ರಾಮ ಮಂದಿರ ಭೂಮಿ ಪೂಜೆಯ ನಂತರ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಐಎಸ್ಐ ಸಂಚು!
ರಾಮ ಮಂದಿರ ಭೂಮಿ ಪೂಜೆಯ ಬೆನ್ನಲ್ಲೇ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.

ನವದೆಹಲಿ: ರಾಮ ಮಂದಿರ ಭೂಮಿ ಪೂಜೆಯ ಬೆನ್ನಲ್ಲೇ ಭಾರತದಲ್ಲಿ ಕೋಮು ಗಲಭೆ ಉಂಟುಮಾಡಲು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಸಂಚು ರೂಪಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.
ಭಾರತದಲ್ಲಿ ಶಾಂತಿಯುತ ವಾತಾವರಣವನ್ನು ಕದಡಲು ಐಎಸ್ಐ ಯತ್ನಿಸುತ್ತಿ. ವಾಯ್ಸ್ ಓವರ್ ಇಂಟರ್ ನೆಟ್ ಪ್ರೋಟೋಕಾಲ್ ಮೂಲಕ ಕೋಮುಗಲಭೆಗಳನ್ನು ಪ್ರಚೋದಿಸುವ ಕೆಲಸಕ್ಕೆ ಕೈ ಹಾಕುತ್ತಿದ್ದು, ಇದು ಲಖನೌ ಜನರಿಗೆ ತಲುಪುವಂತೆ ಮಾಡುತ್ತಿದೆ ಎಂದು ಜ್ಹೀ ಅಂತರ್ಜಾಲ ವರದಿ ಪ್ರಕಟಿಸಿದೆ.
ಜನಗಳಿಗೆ ವಿಐಪಿ ನಂಬರ್ ಗಳ ಮೂಲಕ ಕೋಮುಪ್ರಚೋದಕ ಸಂದೇಶ ಕರೆಗಳು ರವಾನೆಯಾಗುತ್ತಿದೆ. ಈ ಸಂಬಂಧ ಪೊಲೀಸರು ತನಿಖೆ ನಡೆಸುತ್ತಿದ್ದು, 12 ಕ್ಕೂ ಹೆಚ್ಚು ನಂಬರ್ ಗಳ ಮೇಲೆ ನಿಗಾ ವಹಿಸಿದ್ದಾರೆ. ಆ.05 ರಂದು ಭೂಮಿ ಪೂಜೆಯ ದಿನದಂದೇ ವಿಧ್ವಂಸಕ ಕೃತ್ಯಕ್ಕೆ ಐಎಸ್ಐ ಸಂಚು ರೂಪಿಸಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


