ISIS

ಇದೆಲ್ಲವನ್ನು ನಿಲ್ಲಿಸುವಂತೆ ಹೇಳಿದ್ದೆ ಕೇಳಿಲ್ಲ, ನಂಗೆ 4 ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ: ಇಸಿಸ್ ಉಗ್ರನ ಪತ್ನಿ ಕಣ್ಣೀರು!
ಸ್ಫೋಟಕ ತುಂಬಿಕೊಂಡು ದೆಹಲಿಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಇಸಿಸ್ ಉಗ್ರ ಅಬು ಯೂಸೂಫ್ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸೂಫ್ ಪತ್ನಿ ನನಗೆ ನಾಲ್ಕು ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.

ತಮಿಳುನಾಡು ಎಸ್ಐ ಹತ್ಯೆ: ಬೆಂಗಳೂರಿನ ಇಬ್ಬರು ಸೇರಿ 6 ಮಂದಿ ವಿರುದ್ಧ ಎನ್ಐಎ ಚಾರ್ಜ್'ಶೀಟ್
ಜಿಹಾದ್'ನ ಭಾಗವಾಗಿ ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರನ್ನು ಹತ್ಯೆಗೈದಿದ್ದ ಪ್ರಕರಣ ಸಂಬಂಧ ಇಸಿಸಿ ಭಯೋತ್ಪಾದಕ ಹಾಗೂ ಬೆಂಗಳೂರಿನ ಇಬ್ಬರು ಸೇರಿ ಒಟ್ಟು 6 ಮಂದಿ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶುಕ್ರವಾರ ಜಾರ್ಜ್ ಶೀಟ್ ಸಲ್ಲಿಸಿದೆ.

ಕೊರೋನಾ ಲಾಕ್'ಡೌನ್ ಲಾಭ ಪಡೆಯಲು ಉಗ್ರರು ಯತ್ನ: ಕರ್ತವ್ಯನಿರತ ಪೊಲೀಸರ ಮೇಲೆ ದಾಳಿಗೆ ಇಸಿಸ್ ಸಂಚು
ಕೊರೋನಾ ವೈರಸ್ ಮಟ್ಟಹಾಕಲು ದೇಶ ಹೆಣಗಾಡುತ್ತಿರುವ ನಡುವಲ್ಲೇ, ಲಾಕ್ ಡೌನ್ ಲಾಭ ಪಡೆಯಲು ಉಗ್ರರು ಯತ್ನ ನಡೆಸುತ್ತಿದ್ದು, ಲಾಕ್ ಡೌನ್ ವೇಳೆ ಭದ್ರತೆ ನೀಡುತ್ತಿರುವ ದೆಹಲಿ ಪೊಲೀಸ ಮೇಲೆ ದಾಳಿ ನಡೆಸಲು ಸಂಚು ರೂಪಿಸಿದ್ದಾರೆಂದು ವರದಿಗಳಿಂದ ತಿಳಿದುಬಂದಿದೆ.

ಕಾಬುಲ್ ಗುರುದ್ವಾರದ ಮೇಲೆ ದಾಳಿ ಪ್ರಕರಣ: ಸಾವಿನ ಸಂಖ್ಯೆ 27ಕ್ಕೇರಿಕೆ, ದಾಳಿಯ ಹೊಣೆ ಹೊತ್ತ ಇಸಿಸ್, ದಾಳಿಯಲ್ಲಿ ಓರ್ವ ಭಾರತೀಯ ಮೃತ
ಇಡೀ ವಿಶ್ವವೇ ಕೊರೋನಾ ವೈರಸ್ ನಿಂದಾಗಿ ತತ್ತರಿಸಿಹೋಗುತ್ತಿರುವ ಸಮಯದಲ್ಲೇ ಆಫ್ಘಾನಿಸ್ತಾನ ರಾಜಧಾನಿ ಕಾಬುಲ್ ನಲ್ಲಿನ ಗುರುದ್ವಾರದ ಮೇಲೆ ನಡೆದಿದ್ದ ಉಗ್ರ ದಾಳಿಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 27ಕ್ಕೇರಿದ್ದು, ಕುಖ್ಯಾತ ಅಂತಾರಾಷ್ಟ್ರೀಯ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ದಾಳಿ ಹೊಣೆ ಹೊತ್ತಿದೆ.

