ಸಿನಿಮಾ ಸುದ್ದಿ

ಕರ್ನಾಟಕದಲ್ಲಿ Aadujeevitham- The Goat Life ವಿತರಣೆ ಹಕ್ಕು ಹೊಂಬಾಳೆ ಫಿಲ್ಮ್ಸ್ ಪಾಲು

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕರ್ನಾಟಕದಲ್ಲಿ ಬಹು ನಿರೀಕ್ಷಿತ ಆಡುಜೀವಿತಂ- ದಿ ಗೋಟ್ ಲೈಫ್ ಸಿನಿಮಾ ವಿತರಿಸಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಪ್ರೊಡಕ್ಷನ್ ಹೌಸ್ ಈ ಬಗ್ಗೆ ಘೋಷಣೆ ಮಾಡಿದೆ. ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಲಾ ಪೌಲ್ ನಟಿಸಿರುವ ಈ ಚಿತ್ರವನ್ನು ಬ್ಲೆಸ್ಸಿ ನಿರ್ದೇಶಿಸಿದ್ದಾರೆ.

ಕರ್ನಾಟಕದಲ್ಲಿ Aadujeevitham- The Goat Life ವಿತರಣೆ ಹಕ್ಕು ಹೊಂಬಾಳೆ ಫಿಲ್ಮ್ಸ್ ಪಾಲು
ದಿ ಗೋಟ್ ಲೈಫ್ ಪೋಸ್ಟರ್ - ಹೊಂಬಾಳೆ ಫಿಲ್ಮ್ಸ್
Published On :

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕರ್ನಾಟಕದಲ್ಲಿ ಬಹು ನಿರೀಕ್ಷಿತ ಆಡುಜೀವಿತಂ- ದಿ ಗೋಟ್ ಲೈಫ್ ಸಿನಿಮಾ ವಿತರಿಸಲು ಸಿದ್ಧವಾಗಿದೆ. ಇತ್ತೀಚೆಗಷ್ಟೇ ಪ್ರೊಡಕ್ಷನ್ ಹೌಸ್ ಈ ಬಗ್ಗೆ ಘೋಷಣೆ ಮಾಡಿದೆ. ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಮತ್ತು ಅಮಲಾ ಪೌಲ್ ನಟಿಸಿರುವ ಈ ಚಿತ್ರವನ್ನು ಬ್ಲೆಸ್ಸಿ ನಿರ್ದೇಶಿಸಿದ್ದಾರೆ. ಚಿತ್ರಕ್ಕೆ ಹಿರಿಯ ಸಂಗೀತ ನಿರ್ದೇಶಕ ಎಆರ್ ರೆಹಮಾನ್ ಸಂಗೀತ ಸಂಯೋಜಿಸಿದ್ದಾರೆ. ಮಾರ್ಚ್ 28ರಂದು ಬಿಡುಗಡೆಯಾಗಲಿರುವ ಈ ಚಿತ್ರವು ಈಗಾಗಲೇ ಪ್ರೇಕ್ಷಕರಲ್ಲಿ ಕುತೂಹಲ ಕೆರಳಿಸಿದೆ.

ಹೊಂಬಾಳೆ ಫಿಲ್ಮ್ಸ್‌ನ ಹೇಳಿಕೆ ಪ್ರಕಾರ, ಆಡುಜೀವಿತಂ ತನ್ನ ಮನಮುಟ್ಟುವ ನಿರೂಪಣೆ ಮತ್ತು ಅದ್ಭುತ ಅಭಿನಯದಿಂದ ಪ್ರೇಕ್ಷಕರ ಹೃದಯ ಮತ್ತು ಮನಸ್ಸನ್ನು ಸೆರೆಹಿಡಿಯುವ ಭರವಸೆ ನೀಡುವ ಚಿತ್ರವಾಗಿದೆ. ಇದು ಚಿತ್ರದ ಸುತ್ತಲಿನ ನಿರೀಕ್ಷೆಯನ್ನು ಪ್ರತಿಬಿಂಬಿಸುತ್ತದೆ. ಇದು ಅದರ ಕುತೂಹಲಕಾರಿ ಕಥಾಹಂದರ ಮತ್ತು ಪ್ರತಿಭಾವಂತ ನಟರಿಂದಾಗಿ ಗಮನ ಸೆಳೆದಿದೆ.

ಈ ಹಿಂದೆ ಕೆಜಿಎಫ್: ಅಧ್ಯಾಯ 1 ಮತ್ತು 2, ಕಾಂತಾರ ಮತ್ತು ಸಲಾರ್‌ನಂತಹ ಯಶಸ್ವಿ ಸಿನಿಮಾಗಳನ್ನು ಕೇರಳದಲ್ಲಿ ಪೃಥ್ವಿರಾಜ್ ಪ್ರೊಡಕ್ಷನ್ಸ್‌ ವಿತರಿಸಿತ್ತು. ಇದೀಗ ಹೊಂಬಾಳೆ ಫಿಲ್ಮ್ಸ್ ಈ ಚಿತ್ರದ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ. ಈ ಸಹಯೋಗವು ಚಿತ್ರರಂಗದಲ್ಲಿ ಬಲಿಷ್ಟವಾದ ಸಂಬಂಧಗಳನ್ನು ಬೆಳೆಸಲು ಎರಡೂ ನಿರ್ಮಾಣ ಸಂಸ್ಥೆಗಳ ಬದ್ಧತೆಯನ್ನು ಎತ್ತಿ ತೋರಿಸುತ್ತದೆ.

'ಈ ಪರಸ್ಪರ ಸಹಕಾರವು ಉದ್ಯಮದೊಳಗಿನ ಸಂಬಂಧಗಳನ್ನು ಬಲಪಡಿಸುವುದಲ್ಲದೆ, ಪ್ರದೇಶಗಳಾದ್ಯಂತ ಪ್ರೇಕ್ಷಕರು ವೈವಿಧ್ಯಮಯ ಗುಣಮಟ್ಟದ ಸಿನಿಮಾಗಳನ್ನು ವೀಕ್ಷಿಸಲು ಅನುವು ಮಾಡಿಕೊಡುತ್ತದೆ. ಈ ಮೂಲಕ ಪ್ರೇಕ್ಷಕರಿಗೆ ಬಲವಾದ ಕಂಟೆಂಟ್ ಅನ್ನು ತಲುಪಿಸುವ ಮತ್ತು ಎರಡೂ ನಿರ್ಮಾಣ ಸಂಸ್ಥೆಗಳ ವ್ಯಾಪ್ತಿಯನ್ನು ವಿಸ್ತರಿಸುವ ಗುರಿಯನ್ನು ಹೊಂದಿರುವ ಕಾರ್ಯತಂತ್ರವಾಗಿದೆ' ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.