ಬಾಲಾಕೋಟ್ ನಿಂದ ಖೈಬರ್ ಪಕ್ತುಂಕ್ವಾಗೆ 200ಕ್ಕೂ ಹೆಚ್ಚು ಉಗ್ರರ ಶವಗಳ ರವಾನೆ: ಗಿಲ್ಗಿಟ್ ನಲ್ಲಿರುವ ಅಮೆರಿಕ ಕಾರ್ಯಕರ್ತನ ಹೇಳಿಕೆ
ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದು ಗಿಲ್ಗಿಟ್ ನಲ್ಲಿರುವ ಅಮೆರಿಕ ಹೋರಾಟಗಾರರೊಬ್ಬರು ಹೇಳಿದ್ದಾರೆ.

Published On :
ಇಸ್ಲಾಮಾಬಾದ್: ಬಾಲಾಕೋಟ್ ನಲ್ಲಿ ಭಾರತೀಯ ವಾಯುಸೇನೆ ನಡೆಸಿದ ವಾಯುದಾಳಿಯಲ್ಲಿ 200ಕ್ಕೂ ಅಧಿಕ ಮಂದಿ ಸಾವನ್ನಪ್ಪಿದ್ದು, ಬಾಲಾಕೋಟ್ ಕ್ಯಾಂಪ್ ನಿಂದ ಶವಗಳನ್ನು ಖೈಬರ್ ಫಕ್ತುಂಕ್ವಾ ಪ್ರಾಂತ್ಯಕ್ಕೆ ರವಾನೆ ಮಾಡಲಾಗುತ್ತಿತ್ತು ಎಂದು ಗಿಲ್ಗಿಟ್ ನಲ್ಲಿರುವ ಅಮೆರಿಕ ಹೋರಾಟಗಾರರೊಬ್ಬರು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಮೆರಿಕ ಮೂಲದ ಹೋರಾಟಗಾರ ಸೆಂಗೆ ಹಸ್ನಾನ್ ಸೆರಿಂಗ್, ಟ್ವೀಟ್ ಮಾಡಿದ್ದು, ಟ್ವೀಟ್ ನಲ್ಲಿ ಬಾಲಾಕೋಟ್ ಕ್ಯಾಂಪ್ ನಿಂದ ಪಾಕಿಸ್ತಾನ ಸೇನೆ ಹಲವು ಶವಗಳನ್ನು ಖೈಬರ್ ಪಕ್ತುಂಕ್ವಾ ಮತ್ತು ಅದರ ಸುತ್ತಮುತ್ತಲಿನ ಬುಡಕಟ್ಟು ಪ್ರಾಂತ್ಯಗಳಿಗೆ ರವಾನೆ ಮಾಡಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಇದಕ್ಕೂ ಪೂರಕವೆಂಬಂತೆ ದಾಳಿ ಬಳಿಕ ಬಾಲಾಕೋಟ್ ಕ್ಯಾಂಪ್ ಗೆ ಭೇಟಿ ನೀಡಿದ್ದ ಪಾಕಿಸ್ತಾನ ಸೇನಾಧಿಕಾರಿಗಳ ವಿಡಿಯೊವೊಂದನ್ನೂ ಕೂಡ ಅಪ್ಲೋಡ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಲ್ಲಿನ ಬುಡಕಟ್ಟು ನಾಯಕರೊಂದಿಗೆ ಮಾತನಾಡಿರುವ ಸೇನಾಧಿಕಾರಿಯೊಬ್ಬರು 'ಜಿಹಾದ್ ಗಾಗಿ ನಮ್ಮ 200ಕ್ಕೂ ಅಧಿಕ ಮಂದಿ ಹುತಾತ್ಮರಾಗಿದ್ದಾರೆ. ಪಾಕಿಸ್ತಾನಕ್ಕಾಗಿ ಅವರ ಮಾಡುತ್ತಿದ್ದ ಹೋರಾಟದಿಂದಾಗಿ ಅವರು ಅಲ್ಲಾಹುನ ಪ್ರೀತಿ ಪಾತ್ರರಾಗಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾನೆ. ಆದರೆ ವಿಡಿಯೋ ಕುರಿತು ಮಾತನಾಡಿರುವ ಸೆಂಗೆ ಹಸ್ನಾನ್ ಸೆರಿಂಗ್, ವಿಡಿಯೋದಲ್ಲಿ ಪಾಕ್ ಸೇನಾಧಿಕಾರಿ 200ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾನೆಯಾದರೂ, ಸಾವಿನ ನಿಖರ ಸಂಖ್ಯೆಯ ಕುರಿತು ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.
ಒಟ್ಟಾರೆ ಅಮೆರಿಕ ಹೋರಾಟಗಾರರ ಹೇಳಿಕೆಗೆ ಇದೀಗ ಮತ್ತೊಂದು ಸುದ್ದಿನ ಚರ್ಚೆಗೆ ಗ್ರಾಸವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಇಸ್ಲಾಮಾಬಾದ್IslamabadPakistanಪಾಕಿಸ್ತಾನUSಅಮೆರಿಕIndian Air Forceಭಾರತೀಯ ವಾಯು ಸೇನೆಬಾಲಾಕೋಟ್Indian Air StrikeBalakoteಭಾರತೀಯ ವಾಯುದಾಳಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


