hijab

ಕರಾವಳಿ ಜಿಲ್ಲೆಗಳಲ್ಲಿ 'ಹಿಜಾಬ್' ವಿಷಯ ಚುನಾವಣಾ ಪ್ರಚಾರದಲ್ಲಿ ಪ್ರಮುಖ ಅಂಶ ಅಲ್ಲವೇ ಅಲ್ಲ!
ಕಳೆದ ವರ್ಷ ಉಡುಪಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತರಗತಿಯೊಳಗೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ 'ಹಿಜಾಬ್ ನಿಷೇಧ' ರಾಷ್ಟ್ರಮಟ್ಟದಲ್ಲಿ ದೊಡ್ಡ ವಿಷಯವಾಗಿತ್ತು. ಆದರೆ, ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ವಿವಾದಾತ್ಮಕ ಹಿಜಾಬ್ ವಿಚಾರ ಪ್ರಮುಖ ವಿಷಯವಾಗಿ ಕಾಣುತ್ತಿಲ್ಲ.

ಹಿಜಾಬ್ ಧರಿಸಿ ದ್ವಿತೀಯ ಪಿಯು ಪರೀಕ್ಷೆ ಬರೆಯಲು ಅವಕಾಶ ಇಲ್ಲ; ಹೊಸ ಶಾಲೆಗಳ ಆರಂಭಕ್ಕೆ ಎನ್ ಒಸಿಗೆ ಸಚಿವರ ಬಳಿ ಬರಬೇಕಿಲ್ಲ: ಬಿ ಸಿ ನಾಗೇಶ್
ಕರ್ನಾಟಕದ ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ ತರಗತಿಯೊಳಗೆ ಹಿಜಾಬ್ (Hijab) ಧರಿಸುವುದಕ್ಕೆ ನಿಷೇಧ ಹೇರಿರುವ ರಾಜ್ಯ ಸರ್ಕಾರದ ಆದೇಶದ ವಿರುದ್ಧ ವಿದ್ಯಾರ್ಥಿನಿಯರ ಸಮೂಹ ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿ ಬರುವ ಪರೀಕ್ಷೆ ವೇಳೆ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂದು ಮನವಿ ಸಲ್ಲಿಸಿದ್ದರು.

ಭಾರತಕ್ಕೂ ಕಾಲಿಟ್ಟ ಇರಾನ್ ಹಿಜಾಬ್ ವಿರುದ್ಧದ ಹೋರಾಟ ಜ್ವಾಲೆ: ಕೇರಳದಲ್ಲಿ ಹಿಜಾಬ್ ಗೆ ಬೆಂಕಿಯಿಟ್ಟ ಮುಸ್ಲಿಂ ಮಹಿಳೆಯರು!
ಕಡ್ಡಾಯ ಹಿಜಾಬ್‌ಗೆ ಸಂಬಂಧಿಸಿದಂತೆ ಇರಾನ್‌ನಲ್ಲಿ ಕೆಲ ದಿನಗಳಿಂದ ಸರ್ಕಾರದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿವೆ. ಈ ಸಂದರ್ಭದಲ್ಲಿ ಅನೇಕ ಜನರು ಸೈನಿಕರ ಗುಂಡೇಟಿಗೆ ಬಲಿಯಾಗಿದ್ದಾರೆ. ಹಿಜಾಬ್ ವಿರುದ್ಧ ಆರಂಭವಾದ ಈ ಪ್ರತಿಭಟನೆಯ ಜ್ವಾಲೆ ಇದೀಗ ಭಾರತದ ಕೇರಳಕ್ಕೂ ತಲುಪಿದೆ.

ಹಿಜಾಬ್ ಧರಿಸಿದ ಮಹಿಳೆಯನ್ನು ಭಾರತದ ಪ್ರಧಾನಿಯಾಗಿ ನೋಡಲು ಬಯಸುತ್ತೇನೆ: ಓವೈಸಿ
ಹಿಜಾಬ್ ಧರಿಸಿರುವ ಮಹಿಳೆಯನ್ನು ಭಾರತದ ಪ್ರಧಾನಮಂತ್ರಿಯಾಗಿ ನೋಡಲು ಬಯಸುತ್ತೇನೆ ಎಂದು ಎಐಎಂಐಎಂ ಅಧ್ಯಕ್ಷ ಅಸಾದುದ್ದೀನ್ ಓವೈಸಿ ಅವರು ಮಂಗಳವಾರ ಹೇಳಿದ್ದಾರೆ.

