India Covid Cases

ಕೋವಿಡ್-19: ದೇಶದಲ್ಲಿ ಸತತ 2ನೇ ದಿನವೂ ಲಕ್ಷಕ್ಕಿಂತ ಕಡಿಮೆ ಪ್ರಕರಣ ವರದಿ; ಚೇತರಿಕೆ ಪ್ರಮಾಣ ಎಷ್ಟು ಗೊತ್ತೆ?
ದೇಶದಲ್ಲಿ ಸತತ ಎರಡನೇ ದಿನವೂ ಕೊರೋನಾ ಪ್ರಕರಣಗಳು ಲಕ್ಷಕ್ಕಿಂತ ಕಡಿಮೆ ವರದಿಯಾಗಿದ್ದು ಈ ಮೂಲಕ ದೈನಂದಿನ ಸಕಾರಾತ್ಮಕ ಪ್ರಮಾಣವು ಶೇಕಡಾ 4.66ಕ್ಕೆ ಇಳಿದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ತಿಳಿಸಿದೆ.

18 ವರ್ಷ ಮೇಲ್ಪಟ್ಟ ಎಲ್ಲರಿಗೂ ಜೂನ್ 21ರಿಂದ ಕೇಂದ್ರದಿಂದಲೇ ಉಚಿತ ಕೋವಿಡ್ ಲಸಿಕೆ: ಪ್ರಧಾನಿ ಮೋದಿ
ದೇಶದಲ್ಲಿ 18 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕೆ ನೀಡುವ ಕುರಿತು ಗೊಂದಲವನ್ನು ಬಗೆಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಜೂ 21ರಿಂದ ಪ್ರತಿಯೊಬ್ಬರಿಗೂ ಉಚಿತ ಲಸಿಕೆ ನೀಡುವುದಾಗಿ ಘೋಷಿಸಿದ್ದಾರೆ.

ಕೋವಿಡ್ ರೋಗಿಗಳ ಚಿಕಿತ್ಸಾ ಮಾರ್ಗಸೂಚಿ; ಫೆರಿಪಿರವಿಲ್, ಐವರ್ಮೆಕ್ಟಿನ್, ಎಚ್ಸಿಕ್ಯುಗೆ ಕೊಕ್: ಆರೋಗ್ಯ ಸಚಿವಾಲಯ
ಕೇಂದ್ರ ಆರೋಗ್ಯ ಸಚಿವಾಲಯವು ಐವರ್ಮೆಕ್ಟಿನ್, ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಆಂಟಿ-ವೈರಲ್ ಫೆವಿಪಿರವಿರ್ ಬಳಕೆಯನ್ನು ಕೋವಿಡ್ 19 ಚಿಕಿತ್ಸಾ ಮಾರ್ಗಸೂಚಿಯಿಂದ ಸೋಮವಾರ ಕೈಬಿಟ್ಟಿದೆ.

ಕೋವಿಶೀಲ್ಡ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮವಾಗಿ ಪ್ರತಿಕಾಯ ಸೃಷ್ಟಿಸುತ್ತದೆ: ಇಲ್ಲಿದೆ ಅಧ್ಯಯನ ವರದಿ!
ಕೊರೋನಾ ವಿರುದ್ಧ ಕೋವಿಶೀಲ್ ಅಥವಾ ಕೋವ್ಯಾಕ್ಸಿನ್ ಯಾವುದು ಅತ್ಯುತ್ತಮ ಲಸಿಕೆ ಎಂಬ ಚರ್ಚೆಗಳು ನಡೆಯುತ್ತಾ ಬಂದಿದ್ದು ಇದೀಗ ಅಧ್ಯಯನವೊಂದು ಯಾವುದು ಅತೀ ಉತ್ತಮ ಎಂದು ಬಹಿರಂಗಪಡಿಸಿದೆ.

ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ನಿಧಿ ಸಂಗ್ರಹಿಸಲು ಗೇಮಿಂಗ್ ಲೈವ್ ಸ್ಟ್ರೀಮ್ ನಲ್ಲಿ ಆಸ್ಟ್ರೇಲಿಯಾ ಕ್ರಿಕೆಟಿಗರು ಭಾಗಿ!
ಕೋವಿಡ್ ಸಂಕಷ್ಟದಲ್ಲಿರುವ ಭಾರತಕ್ಕಾಗಿ ಯುನಿಸೆಫ್ ಆಸ್ಟ್ರೇಲಿಯಾದ ನಿಧಿ ಸಂಗ್ರಹಿಸುವ ಕಾರ್ಯಕ್ಕೆ ಮುಂದಾಗಿದ್ದು ಇದರಲ್ಲಿ ಆಸ್ಟ್ರೇಲಿಯಾ ಸ್ಟಾರ್ ವೇಗಿ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಉನ್ನತ ಕ್ರಿಕೆಟಿಗರು ಗುರುವಾರ 12 ಗಂಟೆಗಳ ಗೇಮಿಂಗ್ ಲೈವ್ ಸ್ಟ್ರೀಮ್ನಲ್ಲಿ ಭಾಗವಹಿಸಲಿದ್ದಾರೆ.

