Imran Khan

ಇಮ್ರಾನ್ ಖಾನ್ ಗೆ ಸೆಹ್ವಾಗ್ ಕೌಂಟರ್
ವಿಶ್ವಸಂಸ್ಥೆಯಲ್ಲಿ ಭಾರತದ ವಿರುದ್ಧ ದ್ವೇಷಕಾರಿದ್ದ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರ ನಡೆಗೆ ಟೀಂ ಇಂಡಿಯಾ ಮಾಜಿ ಆರಂಭಿಕ ಆಟಗಾರ ವೀರೇಂದ್ರ ಸೆಹ್ವಾಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇವರು ಕ್ರೀಡಾಪಟುನಾ? ಇಮ್ರಾನ್ ಖಾನ್ 'ಭಯೋತ್ಪಾದಕರಿಗೆ ಆದರ್ಶ': ಪಾಕ್ ಪಿಎಂ ವಿರುದ್ಧ ಗಂಭೀರ್ ಕಿಡಿ
ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ. ಅವರನ್ನು ಕ್ರೀಡಾ ಸಮುದಾಯದಿಂದ ಬಹಿಷ್ಕಾರಿಸಬೇಕು ಎಂದು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಇಡೀ ಜಗತ್ತು ಬೆಂಬಲಿಸದಿದ್ದರೂ ಪಾಕಿಸ್ತಾನ ಮಾತ್ರ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ, ಇದು ಜಿಹಾದ್: ಇಮ್ರಾನ್ ಖಾನ್
ಕಾಶ್ಮೀರಿಗಳ ಪರವಾಗಿ ನಿಲ್ಲುವವರು ಜಿಹಾದ್ (ಪವಿತ್ರ ಯುದ್ಧ)ನಲ್ಲಿ ತೊಡಗಿರುವವರು. ಇಡೀ ವಿಶ್ವವೇ ಬೆಂಬಲ ನೀಡದಿದ್ದರೂ ಕೂಡ ಪಾಕಿಸ್ತಾನ ಕಾಶ್ಮೀರಿಗಳ ಪರವಾಗಿ ನಿಲ್ಲುತ್ತದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

'ವಿಶ್ವಸಂಸ್ಥೆ' 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ತೋರಿಸುತ್ತದೆ: ಇಮ್ರಾನ್'ಗೆ ಗೌತಮ್ ಗಂಭೀರ್ ತಿರುಗೇಟು
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ನೀಡಲಾಗಿದ್ದ ಆ 15 ನಿಮಿಷಗಳ ಭಾಷಣ ನಿಮ್ಮ ವ್ಯಕ್ತಿತ್ವ ಹಾಗೂ ಬುದ್ಧಿಶಕ್ತಿಯನ್ನು ತೋರಿಸುತ್ತದೆ ಎಂದು ಪಾಕಿಸ್ತಾನ ಪ್ರಧಾನಮಂತ್ರಿ ಇಮ್ರಾನ್ ಖಾನ್'ಗೆ ಭಾರತ ತಂಡ ಮಾಜಿ ಕ್ರಿಕೆಟಿಗ ಹಾಗೂ ಬಿಜೆಪಿ ಸಂಸದ ಗೌತಮ್ ಗಂಭೀರವ್ ಭಾನುವಾರ ತಿರುಗೇಟು ನೀಡಿದ್ದಾರೆ.

ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಇಮ್ರಾನ್ ಕಾಶ್ಮೀರ ಹೇಳಿಕೆಗೆ ತಿರುಗೇಟು: ಮೋದಿ ಬೆನ್ನಿಗೆ ನಿಂತ ಕಾಂಗ್ರೆಸ್
ವಿಶ್ವಸಂಸ್ಥೆ ಮಹಾಧಿವೇಶನದಲ್ಲಿ ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರು ಕಾಶ್ಮೀರ ವಿಚಾರ ಕುರಿತು ನೀಡಿದ್ದ ಹೇಳಿಕೆಗೆ ತೀವ್ರವಾಗಿಯೇ ತಿರುಗೇಟು ನೀಡಿದ್ದ ಪ್ರಧಾನಮಂತ್ರಿ ನರೇಂದ್ರ ಮೋದಿ ಸರ್ಕಾರಕ್ಕೆ ಕಾಂಗ್ರೆಸ್ ಭಾನುವಾರ ಬೆಂಬಲ ನೀಡಿದೆ.

