ಹುಬ್ಬಳ್ಳಿ: ಆನ್ ಲೈನ್ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ದರೋಡೆ, ಹೈಟೆಕ್ ಕಳ್ಳರ ಬಂಧನ
ಅವಳಿ ನಗರ ಹುಬ್ಬಳ್ಳಿ - ಧಾರವಾಡದಲ್ಲಿ ಆನ್ ಲೈನ್ ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಅವರ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಹೈಟೆಕ್ ಕಳ್ಳರನ್ನು ನವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ: ಅವಳಿ ನಗರ ಹುಬ್ಬಳ್ಳಿ - ಧಾರವಾಡದಲ್ಲಿ ಆನ್ ಲೈನ್ ನಲ್ಲಿ ಜಾಹೀರಾತು ನೋಡಿ ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಅವರ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಹೈಟೆಕ್ ಕಳ್ಳರನ್ನು ನವನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅನ್ ಬ್ಲಾಕ್ಡ್ ಮೊಬೈಲ್ ನಂಬರ್ ಸಹಾಯದಿಂದ ಪೊಲೀಸರು ಆಕಾಶ್ ಮುದಲಿಯಾರ್(20) ಮತ್ತು ಆಕಾಶ್ ಮೂಳೆ ಎಂಬ ಕತರ್ನಾಕ್ ಕಳ್ಳರನ್ನು ಬಂಧಿಸಿದ್ದು, ಆರೋಪಿಗಳಿಂದ 2.86 ಲಕ್ಷ ರೂಪಾಯಿ ಮೌಲ್ಯದ 8 ಮೊಬೈಲ್ ಫೋನ್ ಗಳನ್ನು ಜಪ್ತಿ ಮಾಡಿದ್ದಾರೆ ಮತ್ತು ಕಳ್ಳತನಕ್ಕೆ ಬಳಸಿದ್ದ ಒಂದು ಲಕ್ಷ ರೂಪಾಯಿ ಮೌಲ್ಯದ ಎರಡು ಬೈಕ್ ಗಳನ್ನು ಸಹ ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಇಬ್ಬರು ಯುವಕರು ಕಾಲೇಜ್ ಸ್ನೇಹಿತರಾಗಿದ್ದು, ಪಿಯುಸಿಯ ನಂತರ ಶಿಕ್ಷಣವನ್ನು ಅರ್ಧಕ್ಕೆ ನಿಲ್ಲಿಸಿದ್ದರು. ತಮ್ಮ ಪಾಕೇಟ್ ಮನಿಗಾಗಿ ಇಬ್ಬರೂ ಕಳ್ಳತನಕ್ಕೆ ಇಳಿದಿದ್ದು, ಅದನ್ನೇ ಒಂದು ಹವ್ಯಾಸ ಮಾಡಿಕೊಂಡಿದ್ದರು.
ಇವರು ಹುಬ್ಬಳ್ಳಿ-ಧಾರವಾಡ ಮಹಾ ನಗರದಲ್ಲಿ ಆನ್ ಲೈನ್ ನಲ್ಲಿ ಜಾಹೀರಾತು ನೋಡಿ, ಮೊಬೈಲ್ ಖರೀದಿಸುವ ನೆಪದಲ್ಲಿ ಬಂದು ಸಾರ್ವಜನಿಕರಿಂದ ಬೆಲೆ ಬಾಳುವ ಮೊಬೈಲಗಳನ್ನು ಸುಲಿಗೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


