿದೆ.

