HUBBALLI

ಆಗಸ್ಟ್ 25 ರಿಂದ ಹುಬ್ಬಳ್ಳಿಯಿಂದ ಮುಂಬೈಗೆ ನೇರ ವಿಮಾನ
ಕೊರೊನಾ ಸೋಂಕಿನ ಕಾರಣದಿಂದ ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ.

ಹುಬ್ಬಳ್ಳಿ: ಕೊರೋನಾ ಸೋಂಕಿತ ಎಲ್ಲಾ ಆರೋಪಿಗಳನ್ನು ಕೊವಿಡ್ ಕೇರ್ ಸೆಂಟರ್ ಗೆ ಶಿಫ್ಟ್
ಕೊರೋನಾ ಸೋಂಕಿತ ಎಲ್ಲಾ ಆರೋಪಿಗಳನ್ನು ನಗರದ ಹೆಗ್ಗೆರಿಯ ಪ್ರತ್ಯೇಕ ಕೊವಿಡ್ ಕೇರ್ ಸೆಂಟರ್ ಗೆ ಸ್ಥಳಾಂತರಿಸಲು ಹುಬ್ಬಳ್ಳಿ - ಧಾರವಾಡ ಪೊಲೀಸರು ನಿರ್ಧರಿಸಿದ್ದಾರೆ.

ಕೋವಿಡ್-19 ಮಧ್ಯೆ ಮುಂಜಾಗ್ರತಾ ಕ್ರಮದೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನ- ಪ್ರಹ್ಲಾದ್ ಜೋಷಿ
ಕೋವಿಡ್-19 ಹಿನ್ನೆಲೆಯಲ್ಲಿ ಸರ್ಕಾರದ ಸೂಕ್ತ ಮುಂಜಾಗ್ರತಾ ಕ್ರಮದೊಂದಿಗೆ ಸಂಸತ್ತಿನ ಮುಂಗಾರು ಅಧಿವೇಶನ ನಡೆಯಲಿದೆ ಎಂದು ಕೇಂದ್ರ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪ್ಲಹ್ಲಾದ್ ಜೋಷಿ ಹೇಳಿದ್ದಾರೆ.

ಚೀನಾದ 'ಶೇರ್ ಇಟ್' ಗೆ ಸಡ್ಡು; ಧಾರವಾಡದ ವಿದ್ಯಾರ್ಥಿಯಿಂದ 'ಜೆಡ್ ಶೇರ್' ಆ್ಯಪ್ ಅಭಿವೃದ್ಧಿ
ಚೀನಾ ಮೂಲದ ಶೇರ್ ಇಟ್ ಆ್ಯಪ್ ಗೆ ಕರ್ನಾಟಕದ ಧಾರವಾಡ ಮೂಲದ ವಿದ್ಯಾರ್ಥಿ ಸಡ್ಡು ಹೊಡೆದು ತನ್ನದೇ ವಿನೂತನ ವೇಗದ ದತ್ತಾಂಶ ರವಾನೆ ಮತ್ತು ಸ್ವೀಕರಿಸಬಲ್ಲ ಆ್ಯಪ್ ಅನ್ನು ಸಿದ್ಧಪಡಿಸಿದ್ದಾರೆ.

ಹುಬ್ಬಳ್ಳಿ: ಕಿಮ್ಸ್ ಆಸ್ಪತ್ರೆ ವೈದ್ಯನಿಗೆ ಕೊರೋನಾ ಸೋಂಕು; ಮನೆ ಮಾಡಿದ ಆತಂಕ
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ವೈದ್ಯರೊಬ್ಬರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು ಆತಂಕ ಮನೆ ಮಾಡಿದೆ.ಪ್ಯಾಥಾಲಜಿ ವಿಭಾಗದ 52 ವರ್ಷದ ವೈದ್ಯನಿಗೆ ಸೋಂಕು ತಗುಲಿದೆ, ಧಾರವಾಡದ ಮಕ್ಕಳ ವೈದ್ಯನ ನಂತರ ಹುಬ್ಬಳ್ಳಿಯ ವೈದ್ಯರಿಗೆ ಸೋಂಕು ತಗುಲಿದೆ. ಧಾರವಾಡದ ಕೆಂಪಗೇರಿ ಓಣಿಯ ನಿವಾಸಿಯಾದ ವೈದ್ಯ ಧಾರವಾಡದಲ್ಲಿ ಲ್ಯಾಬೋರೇಟರಿ ನಡೆಸುತ್ತಿದ್ದಾರೆ.

