Islamabad

"ಏಪ್ರಿಲ್ ಫೂಲ್" ಸುದ್ದಿಗೆ ಪ್ರತಿಕ್ರಿಯೆ ನೀಡಿ ಅಪಹಾಸ್ಯಕ್ಕೀಡಾದ ಪಾಕ್ ಮಾಜಿ ಸಚಿವ!
ಸುದ್ದಿ ಸಂಸ್ಥೆಯೊಂದರ ಸುಳ್ಳು ಸುದ್ದಿಯನ್ನು ನಂಬಿ ಸರ್ಕಾರದ ವಿರುದ್ಧ ಹರಿಹಾಯುವ ಮೂಲಕ ಪಾಕಿಸ್ತಾನ ಮಾಜಿ ಸಚಿವ ರೆಹಮಾನ್ ಮಲ್ಲಿಕ್ ಅಪಹಾಸ್ಯಕ್ಕೀಡಾಗಿದ್ದಾರೆ.

ಗಿಲ್ಗಿಟ್-ಬಾಲ್ಟಿಸ್ತಾನ್ ಗೆ 5 ನೇ ಪ್ರಾಂತ್ಯದ ಸ್ಥಾನಮಾನ; ಪಾಕ್ ವಿರುದ್ಧ ತಿರುಗಿ ಬಿದ್ದ ವಕೀಲರು!
ಗಿಲ್ಗಿಟ್ ಮತ್ತು ಬಾಲ್ಟಿಸ್ತಾನ್ ಗೆ 5ನೇ ಪ್ರಾಂತ್ಯದ ಸ್ಥಾನಮಾನ ನೀಡಲು ಹೊರಟಿರುವ ಪಾಕಿಸ್ತಾನ ಸರ್ಕಾರದ ಕ್ರಮಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ನಿವಾಸಿಗಳು ವ್ಯಾಪಕ ಆಕ್ರೋಶ ವ್ಯಕ್ತಪಡಿಸುತ್ತಿದ್ದು, ಇದೀಗ ನಿವಾಸಿಗಳ ಪ್ರತಿಭಟನೆಗೆ ಸ್ಥಳೀಯ ವಕೀಲರು ಕೂಡ ಕೈ ಜೋಡಿಸಿದ್ದಾರೆ.

ಬೂಮ್ ಬೂಮ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ!
ಪಾಕಿಸ್ತಾನದ ಸ್ಫೋಟಕ ಬ್ಯಾಟ್ಸಮನ್ ಹಾಗೂ ಮಾಜಿ ನಾಯಕ ಶಾಹಿದ್ ಅಫ್ರಿದಿ ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಭಾನುವಾರ ವಿದಾಯ ಹೇಳಿದ್ದಾರೆ.

ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಈಗಲೇ ಒಪ್ಪಿಸಿ; ಆಫ್ಘಾನಿಸ್ತಾನದ ಮೇಲೆ ಪಾಕಿಸ್ತಾನ ಒತ್ತಡ
ಕರಾಚಿಯಲ್ಲಿ ಇಸಿಸ್ ಉಗ್ರರು ನಡೆಸಿದ ಭೀಕರ ಬಾಂಬ್ ದಾಳಿ ಬೆನ್ನಲ್ಲೇ ಉಗ್ರರ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಪಾಕಿಸ್ತಾನ ಸರ್ಕಾರ ತನ್ನ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿರುವ 76 ಉಗ್ರರನ್ನು ಕೂಡಲೇ ತಮಗೊಪ್ಪಿಸಬೇಕು ಎಂದು ಆಫ್ಘಾನಿಸ್ತಾನ ಸರ್ಕಾರದ ಮೇಲೆ ಒತ್ತಡ ಹಾಕಿದೆ.

