ವಿದೇಶ

ಇರಾನ್: ಹಿಜಾಬ್ ವಿರೋಧಿಸಿ ಕ್ಯಾಮೆರಾ ಮುಂದೆ ಅರೆಬೆತ್ತಲಾದ ಸೇಕ್ರೆಡ್ ಗೇಮ್ಸ್ ನಟಿ, ವಿಡಿಯೋ ವೈರಲ್!

ಹಿಜಾಬ್ ವಿಚಾರವಾಗಿ ಇರಾನ್ ನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಮಯದಲ್ಲಿ ಸೇಕ್ರೆಡ್ ಗೇಮ್ಸ್ ನ ನಟಿ ಎಲ್ನಾಜ್ ನೊರೌಜಿ ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಇರಾನ್: ಹಿಜಾಬ್ ವಿರೋಧಿಸಿ ಕ್ಯಾಮೆರಾ ಮುಂದೆ ಅರೆಬೆತ್ತಲಾದ ಸೇಕ್ರೆಡ್ ಗೇಮ್ಸ್ ನಟಿ, ವಿಡಿಯೋ ವೈರಲ್!
ಎಲ್ನಾಜ್ ನೊರೌಜಿ
Published On :

ನವದೆಹಲಿ: ಹಿಜಾಬ್ ವಿಚಾರವಾಗಿ ಇರಾನ್ ನಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗುತ್ತಿರುವ ಸಮಯದಲ್ಲಿ ಸೇಕ್ರೆಡ್ ಗೇಮ್ಸ್ ನ ನಟಿ ಎಲ್ನಾಜ್ ನೊರೌಜಿ ಸಹ ಹೋರಾಟಕ್ಕೆ ಕೈಜೋಡಿಸಿದ್ದಾರೆ.

ಹಿಜಾಬ್ ವಿರೋಧಿಸಿ ಹಾಗೂ ನೈತಿಕ ಪೊಲೀಸ್ ಗಿರಿಯ ವಿರುದ್ಧ ನಟಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಕ್ಯಾಮೆರಾ ಎದುರು ಬಟ್ಟೆ ಕಳಚಿ ಅರೆ ಬೆತ್ತಲಾಗಿದ್ದಾರೆ. ನಟಿ ಈ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Story image

ಮಹಿಳೆಯರಿಗೆ ಏನು ಬೇಕೋ ಅದನ್ನು ಧರಿಸುವ ಸ್ವಾತಂತ್ರ್ಯವಿದೆ. ಯಾರೂ ಅವಳನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳುತ್ತಾ ಬುರ್ಕಾ ಕಿತ್ತೆಸೆದು ಅರೆ ಬೆತ್ತಲಾಗುವ ಮೂಲಕ ತಾನು ಪ್ರತಿಭಟನೆಗೆ ಸೇರಿಕೊಂಡಿದ್ದಾರೆ.

ಪ್ರತಿಯೊಬ್ಬರು ವಿಭಿನ್ನ ದೃಷ್ಟಿಕೋನಗಳು ಮತ್ತು ನಂಬಿಕೆಗಳನ್ನು ಹೊಂದಿದ್ದಾರೆ. ಇದನ್ನು ನಾವು ಗೌರವಿಸಬೇಕು. ಪ್ರಜಾಪ್ರಭುತ್ವ ಎಂದರೆ ನಿರ್ಧಾರ ತೆಗೆದುಕೊಳ್ಳುವ ಶಕ್ತಿ ಎಂದು ಎಲ್ನಾಜ್ ಹೇಳಿಕೊಂಡಿದ್ದಾರೆ.

ನಟಿಯ ಈ ವಿಡಿಯೋ ಸಖತ್ ವೈರಲ್ ಆಗಿದ್ದು ಇದೀಗ ಈ ವಿಡಿಯೋವನ್ನು ಇನ್ ಸ್ಟಾಗ್ರಾಂನಿಂದ ತೆಗೆದು ಹಾಕಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.