ದೇಶ

ಇದೆಲ್ಲವನ್ನು ನಿಲ್ಲಿಸುವಂತೆ ಹೇಳಿದ್ದೆ ಕೇಳಿಲ್ಲ, ನಂಗೆ 4 ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ: ಇಸಿಸ್ ಉಗ್ರನ ಪತ್ನಿ ಕಣ್ಣೀರು!

ಸ್ಫೋಟಕ ತುಂಬಿಕೊಂಡು ದೆಹಲಿಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಇಸಿಸ್ ಉಗ್ರ ಅಬು ಯೂಸೂಫ್ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸೂಫ್ ಪತ್ನಿ ನನಗೆ ನಾಲ್ಕು ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ.

ಇದೆಲ್ಲವನ್ನು ನಿಲ್ಲಿಸುವಂತೆ ಹೇಳಿದ್ದೆ ಕೇಳಿಲ್ಲ, ನಂಗೆ 4 ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ: ಇಸಿಸ್ ಉಗ್ರನ ಪತ್ನಿ ಕಣ್ಣೀರು!
ಉಗ್ರನ ಪತ್ನಿ
Published On :

ನವದೆಹಲಿ: ಸ್ಫೋಟಕ ತುಂಬಿಕೊಂಡು ದೆಹಲಿಯ ರಸ್ತೆಯಲ್ಲಿ ತೆರಳುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಇಸಿಸ್ ಉಗ್ರ ಅಬು ಯೂಸೂಫ್ ಎಂಬಾತನನ್ನು ಬಂಧಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಯೂಸೂಫ್ ಪತ್ನಿ ನನಗೆ ನಾಲ್ಕು ಮಕ್ಕಳಿದ್ದಾರೆ ನನ್ನ ಗಂಡನನ್ನು ಬಿಟ್ಟುಬಿಡಿ ಎಂದು ಮನವಿ ಮಾಡಿದ್ದಾರೆ. 

ನನ್ನ ಗಂಡನಿಗೆ ಇದನ್ನೆಲ್ಲಾ ಬಿಟ್ಟುಬಿಡಿ ಎಂದು ಹೇಳಿದ್ದ ಅದಕ್ಕೆ ಆತ ನಿನ್ನ ಪಾಡಿಗೆ ನೀನು ಸುಮ್ಮನಿರು ಎಂದು ಹೇಳಿದ್ದ. ಆತ ನನ್ನ ಮಾತನ್ನು ಕೇಳಿಲ್ಲ. ಪ್ಲೀಸ್ ಆತನನ್ನು ಕ್ಷಮಿಸಿ ಬಿಟ್ಟು ಬಿಡಿ ಎಂದು ಯೂಸೂಫ್ ಪತ್ನಿ ಮನವಿ ಮಾಡಿದ್ದಾಳೆ. 

ಅಷ್ಟೇ ಅಲ್ಲದೆ ಯೂಸೂಫ್ ಪತ್ನಿ ಮನೆಯಲ್ಲಿ ಗನ್ ಪೌಡರ್ ಹಾಗೂ ಇತರೆ ಸ್ಫೋಟಕ ವಸ್ತುಗಳು ಇವೆ ಎಂದು ಹೇಳಿದ್ದಾರೆ. ಇದು ಈ ಹೇಳಿಕೆ ಸಂಚಲನ ಮೂಡಿಸಿದೆ.

ಉಗ್ರ ಅಬು ಯೂಸೂಫ್ ನನ್ನು ದೆಹಲಿಯ ದೌಲಾ ಕುಂವಾ ಏರಿಯಾದಲ್ಲಿ ಪೊಲೀಸರು ಮತ್ತು ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿ ಆತನನ್ನು ಬಂಧಿಸಿತ್ತು. ಆತನ ಬಳಿ ಐಇಡಿ, ಜೊತೆಗೆ ಪಿಸ್ತೂಲ್ ಗಳನ್ನು ವಶಕ್ಕೆ ಪಡೆದಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.