ಆಗಸ್ಟ್ 25 ರಿಂದ ಹುಬ್ಬಳ್ಳಿಯಿಂದ ಮುಂಬೈಗೆ ನೇರ ವಿಮಾನ
ಕೊರೊನಾ ಸೋಂಕಿನ ಕಾರಣದಿಂದ ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ.

ಹುಬ್ಬಳ್ಳಿ: ಕೊರೊನಾ ಸೋಂಕಿನ ಕಾರಣದಿಂದ ವಾಣಿಜ್ಯ ನಗರಿಯಿಂದ ಮುಂಬೈಗೆ ರದ್ದಾಗಿದ್ದ ಇಂಡಿಗೊ ಸಂಸ್ಥೆಯ ನೇರ ವಿಮಾನ ಸಂಚಾರ ಆಗಸ್ಟ್ 25ಕ್ಕೆ ಪುನರಾರಂಭವಾಗಲಿದೆ.
ಇದೇ ಸಂಸ್ಥೆಯ ವಿಮಾನಗಳು ಈಗಾಗಲೇ ಹುಬ್ಬಳ್ಳಿಯಿಂದ ಬೆಂಗಳೂರು ಮತ್ತು ಕೇರಳದ ಕಣ್ಣೂರಿಗೆ ಸಂಚರಿಸುತ್ತಿವೆ. 25ರಿಂದ ನಗರದಿಂದ ಮುಂಬೈ, ಅಹಮದಾಬಾದ್, ಚೆನ್ನೈ, ಮಂಗಳೂರು ಮತ್ತು ಕೊಚ್ಚಿಗೆ ಸಂಚಾರ ಆರಂಭಿಸಲಿವೆ ಎಂದು ಇಂಡಿಗೊ ಸಂಸ್ಥೆ ಸಿಬ್ಬಂದಿ ತಿಳಿಸಿದ್ದಾರೆ. ಟಿಕೆಟ್ ಬುಕ್ಕಿಂಗ್ ಆರಂಭವಾಗಿದೆ.
ಸ್ಟಾರ್ ಏರ್ ಸಂಸ್ಥೆಯ ವಿಮಾನಗಳು ಆ. 16ರಿಂದ ಇಲ್ಲಿಂದ ದೆಹಲಿಯ ಹೊರವಲಯದ ಪ್ರದೇಶ ಹಿಂಡನ್ ಮತ್ತು ಬೆಂಗಳೂರಿಗೆ ಸಂಚಾರ ಆರಂಭಿಸಲಿವೆ. ವಾರದಲ್ಲಿ ನಾಲ್ಕು ದಿನ ಸೋಮವಾರ, ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಹಿಂಡನ್‌ಗೆ ವಿಮಾನ ಸಂಚರಿಸಲಿದೆ.
ಭಾರತದಲ್ಲಿ ಲಾಕ್‌ಡೌನ್ ಘೋಷಣೆಯಾದಾಗ ಮೊದಲು ಎಲ್ಲ ವಿಮಾನಗಳ ಹಾರಾಟವನ್ನು ರದ್ದುಗೊಳಿಸಲಾಗಿತ್ತು. ಮೇ 25ಕ್ಕೆ ಸಂಚಾರ ಪುನರಾರಂಭವಾದಾಗ ಪ್ರಯಾಣಿಕರ ಕೊರತೆ ಕಾಡಿದ್ದರಿಂದ ಮತ್ತೊಮ್ಮೆ ಸ್ಥಗಿತಗೊಳಿಸಲಾಗಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