ಭಯೋತ್ಪಾದಕರಿಗೇ ಭಯ ಹುಟ್ಟಿಸುತ್ತಿದೆ ಕೊರೋನಾ:ಯುರೋಪ್ ಗೆ ಹೋಗದಿರಲು ಉಗ್ರರಿಗೆ ಇಸೀಸ್ ಸೂಚನೆ!
ಕೊರೋನಾ ವೈರಸ್ ಮಹಾಮಾರಿ ಪ್ರಪಂಚದಾದ್ಯಂತ ಹರಡುತ್ತಿದ್ದು, ಭಯೋತ್ಪಾದಕ ಕೃತ್ಯಗಳನ್ನೆಸಗುತ್ತಿದ್ದ ಉಗ್ರರೂ ಸಹ ಈಗ ಕೊರೋನಾ ವೈರಸ್ ಗೆ ಭಯಪಡುತ್ತಿದ್ದಾರೆ.

ಸಿಎಎ ವಿರೋಧಿ ಪ್ರತಿಭಟನೆಗೆ ಪ್ರಚೋದನೆ: ಐಸಿಸ್ ನಂಟು ಹೊಂದಿದ್ದ ದಂಪತಿ ಬಂಧನ
ಇತ್ತೀಚಿನ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗಿಯಾಗಿದ್ದ ಇಬ್ಬರು ಶಂಕಿತ ಇಸ್ಲಾಮಿಕ್ ಸ್ಟೇಟ್ ಖೊರಾಸಾನ್ ಪ್ರಾವಿನ್ಸ್ (ಐಎಸ್ಕೆಪಿ) ಭಯೋತ್ಪಾದಕರನ್ನು ದೆಹಲಿ ಪೋಲೀಸರು ಓಖ್ಲಾದಲ್ಲಿ ಬಂಧಿಸಿದ್ದಾರೆ. ಈ ಮಧ್ಯೆ ಈ ಜೋಡಿ ದೇಶದಲ್ಲಿ ಆತ್ಮಹತ್ಯಾ ದಾಳಿ ನಡೆಸಲು ಯೋಜಿಸುತ್ತಿದ್ದಾರೆ ಎಂದು ಮಾಹಿತಿ ಹೊರಬಿದ್ದಿದೆ.

ಅಫ್ಘಾನ್‌ನಲ್ಲಿ ಭಾರತದ ಮೂಲದವರೂ ಸೇರಿ 59 ತಾಲಿಬಾನ್ ಉಗ್ರರ ಶರಣಾಗತಿ
ಪಶ್ಚಿಮ ಅಫ್ಘಾನಿಸ್ತಾನದ ಮೂರು ಪ್ರಾಂತ್ಯಗಳಲ್ಲಿ 59 ತಾಲಿಬಾನ್ ಉಗ್ರರು ಸರ್ಕಾರಿ ಭದ್ರತಾ ಪಡೆಗಳಿಗೆ ಶರಣಾಗಿದ್ದಾರೆ ಎಂದು ವಿಶೇಷ ಪಡೆಗಳ ಕಮಾಂಡ್ ಮಂಗಳವಾರ ತಿಳಿಸಿದೆ.

ಬಂಧನಕ್ಕೀಡಾದ ಇಸಿಸ್ ಉಗ್ರನ ರವಾನೆ ಮಾಡಲು ಹರ ಸಾಹಸ ಪಟ್ಟ ಭದ್ರತಾ ಪಡೆಗಳು!
ಇರಾಕ್ ನಲ್ಲಿ ಭದ್ರತಾ ಪಡೆಗಳ ನಿದ್ರೆಗೆಡಿಸಿರುವ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆಯ ದೈತ್ಯ ಉಗ್ರನೋರ್ವ ಬಂಧನಕ್ಕೀಡಾಗಿದ್ದು, ಆತನನ್ನು ರವಾನೆ ಮಾಡಲು ಭದ್ರತಾ ಪಡೆಗಳು ಹರ ಸಾಹಸಪಟ್ಟಿವೆ.

ತಲೆಮರೆಸಿಕೊಂಡಿದ್ದ ಬೆಂಗಳೂರು ಜಿಹಾದಿ ಗ್ಯಾಂಗ್ ಲೀಡರ್ ಮೊಹಮ್ಮದ್ ಪಾಷ ಬಂಧಿಸಿದ ಸಿಸಿಬಿ
ಇಸಿಸ್ ಉಗ್ರ ಸಂಘಟನೆ ನಂಟು ಹೊಂದಿದ್ದ ಶಂಕಿತ ಉಗ್ರನೋರ್ವನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸುತ್ತಿದ್ದಾರೆ.

