ವಿದೇಶ

ಪೂರ್ವ ಮೆಕ್ಸಿಕೋದಲ್ಲಿ ಭಾರಿ ಭೂಕುಸಿತ; ಕನಿಷ್ಠ 40 ಮಂದಿ ಸಾವು, ಹಲವರ ಕಣ್ಮರೆ

ಪೂರ್ವ ಮೆಕ್ಸಿಕೋದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಸಭವಿಸಿದ್ದು, ಘಟನೆಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.

ಪೂರ್ವ ಮೆಕ್ಸಿಕೋದಲ್ಲಿ ಭಾರಿ ಭೂಕುಸಿತ; ಕನಿಷ್ಠ 40 ಮಂದಿ ಸಾವು, ಹಲವರ ಕಣ್ಮರೆ
ಮೆಕ್ಸಿಕೋ ನಗರದಲ್ಲಿ ಭೂಕುಸಿತ (ಎಪಿ ಚಿತ್ರ)
Published On :
ಮೆಕ್ಸಿಕೋ: ಪೂರ್ವ ಮೆಕ್ಸಿಕೋದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ಸಭವಿಸಿದ್ದು, ಘಟನೆಯಲ್ಲಿ ಕನಿಷ್ಠ 40 ಮಂದಿ ಸಾವನ್ನಪ್ಪಿದ್ದಾರೆ ಎಂದು  ತಿಳಿದುಬಂದಿದೆ.
ಮೆಕ್ಸಿಕೋ ನಗರದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಎಡೆಬಿಡದೆ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಟ್ಟಗುಡ್ಡಗಳ ಮಣ್ಣು ಸಡಿಲಗೊಂಡಿರುವುದೇ ಭೂ ಕುಸಿತಕ್ಕೆ ಕಾರಣ ಎಂದು  ಹೇಳಲಾಗುತ್ತಿದೆ. ಮೆಕ್ಸಿಕೋ ನಗರದ ಪ್ಯುಬ್ಲಾ ಮತ್ತು ವೆರಾಕ್ರಜ್ ಪ್ರಾಂತ್ಯಗಳಲ್ಲಿ ನಡೆದ ಭೂಕುಸಿತದಲ್ಲಿ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದು, ಪ್ಯುಬ್ಲಾದಲ್ಲಿ ನಡೆದ ಮತ್ತೊಂದು ಭೂಕುಸಿತ ಪ್ರಕರಣದಲ್ಲಿ 28 ಮಂದಿ ಮಣ್ಣಿನಡಿ ಸಿಲುಕಿ ಸಾವನ್ನಪ್ಪಿದ್ದಾರೆ.
 ರಾಜ್ಯಪಾಲ ರಾಫೆಲ್ ಮೊರೆನೊ ವ್ಯಾಲ್ಲೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾಗಿ  ಹೇಳಿದ್ದಾರೆ. ಇನ್ನು ವೆರಾಕ್ರಜ್​ನಲ್ಲಿ ನಡೆದ ಭೂಕುಸಿತ ಪ್ರಕರಣದಲ್ಲಿ ಘಟನೆಯಲ್ಲಿ 11 ಮಂದಿ ಸಾವಿಗೀಡಾಗಿದ್ದು, ಅಪಾಯದಲ್ಲಿರುವವರ ರಕ್ಷಣೆಗಾಗಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.  ಎರಡೂ ಪ್ರಾಂತ್ಯಗಳಲ್ಲಿನ ಪರ್ವತದ ತಪ್ಪಲಲ್ಲಿರುವವರನ್ನು ಈಗಾಗಲೇ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಮೆಕ್ಸಿಕೋ ನಗರದಲ್ಲಿ ಮತ್ತೆ ಭಾರಿ ಮಳೆ
ಅತ್ತ ಮೆಕ್ಸಿಕೋ ನಗರದಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಗೇ ಅಲ್ಲಿನ ಜನ ಜೀವನ ಅಸ್ಚವ್ಯಸ್ತಗೊಂಡಿದ್ದು, ಹವಾಮಾನ ಇಲಾಖೆ ಮುಂದಿನ 48 ಗಂಟೆಗಳಲ್ಲಿ  ಭಾರಿ ಪ್ರಮಾಣದ  ಮಳೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.