ಜಿಯೋದಿಂದ ಹೊಸ ವರ್ಕ್ ಫ್ರಮ್ ಹೋಮ್ ತ್ರೈಮಾಸಿಕ ಯೋಜನೆ ಪ್ರಕಟ
ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.

ಬೆಂಗಳೂರು: ಪ್ರಿಪೇಯ್ಡ್ ಬಳಕೆದಾರರಿಗಾಗಿ ರಿಲಯನ್ಸ್ ಜಿಯೋ ಶುಕ್ರವಾರ ಮತ್ತೊಂದು ಹೆಚ್ಚಿನ ಡೇಟಾವನ್ನು ನೀಡುವ ವರ್ಕ್ ಫ್ರಮ್ ಹೋಮ್ ಯೋಜನೆಯನ್ನು ಪ್ರಕಟಿಸಿದೆ. ಈ ಬಾರಿ ತ್ರೈಮಾಸಿಕ ಯೋಜನೆ ಲಾಂಚ್ ಆಗಿದ್ದು , ದಿನಕ್ಕೆ 3 ಜಿಬಿಯನ್ನು ಕೇವಲ ರೂ 999 ಕ್ಕೆ 84 ದಿನಗಳವರೆಗೆ ನೀಡುತ್ತದೆ.
ಈ ಹೊಸ ಯೋಜನೆಯು ಜಿಯೋದಿಂದ ಜಿಯೋ ಮತ್ತು ಲ್ಯಾಂಡ್‌ಲೈನ್‌ಗೆ ಉಚಿತ ಮತ್ತು ಅನಿಯಮಿತ ಕರೆ ಮಾಡುವ ಅವಕಾಶವನ್ನು ನೀಡುತ್ತದೆ. ಅಲ್ಲದೆ ಇದರೊಂದಿಗೆ ಜಿಯೋದಿಂದ ಇತರ ಮೊಬೈಲ್‌ಗೆ 3,000 ನಿಮಿಷಗಳ ಕರೆಗಳನ್ನು ಮಾಡುವ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಉಚಿತವಾಗಿ ನೀಡುತ್ತದೆ ಮತ್ತು ನಿತ್ಯ 3 ಜಿಬಿ ಹೈ-ಸ್ಪೀಡ್ ಡೇಟಾವನ್ನು ಮತ್ತು ನಂತರ 64 ಕೆಬಿಪಿಎಸ್ ನಲ್ಲಿ ಅನಿಯಮಿತ ಡೇಟಾ ಬಳಕೆ ಅವಕಾಶ ಮಾಡಿಕೊಡುತ್ತಿದೆ, ಜೊತೆಗೆ ಬಳಕೆದಾರರಿಗೆ ಜಿಯೋ ಆಪ್ಸ್ ಗಳನ್ನು ಉಚಿತವಾಗಿ ಬಳಕೆ ಮಾಡುವ ಅವಕಾಶವನ್ನು ನೀಡುತ್ತಿದೆ.
ಲಾಕ್‌ಡೌನ್ ಆದಾಗಿನಿಂದಲೂ ಹೆಚ್ಚಿನ ಮಂದಿ ವರ್ಕ್ ಫ್ರಮ್ ಹೋಮ್ ಮಾಡುತ್ತಿದ್ದಾರೆ. ಇದರಿಂದಾಗಿ ಹೆಚ್ಚಿನ ವೇಗದ ಡೇಟಾದ ಅಗತ್ಯವು ಹೆಚ್ಚಾಗಿದೆ. ಇದರೊಂದಿಗೆ ಮನೆಯಲ್ಲಿಯೇ ಇರುವುದರಿಂದ ಹೆಚ್ಚಿನ ಮನರಂಜನೆಗಾಗಿ ಹುಡುಕುತ್ತಿದ್ದಾರೆ. ಈ ಅಗತ್ಯವನ್ನು ಪರಿಗಣಿಸಿ, ಜಿಯೋ ಈ ಹೊಸ ವರ್ಕ್ ಫ್ರಮ್ ಹೋಮ್ ತ್ರೈಮಾಸಿಕ ಪ್ಲಾನ್ ಅನ್ನು ಲಾಂಚ್ ಮಾಡಿದ್ದಾರೆ.
ರಿಲಯನ್ಸ್ ಜಿಯೋ 999 ರೂ. ಪ್ರಿಪೇಯ್ಡ್ ಪ್ಯಾಕ್ 84 ದಿನಗಳ ವ್ಯಾಲಿಡಿಟಿ ಹೊಂದಿದೆ. ದಿನಕ್ಕೆ 3GB ಡೇಟಾ ದೊರೆಯಲಿದ್ದು, ಅಂದರೆ ಒಟ್ಟಾರೆ 252 ಜಿಬಿ ಹೈ ಸ್ಪೀಡ್ ಡೇಟಾ ಲಭ್ಯವಾಗುತ್ತದೆ. ಮತ್ತೆ ಜಿಯೋದಿಂದ ಜಿಯೋ ಅನಿಯಮಿತ ಕರೆ ಮಾತ್ರವಲ್ಲದೆ, ಇತರ ನೆಟ್‌ವರ್ಕ್‌ಗೂ 3,000 ನಿಮಿಷಗಳ ಕರೆ ಪ್ರಯೋಜನ ನೀಡಲಾಗಿದೆ. ಜತೆಗೆ ಜಿಯೋ ಸೇವೆಗಳಿಗೆ ಉಚಿತ ಪ್ರವೇಶ, ದಿನಕ್ಕೆ 100 ಎಸ್‌ಎಂಎಸ್ ಕೂಡ ದೊರೆಯಲಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