ನಿಮ್ಮ ಗ್ರಾಮವನ್ನು 'ಕೊರೋನಾ ಮುಕ್ತ' ಮಾಡಿ 50 ಲಕ್ಷ ರೂ. ಗೆಲ್ಲಿ: ಮಹಾರಾಷ್ಟ್ರ ಸರ್ಕಾರದಿಂದ ವಿನೂತನ ಸ್ಪರ್ಧೆ
ಗ್ರಾಮಗಳಿಗೆ ಕೊರೋನಾ ಹರಡುವುದನ್ನು ತಡೆಯುವ ಕ್ರಮಗಳನ್ನು ಉತ್ತೇಜಿಸುವ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ 'ಕೊರೋನಾ ಮುಕ್ತ ಗ್ರಾಮ' ಸ್ಪರ್ಧೆಯನ್ನು ಘೋಷಿಸಿದೆ.

ಸಿಸಿಎಂಬಿಯ ಒಣ ಸ್ವ್ಯಾಬ್ ಟೆಸ್ಟ್ ಅಗ್ಗದ್ದು, ಫಲಿತಾಂಶ ಆರ್ಟಿಸಿಪಿಆರ್ ನಂತೆ ನಿಖರ: ವಿಜ್ಞಾನಿಗಳು
ಸಿಸಿಎಂಬಿ ಒಣ ಸ್ವ್ಯಾಬ್ ಟೆಸ್ಟ್ ಅಗ್ಗವಾಗಿದ್ದು ಇದರಿಂದ ಪರೀಕ್ಷಾ ವೆಚ್ಚವನ್ನು ನಾಲ್ಕು ಪಟ್ಟು ಕಡಿತಗೊಳಿಸಬಹುದು. ಅಲ್ಲದೆ ಪರೀಕ್ಷೆಯನ್ನು 3 ಪಟ್ಟು ಹೆಚ್ಚಿಸಬಲ್ಲ ಡ್ರೈ ಸ್ವ್ಯಾಬ್ ಆರ್ಟಿ-ಪಿಸಿಆರ್ ಪರೀಕ್ಷೆಯು ಪ್ರಮಾಣಿತ ಪರೀಕ್ಷಾ ವಿಧಾನಕ್ಕಿಂತ ವ್ಯತ್ಯಾಸವನ್ನು ತೋರಿಸುವುದಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಶೇ.5 ಕ್ಕಿಂತ ಕಡಿಮೆ ಟಿಪಿಆರ್, ಶೇ.70ರಷ್ಟು ದುರ್ಬಲ ಗುಂಪುಗಳಿಗೆ ಲಸಿಕೆ ನೀಡಿದ್ದರೆ ಮಾತ್ರ ಅನ್‌ಲಾಕ್: ಜಿಲ್ಲೆಗಳಿಗೆ ಕೇಂದ್ರ ಸೂಚನೆ
ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಕೆಲವು ಕಠಿಣ ನಿರ್ಬಂಧನೆಗಳನ್ನು ರಾಜ್ಯ ಸರ್ಕಾರಗಳು ಕೈಗೊಂಡಿದ್ದು ಇದೀಗ ಅನ್‌ಲಾಕ್ ಪ್ರಕ್ರಿಯೆ ಶುರು ಮಾಡುತ್ತಿದ್ದು ಇದಕ್ಕಾಗಿ ಕೇಂದ್ರ ಸರ್ಕಾರ ಎರಡು ನಿರ್ಣಾಯಕ ನಿಯತಾಂಕಗಳನ್ನು ಪಟ್ಟಿ ಮಾಡಿದೆ.

ಜೂನ್‌ನಲ್ಲಿ 12 ಕೋಟಿ ಡೋಸ್ ಸಿಗಲಿದೆ; ಕೊರೋನಾ ವ್ಯಾಕ್ಸಿನೇಷನ್ ಸಂಖ್ಯೆ ಹೆಚ್ಚಿಸಿ: ರಾಜ್ಯಗಳಿಗೆ ಕೇಂದ್ರ ಸೂಚನೆ
ಭಾರತದಲ್ಲಿ ಜೂನ್ ತಿಂಗಳಲ್ಲಿ ಪ್ರತಿದಿನ ಸರಾಸರಿ ಸುಮಾರು 40 ಲಕ್ಷ ಕೋವಿಡ್ ಲಸಿಕೆ ಹಾಕಲಾಗುತ್ತದೆ.

