Hombale Films

ಪ್ರಭಾಸ್ ಅಭಿನಯದ ಸಲಾರ್ 2 ನಿರ್ಮಾಣ ಕಾರ್ಯಕ್ಕೆ ವೇಗ; ಶೀಘ್ರದಲ್ಲೇ ಚಿತ್ರೀಕರಣ ಆರಂಭ
ಹೊಂಬಾಳೆ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾದ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಭಾಗ 1: ಕದನ ವಿರಾಮ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಭರ್ಜರಿ ಯಶಸ್ಸು ಕಂಡಿತು. ಪ್ರಭಾಸ್ ಮತ್ತು ಪೃಥ್ವಿರಾಜ್ ಸುಕುಮಾರನ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವು ಇದೀಗ ಒಟಿಟಿ ವೇದಿಕೆಗಳ ಮೂಲಕ ಪ್ರೇಕ್ಷಕರಿಗೆ ಲಭ್ಯವಾಗಿದೆ.

ಪೃಥ್ವಿರಾಜ್ ಸುಕುಮಾರನ್ ಅಭಿನಯದ ಬಹುನಿರೀಕ್ಷಿತ 'Aadujeevitham- The Goat Life' ಚಿತ್ರ ನಾಳೆ ತೆರೆಗೆ
ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ಬ್ಲೆಸ್ಸಿ ನಿರ್ದೇಶನದಲ್ಲಿ ಪೃಥ್ವಿರಾಜ್ ಸುಕುಮಾರನ್ ನಟನೆಯ ಬಹುನಿರೀಕ್ಷಿತ 'ಆಡುಜೀವಿತಂ' (ದಿ ಗೋಟ್ ಲೈಫ್) ಚಿತ್ರ ನಾಳೆ (ಮಾರ್ಚ್ 28) ತೆರೆಗೆ ಬರಲಿದೆ. ಕರ್ನಾಟಕದಲ್ಲಿ ಚಿತ್ರ ವಿತರಣೆಯ ಜವಾಬ್ದಾರಿಯನ್ನು ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಹೊತ್ತುಕೊಂಡಿದ್ದು, ನಾಳೆ ಈ ಚಿತ್ರ ರಾಜ್ಯದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ನಾನು ವೈವಿಧ್ಯಮಯ ಪಾತ್ರಗಳಲ್ಲಿ ನಟಿಸಲು ಇಷ್ಟಪಡುತ್ತೇನೆ; 'ಯುವ' ಪಾತ್ರದ ಬಗ್ಗೆ ನಟ ಕಿಶೋರ್ ಮಾತು
ಕೆಲವು ನಟರಷ್ಟೇ ತಾವು ನಿರ್ವಹಿಸುವ ಪಾತ್ರಗಳಿಗೆ ಜೀವ ತುಂಬುವ ವಿಶಿಷ್ಟ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಸಾಲಿಗೆ ಸೇರುತ್ತಾರೆ ನಟ ಕಿಶೋರ್. ವೈಯಕ್ತಿಕವಾಗಿ ತಮಗೆ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವಂತ ಪ್ರಭಾವಿ ಪಾತ್ರಗಳನ್ನು ಆಯ್ಕೆ ಮಾಡುವ ಪ್ರಾಮುಖ್ಯತೆಯನ್ನು ಅವರು ಒಪ್ಪಿಕೊಳ್ಳುತ್ತಾರೆ.

ಕರ್ನಾಟಕದಲ್ಲಿ Aadujeevitham- The Goat Life ವಿತರಣೆ ಹಕ್ಕು ಹೊಂಬಾಳೆ ಫಿಲ್ಮ್ಸ್ ಪಾಲು
ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕರ್ನಾಟಕದಲ್ಲಿ ಬಹು ನಿರೀಕ್ಷಿತ ಆಡುಜೀವಿತಂ- ದಿ ಗೋಟ್ ಲೈಫ್ ಸಿನಿಮಾ ವಿತರಿಸಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಪ್ರೊಡಕ್ಷನ್ ಹೌಸ್ ಈ ಬಗ್ಗೆ ಘೋಷಣೆ ಮಾಡಿದೆ. ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಲಾ ಪೌಲ್ ನಟಿಸಿರುವ ಈ ಚಿತ್ರವನ್ನು ಬ್ಲೆಸ್ಸಿ ನಿರ್ದೇಶಿಸಿದ್ದಾರೆ.

ರಾಜ್ಯದಾದ್ಯಂತ 350ಕ್ಕೂ ಹೆಚ್ಚು ತೆರೆಗಳಲ್ಲಿ ಅಬ್ಬರಿಸಲು 'ಯುವ' ಸಿನಿಮಾ ಸಜ್ಜು!
ದೊಡ್ಮನೆ ಕುಡಿ ಯುವ ರಾಜ್‌ಕುಮಾರ್ ಅವರ ಬಹುನಿರೀಕ್ಷಿತ 'ಯುವ' ಚಿತ್ರವು ಮಾರ್ಚ್ 29ರಂದು ತೆರೆಗೆ ಬರಲು ಸಜ್ಜಾಗಿದ್ದು, ವ್ಯಾಪಕ ನಿರೀಕ್ಷೆ ಹುಟ್ಟುಹಾಕಿದೆ. ಇಂದು ಮಧ್ಯಾಹ್ನ 1 ಗಂಟೆಗೆ ಟ್ರೇಲರ್ ಬಿಡುಗಡೆ ಮಾಡಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ಸಿಂಗಲ್ ಸ್ಕ್ರೀನ್‌ಗಳು ಮತ್ತು ಮಲ್ಟಿಪ್ಲೆಕ್ಸ್‌ಗಳು ಸೇರಿದಂತೆ 350ಕ್ಕೂ ಹೆಚ್ಚು ಪರದೆಗಳಲ್ಲಿ ಚಿತ್ರ ಪ್ರದರ್ಶನಕ್ಕೆ ಸಜ್ಜಾಗಿದೆ.

