ISI

ಕೇಂದ್ರ ಸರ್ಕಾರ ಐಎಸ್ ಐ ಜೊತೆ ಬೇಕಾದರೆ ಮಾತನಾಡುತ್ತದೆ, ವಿರೋಧ ಪಕ್ಷದವರ ಜೊತೆ ಸಿದ್ಧವಿಲ್ಲ: ಪ್ರಿಯಾಂಕಾ ಗಾಂಧಿ ವಾಗ್ದಾಳಿ
ಕೇಂದ್ರ ಸರ್ಕಾರ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜೊತೆ ಬೇಕಾದರೆ ಮಾತುಕತೆ ನಡೆಸುತ್ತದೆ, ಆದರೆ ವಿರೋಧ ಪಕ್ಷದ ನಾಯಕರ ಜೊತೆ ಕೋವಿಡ್-19 ಪರಿಸ್ಥಿತಿ ಬಗ್ಗೆ ಮಾತನಾಡಲು ಸಿದ್ಧವಿಲ್ಲ ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಗಂಭೀರ ಆರೋಪ ಮಾಡಿದ್ದಾರೆ.

ಪಾಕ್‌ನ ಐಎಸ್ಐಗೆ ಯುದ್ಧ ವಿಮಾನಗಳ ಮಾಹಿತಿ ನೀಡುತ್ತಿದ್ದ ಹೆಚ್ಎಎಲ್ ಅಧಿಕಾರಿ ಅಂದರ್
ಪಾಕಿಸ್ತಾನದ ಗುಪ್ತಚರ ಇಲಾಖೆ ಐಎಸ್ಐಗೆ ಯುದ್ಧ ವಿಮಾನಗಳ ಗೌಪ್ಯ ಮಾಹಿತಿ ರವಾನಿಸುತ್ತಿದ್ದ ಹಿಂದೂಸ್ತಾನ ಏರೋನಾಟಿಕ್ಸ್ ಲಿಮಿಟೆಡ್(ಹೆಚ್ಎಎಲ್) ಉದ್ಯೋಗಿ ದೀಪಕ್ ಶಿರ್ಸತ್ ನನ್ನು ಪೊಲೀಸರು ಬಂಧಿಸಿದ್ದಾರೆ.

ಪಾಕ್ ಐಎಸ್ಐ ಗೆ ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಗೋರಖ್ ಪುರದ ವ್ಯಕ್ತಿಯ ನೇಮಕ: ಸ್ಫೋಟಕ ಮಾಹಿತಿ ಬಹಿರಂಗ!
ಪಾಕಿಸ್ತಾನ ಗುಪ್ತಚರ ಇಲಾಖೆ ಐಎಸ್ಐ ಭಾರತದಲ್ಲಿ ತನಗಾಗಿ ಕೆಲಸ ಮಾಡುವುದಕ್ಕೆ ಗೋರಖ್ ಪುರದ ವ್ಯಕ್ತಿಯೋರ್ವನನ್ನು ಕರಾಚಿಯ ಸೆಕ್ಸ್ ವರ್ಕರ್ ಮೂಲಕ ಬಲೆಗೆ ಕೆಡವಲು ಯತ್ನಿಸಿದ್ದ ಕೃತ್ಯ ಬಹಿರಂಗವಾಗಿದೆ.

ರಾಮ ಮಂದಿರ ಭೂಮಿ ಪೂಜೆಯ ನಂತರ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಐಎಸ್ಐ ಸಂಚು!
ರಾಮ ಮಂದಿರ ಭೂಮಿ ಪೂಜೆಯ ಬೆನ್ನಲ್ಲೇ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.

ಇಸ್ಲಾಮಾಬಾದ್: ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರರಿಂದ ಕಿರುಕುಳ
ಇಸ್ಲಾಮಾಬಾದ್ ನಲ್ಲಿ ಭಾರತೀಯ ರಾಯಭಾರಿಗೆ ಐಎಸ್ಐ ಗೂಢಚಾರು ಕಿರುಕುಳ ನೀಡಿ, ಬೆದರಿಕೆ ಹಾಕಿದ್ದಾರೆ.

ಕಾಶ್ಮೀರದ ಪೊಲೀಸರು, ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಐಎಸ್ಐ ಸೂಚನೆ!
ಕಾಶ್ಮೀರದಲ್ಲಿ ಶಾಂತಿ ಕದಡಲು ಪ್ರಯತ್ನ ಮುಂದುವರೆಸಿರುವ ಪಾಕಿಸ್ತಾನ ತನ್ನ ಗುಪ್ತ ಚರ ಇಲಾಖೆ ಐಎಸ್ಐ ಮೂಲಕ ಭಾರತದ ಪೊಲೀಸರು ಹಾಗೂ ಸರಪಂಚ್ ಗಳ ಮೇಲೆ ದಾಳಿ ನಡೆಸಲು ಭಯೋತ್ಪಾದಕರಿಗೆ ಸಂದೇಶ ರವಾನೆ ಮಾಡಿದೆ.

ಉಗ್ರರು ಒಳನುಸುಳಲು ಮಾರ್ಗ ಹುಡುಕಿ; ಭಾರತದ ಏಜೆಂಟ್ ಗಳಿಗೆ ಐಎಸ್ಐ ಸೂಚನೆ
ಉಗ್ರರು ಭಾರತದೊಳಗೆ ಒಳನುಸುಳಲು ಹೊಸ ಮಾರ್ಗಗಳನ್ನು ಹುಡುಕುವಂತೆ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ತನ್ನ ಏಜೆಂಟ್ ಗಳಿಗೆ ಸೂಚನೆ ನೀಡಿದೆ ಎಂದು ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.

ಅಲ್ ಖೈದಾ ಸಂಘಟನೆಗಳಿಗೆ ತರಬೇತಿ ನೀಡಿದ್ದು ನಾವೇ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಆಘ್ಘಾನಿಸ್ತಾನದಲ್ಲಿ ಯುದ್ಧ ಮಾಡಲು ತಮ್ಮ ದೇಶದ ಸೇನೆ ಮತ್ತು ಪತ್ತೇದಾರಿ ಗುಪ್ತಚರ ಆಂತರಿಕ ಇಲಾಖೆಗಳು ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿದ್ದವು.

ಭಜರಂಗದಳ ಮತ್ತು ಬಿಜೆಪಿಗೆ ಐಎಸ್ಐನಿಂದ ಹಣ: ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲು
ಬಿಜೆಪಿ ಮತ್ತು ಆರೆಸ್ಸೆಸ್ ಸಂಘಟನೆ ಕುರಿತಾಗಿ ಹೇಳಿಕೆ ನಿಡಿದ್ದ ಕಾಂಗ್ರೆಸ್ ಮುಖಂಡ, ಮಾಜಿ ಮುಖ್ಯಮಂತ್ರಿ ದಿಗ್ವಿಜಯ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