ಹಿಜಾಬ್ ಧರಿಸದೆ ಸ್ಪರ್ಧಿಸಿದ ಅಥ್ಲೀಟ್ ಎಲ್ನಾಜ್ ರೆಕಾಬಿಗೆ ಇರಾನ್‌ನಲ್ಲಿ ಭವ್ಯ ಸ್ವಾಗತ, ವಿಡಿಯೋ ವೈರಲ್!
ಕ್ರೀಡಾಕೂಟದಲ್ಲಿ ಹಿಜಾಬ್ ಧರಿಸದೆ ಸ್ಪರ್ಧಿಸುವ ಮೂಲಕ ಸಂಚಲನ ಮೂಡಿಸಿದ್ದ ಇರಾನ್ ಪರ್ವತಾರೋಹಿಯೊಬ್ಬರು ಕಳೆದ ರಾತ್ರಿ ಟೆಹ್ರಾನ್‌ಗೆ ಆಗಮಿಸಿದ್ದು ಆಟಗಾರ್ತಿಯ ನಡೆಯನ್ನು ಶ್ಲಾಘಿಸಿದ ಬೆಂಬಲಿಗರು ವೀರೋಚಿತ ಸ್ವಾಗತವನ್ನು ನೀಡಿದರು.

'ನಮ್ಮ ಮುಸ್ಲಿಂ ಹೆಣ್ಣು ಮಕ್ಕಳು ಹಿಜಾಬ್ ಧರಿಸುತ್ತಾರೆ: ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ'
ಮುಸ್ಲಿಂ ಹೆಣ್ಣುಮಕ್ಕಳಿಗೆ ಹಿಜಾಬ್ ಧರಿಸಲು ಯಾರೂ ಒತ್ತಾಯ ಮಾಡುತ್ತಿಲ್ಲ, ಅವರ ಇಚ್ಚೆ ಅದು. ನೀವು ಬಿಕಿನಿ ಬೇಕಾದರೆ ಹಾಕಿಕೊಳ್ಳಿ, ಆದರೆ ನಮ್ಮ ಮುಸ್ಲಿಂ ಹೆಣ್ಣುಮಕ್ಕಳು ಹಿಜಾಬ್ ಧರಿಸುತ್ತಾರೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.

ಇರಾನ್‌ನಲ್ಲಿ ಹಿಜಾಬ್ ವಿರೋಧಿ ಪ್ರತಿಭಟನೆ: ಕನಿಷ್ಠ 28 ಮಕ್ಕಳ ಹತ್ಯೆ, ನೂರಾರು ಮಂದಿ ಜೈಲುಪಾಲು!
ಮಹ್ಸಾ ಅಮಿನಿಯ ಸಾವಿನ ನಂತರ ಇರಾನ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 28 ಮಕ್ಕಳು ಸಾವನ್ನಪ್ಪಿದ್ದಾರೆ. ನೂರಾರು ಯುವಕರು ಜೈಲುಪಾಲಾಗಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ತಿಳಿಸಿದೆ.

ಪುರುಷರು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು, ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು: ಬಿಜೆಪಿ ಸಚಿವ
ಪುರುಷರು ತಮ್ಮ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು ಮತ್ತು ಮಹಿಳೆಯರನ್ನು ಹಿಜಾಬ್‌ನಿಂದ ಮುಕ್ತಗೊಳಿಸಬೇಕು ಎಂದು ಹರಿಯಾಣದ ಸಚಿವ ಅನಿಲ್ ವಿಜ್ ಗುರುವಾರ ಹಿಜಾಬ್ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಇರಾನ್: ಹಿಜಾಬ್ ವಿರೋಧಿಸಿ ಕ್ಯಾಮೆರಾ ಮುಂದೆ ಅರೆಬೆತ್ತಲಾದ ಸೇಕ್ರೆಡ್ ಗೇಮ್ಸ್ ನಟಿ, ವಿಡಿಯೋ ವೈರಲ್!
ಹಿಜಾಬ್ ವಿಚಾರವಾಗಿ ಇರಾನ್ ನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಮಯದಲ್ಲಿ ಸೇಕ್ರೆಡ್ ಗೇಮ್ಸ್ ನ ನಟಿ ಎಲ್ನಾಜ್ ನೊರೌಜಿ ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ.

