heavy rain

ಪೂರ್ವ ಮೆಕ್ಸಿಕೋದಲ್ಲಿ ಭಾರಿ ಭೂಕುಸಿತ; ಕನಿಷ್ಠ 40 ಮಂದಿ ಸಾವು, ಹಲವರ ಕಣ್ಮರೆ
ಪೂರ್ವ ಮೆಕ್ಸಿಕೋದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಸಭವಿಸಿದ್ದು, ಘಟನೆಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

"ಮಹಾ" ಮಳೆ: ಕರ್ನಾಟಕದ ಚಿಕ್ಕೋಡಿಯಲ್ಲಿ ಪ್ರವಾಹ, ಮನೆ ತೊರೆದ ಗ್ರಾಮಸ್ಥರು
ಮಹಾರಾಷ್ಟ್ರದ ಘಟ್ಟ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಭಾರಿ ಮಳೆ ಭಾನುವಾರವೂ ಮುಂದುವರೆದಿದ್ದು, ಕರ್ನಾಟಕದ ಗಡಿ ಭಾಗದ ಜಿಲ್ಲೆಗಳಲ್ಲೂ ಮಳೆ ವ್ಯಾಪಕ ದುಷ್ಪರಿಣಾಮ ಬೀರಿದೆ.

"ಮಹಾ" ಮಳೆ: ಉತ್ತರ ಕರ್ನಾಟಕದಲ್ಲಿ ಪ್ರವಾಹ ಭೀತಿ, ಚಿಕ್ಕೋಡಿಯ 6 ಸೇತುವೆ ಜಲಾವೃತ
ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಪ್ರವಾಹ ಭೀತಿ ಶುರುವಾಗಿದ್ದು, ಚಿಕ್ಕೋಡಿಯ ಪ್ರಮುಖ ಆರು ಸೇತುವೆಗಳು ಜಲಾವೃತ್ತವಾಗಿವೆ.

ಪ್ರವಾಹದ ನಡುವೆಯೂ ಈಜಾಡುತ್ತಿರುವ ಗ್ರಾಮಸ್ಥರು, ಬಟ್ಟೆ ಒಗೆಯುತ್ತಿರುವ ಮಹಿಳೆಯರು!
ಅತ್ತ ಮಹಾರಾಷ್ಟ್ರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಆ ರಾಜ್ಯದ ಎಲ್ಲ ಜಲಾಶಯಗಳು ಭರ್ತಿಯಾಗಿದ್ದು, ಯಾವುದೇ ಕ್ಷಣಗದಲ್ಲೂ ನದಿಗೆ ಅಪಾರ ಪ್ರಮಾಣದ ನೀರು ಬಿಡುವ ಸಾಧ್ಯತೆಗಳಿವೆ.

"ಮಹಾ" ಮಳೆ: ಮುಂಬೈನಲ್ಲಿ ರೈಲು, ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ, ಜನ ಜೀವನ ಅಸ್ತವ್ಯಸ್ಥ
ಮಹಾರಾಷ್ಟ್ರದಲ್ಲಿ ಕಳೆದೊಂದು ವಾರದಿಂದ ಸುರಿಯುತ್ತಿರುವ ಮಳೆ ಶುಕ್ರವಾರವೂ ಮುಂದುವರೆದಿದ್ದು, ಭಾರಿ ಮಳೆಯಿಂದಾಗಿ ವಾಣಿಜ್ಯ ನಗರಿ ಮುಂಬೈನಲ್ಲಿ ರೈಲು ಮತ್ತು ವಿಮಾನ ಸಂಚಾರದಲ್ಲಿ ಭಾರಿ ವ್ಯತ್ಯಯ ಕಂಡುಬಂದಿದೆ.

ಗುರಗಾಂವ್ ಟ್ರಾಫಿಕ್ ಜಾಮ್ ಗೆ ಪೊಲೀಸ್ ಆಯುಕ್ತರ ತಲೆದಂಡ; ರೋಹ್ಟಕ್ ಗೆ ವರ್ಗಾವಣೆ
ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣ ಪೊಲೀಸ್ ಆಯುಕ್ತರ ತಲೆದಂಡಕ್ಕೆ ಕಾರಣವಾಗಿದ್ದು, ಕರ್ತವ್ಯಲೋಪದ ಮೇರೆಗೆ ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.

ರಾಜಧಾನಿ ದೆಹಲಿಯಲ್ಲೂ ಮಳೆ ಅವಾಂತರ; ಗುರಗಾಂವ್ ನಲ್ಲಿ ಭಾರಿ ಟ್ರಾಫಿಕ್ ಜಾಮ್
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಮಳೆ ಭಾರಿ ಅವಾಂತರ ಸೃಷ್ಟಿಸಿದ್ದು, ಗುರಗಾಂವ್ ನಲ್ಲಿ ಕಳೆದ ಮೂರು ದಿನಗಳಿಂದ ಸುರಿದ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ನೀರು ನಿಂತ ಪರಿಣಾಮ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಕಿಮೀ ಗಟ್ಟಲೇ ವಾಹನಗಳು ನಿಲ್ಲುವಂತಾಗಿದೆ.

ರಾತ್ರಿ ಇಡೀ ಸುರಿದ ಮಳೆಗೆ ಬೆಂಗಳೂರು ತತ್ತರ; ಕೋಡಿ ಚಿಕ್ಕನಹಳ್ಳಿ ಕೆರೆ ಭರ್ತಿ
ಸತತ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ರಾಜಧಾನಿ ಬೆಂಗಳೂರು ತತ್ತರಿಸಿ ಹೋಗಿದ್ದು, ನಿನ್ನೆ ಇಡೀ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ನಗರದ ಪ್ರಮುಖ ಪ್ರದೇಶಗಳು ಜಲಾವೃತ್ತವಾಗಿವೆ.

ಮಾರತ್ ಹಳ್ಳಿ ಬಳಿ ವಾಯುಸೇನೆ ಕಾಪೌಂಡ್ ಕುಸಿತ; 7ಕ್ಕೂ ಹೆಚ್ಚು ವಾಹನಗಳು ಜಖಂ
ಕಳೆದ ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಂಗಳೂರು ನಗರ ಅಕ್ಷರಃ ತತ್ತರಿಸಿ ಹೋಗಿದ್ದು, ಗುರುವಾರ ರಾತ್ರಿ ಮಾರತ್ ಹಳ್ಳಿ ಸಮೀಪ ಭಾರತೀಯ ವಾಯು ಸೇನೆಗೆ ಸೇರಿದೆ ಜಾಗದ ಕಾಪೌಂಡ್ ಕುಸಿದ ಪರಿಣಾಮ ಸುಮಾರು 7 ವಾಹನಗಳು ಜಖಂಗೊಂಡಿವೆ.