ಯುವ ರಾಜ್‌ಕುಮಾರ್ ನಟನೆಯ 'ಯುವ' ಬಿಡುಗಡೆಗೆ ಸಜ್ಜು; ಆಡಿಯೋ ಹಕ್ಕು ಭಾರಿ ಬೆಲೆಗೆ ಮಾರಾಟ!
ತಮ್ಮ ಚೊಚ್ಚಲ ಚಿತ್ರದೊಂದಿಗೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧರಾಗಿರುವ ರಾಜ್‌ಕುಮಾರ್ ಅವರ ಮೊಮ್ಮಗ ಯುವ ರಾಜ್‌ಕುಮಾರ್ ಅವರ ಯುವ ಚಿತ್ರದ ಸುತ್ತ ವ್ಯಾಪಕ ನಿರೀಕ್ಷೆ ಮನೆಮಾಡಿದೆ. ಚಿತ್ರದ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಮ್ಯೂಸಿಕ್ ಲೇಬಲ್ 3 ಕೋಟಿಗೂ ಹೆಚ್ಚು ಬೆಲೆಗೆ ಪಡೆದುಕೊಂಡಿದೆ ಎಂದು ವರದಿಯಾಗಿದೆ.

ಪ್ರಭಾಸ್ ಅಭಿನಯದ ಸಲಾರ್- ಭಾಗ 2ರ ಚಿತ್ರೀಕರಣಕ್ಕೆ ದಿನಾಂಕ ನಿಗದಿ
ಪ್ರಭಾಸ್ ನಟನೆಯ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರತಂಡ ಸದ್ಯ ಯಶಸ್ಸಿನ ಅಲೆಯಲ್ಲಿ ತೇಲುತ್ತಿದೆ. ಚಿತ್ರದ ಎರಡನೇ ಭಾಗವು ಯಾವಾಗ ಸೆಟ್ಟೇರುತ್ತದೆ ಎಂಬುದರ ಕುರಿತು ಸಾಕಷ್ಟು ಊಹಾಪೋಹಗಳಿದ್ದು, ಚಿತ್ರೀಕರಣ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಪ್ರಭಾಸ್ ಅಭಿನಯದ, ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಜಪಾನ್‌ನಲ್ಲಿ ಬಿಡುಗಡೆಗೆ ಸಜ್ಜು!
'ಸಲಾರ್: ಭಾಗ 1 - ಕದನ ವಿರಾಮ' ಚಿತ್ರವು ಈ ಬೇಸಿಗೆಯಲ್ಲಿ ಜಪಾನಿನ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿದೆ. ಪ್ರಶಾಂತ್ ನೀಲ್ ನಿರ್ದೇಶನದ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಸಲಾರ್ ಚಿತ್ರವನ್ನು ಜಪಾನಿನ ಚಲನಚಿತ್ರ ವಿತರಣಾ ಕಂಪನಿ 'ಟ್ವಿನ್' ದ್ವೀಪ ರಾಷ್ಟ್ರದಲ್ಲಿ ಸಿನಿಮಾವನ್ನು ಬಿಡುಗಡೆ ಮಾಡಲಿದೆ.

ಶಾರುಖ್ ಖಾನ್ ನಟನೆಯ ಡಂಕಿಗೆ ಸಲಾರ್ ಸವಾಲು: ಜಾಗತಿಕ ಬಾಕ್ಸ್ ಆಫೀಸ್‌ನಲ್ಲಿ 500 ಕೋಟಿ ರೂ. ಕಲೆಕ್ಷನ್
ಪ್ರಭಾಸ್ ಅಭಿನಯದ 'ಸಲಾರ್: ಭಾಗ 1 - ಕದನ ವಿರಾಮ' ವಿಶ್ವದಾದ್ಯಂತ ಗಲ್ಲಾಪೆಟ್ಟಿಗೆಯಲ್ಲಿ ಕಮಾಲ್ ಮಾಡುತ್ತಿದ್ದು, 500 ಕೋಟಿ ರೂಪಾಯಿ ಗಳಿಸಿದೆ ಎಂದು ಚಿತ್ರತಂಡ ಗುರುವಾರ ತಿಳಿಸಿದೆ. ಚಿತ್ರತಂಡ ಇತ್ತೀಚಿನ ಬಾಕ್ಸ್ ಆಫೀಸ್ ಅಂಕಿಅಂಶಗಳನ್ನು "ಸಲಾರ್" ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

