Islamabad

ಬೌದ್ಧಗುರು ದಲೈಲಾಮರನ್ನು ಉಗ್ರ ಎಂದು ಕರೆದು ಉಗಿಸಿಕೊಂಡ ಪಾಕ್ ಪತ್ರಕರ್ತ!
ಪುಲ್ವಾಮ ಉಗ್ರ ದಾಳಿಯ ಮಾಸ್ಟರ್ ಮೈಂಡ್ ಹಾಗೂ ಜೈಶ್ ಇ ಮೊಹಮದ್ ಉಗ್ರ ಸಂಘಟನೆಯ ಸಂಸ್ಥಾಪಕ ಮಸೂಗ್ ಅಜರ್ ನನ್ನು ಬೆಂಬಲಿಸುವ ಭರದಲ್ಲಿ ಪಾಕಿಸ್ತಾನದ ಪತ್ರಕರ್ತನೋರ್ವ ಬೌದ್ಧಗುರು ದಲೈಲಾಮರನ್ನು ಉಗ್ರಗಾಮಿ ಎಂದು ಕರೆದು ಸಾಮಾಜಿಕ ಜಾಲತಾಣಗಳಲ್ಲಿ ಉಗಿಸಿಕೊಳ್ಳುತ್ತಿದ್ದಾನೆ.

'ಬಾಲಾಕೋಟ್ ನಲ್ಲಿ ಏನೂ ಆಗಿಲ್ಲ.. ದರ್ ನಂತಹವರು ಸಾಕಷ್ಟಿದ್ದಾರೆ, ಯಾವಾಗ ಬೇಕಾದ್ರೂ ಬರಬಹುದು'
ನಾನು ಸತ್ತಿಲ್ಲ ಬದುಕಿದ್ದೇನೆ.. ಅಂತೆಯೇ ನನಗೇನೂ ಆಗಿಲ್ಲ.. ನನ್ನ ಮೂತ್ರಪಿಂಡಗಳು ಆರೋಗ್ಯವಾಗಿವೆ.. ಬಿಲ್ಲುಬಾಣಗಳೊಂದಿಗೆ ಮೋದಿಯೊಂದಿಗೂ ಸ್ಪರ್ಧೆಗಿಳಿಯಬಲ್ಲೆ ಎಂದು ಜೈಶ್ ಇ ಮೊಹಮದ್ ಉಗ್ರ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್ ಹೇಳಿದ್ದಾನೆ.

ಲೋಕಸಭಾ ಚುನಾವಣೆ ಬಳಿಕ ಭಾರತದೊಂದಿಗೆ ಪಾಕ್ ಉತ್ತಮ ಬಾಂಧವ್ಯ ಹೊಂದಲಿದೆ: ಇಮ್ರಾನ್ ಖಾನ್
ಲೋಕಸಭಾ ಚುನಾವಣೆ ಬಳಿಕ ಪಾಕಿಸ್ತಾನ ಭಾರತದೊಂದಿಗೆ ಉತ್ತಮ ಬಾಂಧವ್ಯ ಹೊಂದಲಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಬಾಲಾಕೋಟ್ ನಿಂದ ಖೈಬರ್ ಪಕ್ತುಂಕ್ವಾಗೆ 200ಕ್ಕೂ ಹೆಚ್ಚು ಉಗ್ರರ ಶವಗಳ ರವಾನೆ: ಗಿಲ್ಗಿಟ್ ನಲ್ಲಿರುವ ಅಮೆರಿಕ ಕಾರ್ಯಕರ್ತನ ಹೇಳಿಕೆ
ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದು ಗಿಲ್ಗಿಟ್ ನಲ್ಲಿರುವ ಅಮೆರಿಕ ಹೋರಾಟಗಾರರೊಬ್ಬರು ಹೇಳಿದ್ದಾರೆ.

ಸೇನಾ ಕ್ಯಾಪ್ ಧರಿಸಿ ಆಟವಾಡಿದ ಭಾರತೀಯ ಕ್ರಿಕೆಟಿಗರು, ಬಿಸಿಸಿಐ ವಿರುದ್ದ ಕ್ರಮಕ್ಕೆ ಒತ್ತಾಯಿಸಿದ ಪಿಸಿಬಿ
ಮೂರನೇ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯದಲ್ಲಿ ಭಾರತೀಯ ಕ್ರಿಕೆಟಿಗರು ಸೇನಾ ಕ್ಯಾಪ್ ಧರಿಸಿ ಆಟವಾಡಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಕೆಂಗಣ್ಣಿಗೆ ಗುರಿಯಾಗಿದ್ದು, ಬಿಸಿಸಿಐ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಐಸಿಸಿಯನ್ನು ಒತ್ತಾಯಿಸಿದೆ.