ಉಗ್ರ ಹಫೀಜ್ ಸಯ್ಯೀದ್ ಗೃಹಬಂಧನ: "ಜೆಯುಡಿ" ಈಗ "ತೆಹ್ರಿಕ್ ಆಜಾದಿ ಜಮ್ಮು ಕಾಶ್ಮೀರ್"
ಭಾರತ ಮತ್ತು ಅಮೆರಿಕದ ಸತತ ಒತ್ತಡಕ್ಕೆ ಮಣಿದ ಪಾಕಿಸ್ತಾನ ಸರ್ಕಾರ ಜಮಾದ್ ಉದ್ ದವಾ ಉಗ್ರ ಸಂಘಟನೆಯ ಮುಖ್ಯಸ್ಥ ಹಫೀಜ್...

ಪಾಕ್ ಸಂಸತ್ ನಲ್ಲೇ ಸಂಸದೆ ಮೇಲೆ ದೌರ್ಜನ್ಯ, ಕ್ರಮ ಕೈಗೊಳ್ಳದಿದ್ದರೆ ಆತ್ಯಹತ್ಯೆ ಮಾಡಿಕೊಳ್ಳುತ್ತೇನೆ ಎಂದ ಸಂಸದೆ!
ಪಾಕಿಸ್ತಾನ ಸಂಸತ್ ಇತಿಹಾಸದಲ್ಲೇ ದೊಡ್ಡ ಪ್ರಮಾದವೊಂದು ನಡೆದಿದ್ದು, ಮಹಿಳಾ ಸಂಸದೆಯೊಬ್ಬರ ಮೇಲೆ ಸದನದಲ್ಲೇ ದೌರ್ಜನ್ಯ ಮಾಡಿದ್ದಷ್ಟೇ ಅಲ್ಲದೇ ಅವರನ್ನು ರೂಮಿಗೆ ಬರುವಂತೆ ಅಸಭ್ಯವಾಗಿ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಗ್ವಾದರ್ ಬಂದರು ರಕ್ಷಣೆಗೆ ಚೀನಾದ 2 ನೌಕೆ ನಿಯೋಜನೆ!
ಚೀನಾ-ಪಾಕಿಸ್ತಾನ ಎಕನಾಮಿಕ್ ಕಾರಿಡಾರ್ ಒಪ್ಪಂದದ ಪ್ರಮುಖ ಮಾರ್ಗವಾಗಿರುವ ಗ್ವಾದರ್ ಬಂದರು ರಕ್ಷಣೆಗೆ ಚೀನಾ ಸೇನೆ ತನ್ನ 2 ಯುದ್ಧವಿಮಾನಗಳನ್ನು ಪಾಕಿಸ್ತಾನಕ್ಕೆ ಹಸ್ತಾಂತರಿಸಿದೆ ಎಂದು ತಿಳಿದುಬಂದಿದೆ.

ಪಾಕ್ ಕ್ರಿಕೆಟ್ ತಂಡ ಸೇರಲಿದ್ದಾರೆ ಮೊದಲ ಸಿಖ್ ಕ್ರಿಕೆಟಿಗ!
ಪಾಕಿಸ್ತಾನ ತಂಡದಲ್ಲಿ ಇದೇ ಮೊದಲ ಬಾರಿಗೆ ಸಿಖ್ ಸಮುದಾಯದ ಆಟಗಾರನೊಬ್ಬ ಸ್ಥಾನ ಪಡೆದಿದ್ದಾನೆ.

ನಿವೃತ್ತಿ ಇಲ್ಲ, ಕ್ರಿಕೆಟ್ ಮುಂದುವರೆಸುತ್ತೇನೆ: ಮತ್ತೆ ಯೂಟರ್ನ್ ಹೊಡೆದ ಅಫ್ರಿದಿ
ಟಿ20 ವಿಶ್ವಕಪ್ ಸೋಲಿನ ಬಳಿಕ ಅಂತಾರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವುದಾಗಿ ಹೇಳಿದ್ದ ಪಾಕಿಸ್ತಾನ ಕ್ರಿಕೆಟಿಗ ಶಾಹಿದ್ ಅಫ್ರಿದಿ ಇದೀಗ ತಾವು ನಿವೃತ್ತಿಯಾಗುವುದಿಲ್ಲ ಎಂದು ಹೇಳಿದ್ದಾರೆ.

