ಭಯೋತ್ಪಾದಕರಿಗೇ ಭಯ ಹುಟ್ಟಿಸುತ್ತಿದೆ ಕೊರೋನಾ:ಯುರೋಪ್ ಗೆ ಹೋಗದಿರಲು ಉಗ್ರರಿಗೆ ಇಸೀಸ್ ಸೂಚನೆ!
ಕೊರೋನಾ ವೈರಸ್ ಮಹಾಮಾರಿ ಪ್ರಪಂಚದಾದ್ಯಂತ ಹರಡುತ್ತಿದ್ದು, ಭಯೋತ್ಪಾದಕ ಕೃತ್ಯಗಳನ್ನೆಸಗುತ್ತಿದ್ದ ಉಗ್ರರೂ ಸಹ ಈಗ ಕೊರೋನಾ ವೈರಸ್ ಗೆ ಭಯಪಡುತ್ತಿದ್ದಾರೆ.

ಕೊರೋನಾ ವೈರಸ್ ಮಹಾಮಾರಿ ಪ್ರಪಂಚದಾದ್ಯಂತ ಹರಡುತ್ತಿದ್ದು, ಭಯೋತ್ಪಾದಕ ಕೃತ್ಯಗಳನ್ನೆಸಗುತ್ತಿದ್ದ ಉಗ್ರರೂ ಸಹ ಈಗ ಕೊರೋನಾ ವೈರಸ್ ಗೆ ಭಯಪಡುತ್ತಿದ್ದಾರೆ.
ಕೋವಿಡ್-19 ಬಗ್ಗೆ ಉಗ್ರ ಸಂಘಟನೆಗಳೂ ಎಚ್ಚರಿಕೆ ವಹಿಸುತ್ತಿದ್ದು, ತನ್ನ ಉಗ್ರರಿಗೆ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾನೆ ಟ್ರಾವಲ್ ಅಡ್ವೈಸರಿ ಕಳಿಸಿಕೊಟ್ಟಿದೆ.
ಟ್ರಾವಲ್ ಅಡ್ವೈಸರಿ ಪ್ರಕಾರ ಭಯೋತ್ಪಾದಕರಿಗೆ ಕೊರೋನಾ ವೈರಸ್ ನಿಂದ ರಕ್ಷಣೆ ಪಡೆಯಲು ಒಂದಷ್ಟು ಸಲಹೆಗಳನ್ನು ನೀಡಲಾಗಿದೆ. ಅವುಗಳಲ್ಲಿ ಯುರೋಪ್ ಗೆ ಪ್ರಯಾಣಿಸುವುದು ಬೇಡ ಎಂಬುದು ಪ್ರಮುಖವಾಗಿದೆ.
ಅದರ ಜೊತೆಗೆ ನೈರ್ಮಲ್ಯ, ಜನ ಸಂಪರ್ಕದಿಂದ ಸಾಧ್ಯವಾದಷ್ಟೂ ದೂರ ಉಳಿಯುವುದು ಸೇರಿದಂತೆ ಸಾಮಾನ್ಯವಾಗಿ ಎಲ್ಲರೂ ಕೊರೋನಾ ವೈರಸ್ ಹರಡದಂತೆ ಎಚ್ಚರ ವಹಿಸಲು ಅನುಸರಿಸುತ್ತಿರುವ ಕ್ರಮಗಳನ್ನು ಕೈಗೊಳ್ಳಲು ಇಸೀಸ್ ಹೇಳಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


