ದೇಶ

ಇವರು ಕ್ರೀಡಾಪಟುನಾ? ಇಮ್ರಾನ್ ಖಾನ್ 'ಭಯೋತ್ಪಾದಕರಿಗೆ ಆದರ್ಶ': ಪಾಕ್ ಪಿಎಂ ವಿರುದ್ಧ ಗಂಭೀರ್ ಕಿಡಿ

ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ. ಅವರನ್ನು ಕ್ರೀಡಾ ಸಮುದಾಯದಿಂದ ಬಹಿಷ್ಕಾರಿಸಬೇಕು ಎಂದು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಇವರು ಕ್ರೀಡಾಪಟುನಾ? ಇಮ್ರಾನ್ ಖಾನ್ 'ಭಯೋತ್ಪಾದಕರಿಗೆ ಆದರ್ಶ': ಪಾಕ್ ಪಿಎಂ ವಿರುದ್ಧ ಗಂಭೀರ್ ಕಿಡಿ
ಇಮ್ರಾನ್ ಖಾನ್-ಗೌತಮ್ ಗಂಭೀರ್
Published On :

ನವದೆಹಲಿ: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಭಯೋತ್ಪಾದಕರಿಗೆ ಆದರ್ಶ. ಅವರನ್ನು ಕ್ರೀಡಾ ಸಮುದಾಯದಿಂದ ಬಹಿಷ್ಕಾರಿಸಬೇಕು ಎಂದು ಮಾಜಿ ಕ್ರಿಕೆಟಿಗ, ಬಿಜೆಪಿ ಸಂಸದ ಗೌತಮ್ ಗಂಭೀರ್ ಹೇಳಿದ್ದಾರೆ.

ಕಳೆದ ವಾರ ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ(ಯುಎನ್‌ಜಿಎ) ಇಮ್ರಾನ್ ಖಾನ್ ಕಾಶ್ಮೀರ ಕುರಿತು ಭಾಷಣ ಮಾಡಿದ್ದರು. ಈ ವಿಚಾರವಾಗಿ ಗರಂ ಆಗಿರುವ ಗೌತಮ್ ಗಂಭೀರ್, ಕ್ರಿಕೆಟಿಗ-ರಾಜಕಾರಣಿ, ಕ್ರೀಡಾಪಟುಗಳು "ಉತ್ತಮ ನಡವಳಿಕೆ" ಮತ್ತು "ಪಾತ್ರದ ಶಕ್ತಿ"ಯ ಮಾದರಿಗಳಾಗಿರಬೇಕು. ಆದಾಗ್ಯೂ, ಸ್ವತಃ ಮಾಜಿ ಕ್ರಿಕೆಟಿಗನಾಗಿದ್ದ ಇಮ್ರಾನ್ ಖಾನ್ "ಭಯೋತ್ಪಾದಕರಿಗೆ ಆದರ್ಶಪ್ರಾಯ" ಎಂದು ಕಿಡಿಕಾರಿದ್ದಾರೆ.

"ಕ್ರೀಡಾಪಟುಗಳು ರೋಲ್ ಮಾಡೆಲ್‌ಗಳಾಗಿರಬೇಕು, ಉತ್ತಮ ನಡವಳಿಕೆ, ತಂಡದ ಮನೋಭಾವ, ನೀತಿಶಾಸ್ತ್ರ, ಪಾತ್ರದ ಶಕ್ತಿ. ಇತ್ತೀಚೆಗೆ ವಿಶ್ವಸಂಸ್ಥೆಯಲ್ಲಿ ಮಾಜಿ ಕ್ರೀಡಾಪಟು ಕೂಡ ಮಾತನಾಡುವುದನ್ನು ನಾವು ನೋಡಿದ್ದೇವೆ. ಅವರ ಮಾತುಗಳು ಭಯೋತ್ಪಾದಕರಿಗೆ ಸ್ಪೂರ್ತಿ ನೀಡುವಂತಿತ್ತು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.