ಭಾರತೀಯ ವಾಯುದಾಳಿ ಬೆನ್ನಲ್ಲೇ ಎಚ್ಚೆತ್ತ ಪಾಕ್: ಉಗ್ರ ಮಸೂದ್ ಅಜರ್ ಕುಟುಂಬ ವಶಕ್ಕೆ!
ಪುಲ್ವಾಮ ಉಗ್ರದಾಳಿ ಬೆನ್ನಲ್ಲೇ ಭಾರತೀಯ ವಾಯುಪಡೆ ನಡೆಸಿದ ವಾಯುದಾಳಿ ಬಳಿಕ ಇದೀಗ ಎಚ್ಚೆತ್ತುಕೊಂಡಿರುವ ಪಾಕಿಸ್ತಾನ ಸರ್ಕಾರ ಉಗ್ರ ಮಸೂದ್ ಅಜರ್ ಕುಟುಂಬಸ್ಥರನ್ನು ಮುಂಜಾಗ್ರತಾ ಕ್ರಮವಾಗಿ ವಶಕ್ಕ ಪಡೆದಿದೆ ಎಂದು ತಿಳಿದುಬಂದಿದೆ.

ನೊಬೆಲ್ ಶಾಂತಿ ಪಡೆವ ಅರ್ಹತೆ ನನಗಿಲ್ಲ, ಕಾಶ್ಮೀರ ಸಮಸ್ಯೆ ಬಗೆಹರಿಸಿದವರಿಗೆ ಅದು ಸೂಕ್ತ: ಇಮ್ರಾನ್ ಖಾನ್
ಕಾಶ್ಮೀರಿಗಳ ಭಾವನೆಗೆ ತಕ್ಕಂತೆ ಕಾಶ್ಮೀರ ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಿದವರಿಗೆ ನೊಬೆಲ್ ಶಾಂತಿ ಪುರಸ್ಕಾರ ನೀಡಬೇಕು ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಪಿಒಕೆಯಲ್ಲಿ ಐಎಎಫ್ ಏರ್ ಸ್ಟ್ರೈಕ್; ನಟಿ ಪ್ರಿಯಾಂಕ ಛೋಪ್ರಾ ವಿರುದ್ಧ ಪಾಕಿಸ್ತಾನ ದೂರು
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಸೇನೆ ನಡೆಸಿದ ವಾಯುದಾಳಿಯನ್ನು ಪ್ರಶಂಸಿದ್ದ ಬಾಲಿವುಡ್ ನಟಿ ಪ್ರಿಯಾಂಕಾ ಛೋಪ್ರಾ ವಿರುದ್ಧ ಪಾಕಿಸ್ತಾನ ದೂರು ದಾಖಲಿಸಿದೆ.

ಉಗ್ರನೆಲೆಗಳಲ್ಲ, ಪ್ರಕೃತಿನಾಶವಾಗಿದೆ: ಭಾರತದ ವಿರುದ್ಧ ವಿಶ್ವಸಂಸ್ಥೆಯಲ್ಲಿ ಪಾಕ್ ನಿಂದ'ಇಕೋ ಟೆರರಿಸಂ' ದೂರು
ಭಾರತೀಯ ವಾಯುಸೇನೆ ಕಳೆದ ಫೆಬ್ರವರಿ 26ರಂದು ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ನಡೆಸಿದ್ದ ವಾಯುದಾಳಿಯಲ್ಲಿ ಉಗ್ರನೆಲೆಗಳು ನಾಶವಾಗಿಲ್ಲ, ಬದಲಿಹೆ ಪ್ರಕೃತಿನಾಶವಾಗಿದೆ. ಈ ಬಗ್ಗೆ ವಿಶ್ವಸಂಸ್ಥೆಯಲ್ಲಿ ತಾವು ಇಕೋ ಟೆರರಿಸಮ್ ದೂರು ದಾಖಲಿಸುವುದಾಗಿ ಪಾಕಿಸ್ತಾನ ಹೇಳಿದೆ.