ಹುಬ್ಬಳ್ಳಿ: ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಳದ ನಡುವೆ ಕೋವಿಡ್-19 ಟೆಸ್ಟ್ ಕಡಿತಗೊಳಿಸಿದ ಜಿಲ್ಲಾಡಳಿತ?
ಕರ್ನಾಟಕದ ವಾಣಿಜ್ಯ ರಾಜಧಾನಿ ಹುಬ್ಬಳ್ಳಿಯಲ್ಲಿ ಮಾರಕ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿರುವ ಹೊತ್ತಿನಲ್ಲೇ ಜಿಲ್ಲಾಡಳಿತ ಕೋವಿಡ್-19 ಟೆಸ್ಟ್ ಪ್ರಮಾಣವನ್ನು ಕಡಿತಗೊಳಿಸಿತೇ..?

ಹುಬ್ಬಳ್ಳಿ: ಇಂದಿನಿಂದ ವಿಮಾನ ಸಂಚಾರ ಪುನಾರಾರಂಭ ಸಾಧ್ಯತೆ
ಅವಶ್ಯಕತೆ ಇರುವಷ್ಟು ಪ್ರಯಾಣಿಕರು ಬಂದರೆ ಬುಧವಾರದಿಂದ ಹುಬ್ಬಳ್ಲಿ- ಕಣ್ಣೂರು, ಹಾಗೂ ಹುಬ್ಬಳ್ಳಿ-ಗೋವಾ ಸಂಚಾರ ಆರಂಭಿಸಲು ಇಂಡಿಗೋ ಏರ್ ಲೈನ್ಸ್ ನಿರ್ಧರಿಸಿದೆ. ಲಾಕ್ ಡೌನ್ ನಂತರ ಇದೇ ಮೊದಲ ಬಾರಿಗೆ ವಿಮಾನ ಸಂಚಾರ ಪುನಾರಾರಂಭಿಸಲು ಸಿದ್ಧತೆ ನಡೆಸಲಾಗಿದೆ.

ಹುಬ್ಬಳ್ಳಿ: ಆನ್ ಲೈನ್ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ದರೋಡೆ, ಹೈಟೆಕ್ ಕಳ್ಳರ ಬಂಧನ
ಅವಳಿ ನಗರ ಹುಬ್ಬಳ್ಳಿ - ಧಾರವಾಡದಲ್ಲಿ ಆನ್ ಲೈನ್ ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಅವರ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಹೈಟೆಕ್ ಕಳ್ಳರನ್ನು ನವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ದೇಶದ್ರೋಹ ಪ್ರಕರಣಕ್ಕೆ ಸಂಬಂಧಿಸಿ ಚಾರ್ಜ್ಶೀಟ್ ಸಲ್ಲಿಸಲು ವಿಳಂಬ: ಹುಬ್ಬಳ್ಳಿ ಗ್ರಾಮೀಣ ಠಾಣೆ ಇನ್ಸ್ಪೆಕ್ಟರ್ ಅಮಾನತು
ಪಾಕಿಸ್ತಾನ ಪರ ಘೋಷಣೆ ಕೂಗಿದ್ದ ಕಾಶ್ಮೀರ ವಿದ್ಯಾರ್ಥಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸಲು ವಿಳಂಬ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಇನ್ಸ್ಪೆಕ್ಟರ್ ಓರ್ವರನ್ನು ಅಮಾನತು ಮಾಡಲಾಗಿದೆ.