ವಿಶ್ವಸಂಸ್ಥೆ: ಕಾಶ್ಮೀರದಲ್ಲಿ ಜನ ದಂಗೆ ಎದ್ದಿದ್ದು, ಕರ್ಫ್ಯೂ ತೆಗೆದರೆ ರಕ್ತದೋಕುಳಿ ಎಂದ ಪಾಕ್ ಪ್ರಧಾನಿ ಇಮ್ರಾನ್ ಖಾನ್
ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದ ದುರಾಡಳಿತದಿಂದಾಗಿ ಜನ ದಂಗೆ ಎದ್ದಿದ್ದು, ಕರ್ಫ್ಯೂ ತೆಗೆದರೆ ರಕ್ತದೋಕುಳಿಯಾಗುವ ಆಂತಕವಿದೆ ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.

ಭಾರತವು ಜನರನ್ನು ಆಕ್ರಮಣಶೀಲರನ್ನಾಗಿಸುತ್ತಿದೆ: ಇಮ್ರಾನ್ ಖಾನ್:
ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡುತ್ತಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಇಲ್ಲಿಯೂ ಕಾಶ್ಮೀರ ವಿವಾದವನ್ನು ಕೆದಕಿದ್ದಾರೆ. ಅಲ್ಲದೆ ಮುಸ್ಲಿಮರನ್ನು ತೀವ್ರಗಾಮಿಗಳನ್ನಾಗಿ ಮ್ಮಾಡುತ್ತಿರುವುದಾಗಿ ಭಾರತವನ್ನು ಆಕ್ಷೇಪಿಸಿದ್ದಾರೆ.

ಕಾಶ್ಮೀರಕ್ಕಾಗಿ ದಂಗೆ ಆಗುತ್ತೆ: ವಿಶ್ವನಾಯಕರ ವಿರುದ್ಧ ಅಸಹಾಯಕ ಇಮ್ರಾನ್ ಖಾನ್ ಆಕ್ರೋಶ!
ಕಾಶ್ಮೀರದ ವಿಷಯವನ್ನು ಜಾಗತಿಕ ವಿಷಯವನ್ನಾಗಿಸುವುದರಲ್ಲಿ ಪಾಕಿಸ್ತಾನ ವಿಫಲವಾಗಿದೆ ಎಂದು ಹೇಳಿರುವ ಪಾಕ್ ಪ್ರಧಾನಿ ಇಮ್ರಾನ್ ಖಾನ್, ಕಾಶ್ಮೀರ ವಿಷಯದಲ್ಲಿ ವಿಶ್ವಸಮುದಾಯದ ಬಗ್ಗೆ ಬೇಸರಗೊಂಡಿರುವುದಾಗಿ ಹೇಳಿದ್ದಾರೆ.

ಅಲ್ ಖೈದಾ ಸಂಘಟನೆಗಳಿಗೆ ತರಬೇತಿ ನೀಡಿದ್ದು ನಾವೇ: ಪಾಕ್ ಪ್ರಧಾನಿ ಇಮ್ರಾನ್ ಖಾನ್
ಆಘ್ಘಾನಿಸ್ತಾನದಲ್ಲಿ ಯುದ್ಧ ಮಾಡಲು ತಮ್ಮ ದೇಶದ ಸೇನೆ ಮತ್ತು ಪತ್ತೇದಾರಿ ಗುಪ್ತಚರ ಆಂತರಿಕ ಇಲಾಖೆಗಳು ಅಲ್ ಖೈದಾ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ತರಬೇತಿ ನೀಡಿದ್ದವು.

