ಗುರಗಾಂವ್ ಟ್ರಾಫಿಕ್ ಜಾಮ್ ಗೆ ಪೊಲೀಸ್ ಆಯುಕ್ತರ ತಲೆದಂಡ; ರೋಹ್ಟಕ್ ಗೆ ವರ್ಗಾವಣೆ
ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣ ಪೊಲೀಸ್ ಆಯುಕ್ತರ ತಲೆದಂಡಕ್ಕೆ ಕಾರಣವಾಗಿದ್ದು, ಕರ್ತವ್ಯಲೋಪದ ಮೇರೆಗೆ ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.

Published On :
ಗುರಗಾಂವ್: ಮಳೆಯಿಂದಾಗಿ ರಾಜಧಾನಿ ದೆಹಲಿ-ಗುರಗಾಂವ್ ಹೆದ್ದಾರಿಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಪ್ರಕರಣ ಪೊಲೀಸ್ ಆಯುಕ್ತರ ತಲೆದಂಡಕ್ಕೆ ಕಾರಣವಾಗಿದ್ದು, ಕರ್ತವ್ಯಲೋಪದ ಮೇರೆಗೆ ಆಯುಕ್ತ ನವದೀಪ್ ವಿರ್ಕ್ ರನ್ನು ವರ್ಗಾವಣೆ ಮಾಡಲಾಗಿದೆ.
ಗುರಗಾಂವ್-ದೆಹಲಿ-ಜೈಪುರ ಹೆದ್ದಾರಿಯಲ್ಲಿ ನಿನ್ನೆ ಸಂಭವಿಸಿದ್ದ ಭಾರಿ ಟ್ರಾಫಿಕ್ ಜಾಮ್ ನಿರ್ವಹಣೆಯಲ್ಲಿ ಗುರಗಾಂವ್ ಪೊಲೀಸರು ವಿಫಲವಾದ ಹಿನ್ನಲೆಯಲ್ಲಿ ರಾಜ್ಯ ಸರ್ಕಾರ ಪೊಲೀಸ್ ಆಯುಕ್ತ ಸಿಪಿ ನವದೀಪ್ ವಿರ್ಕ್ ರನ್ನು ರೋಹ್ಟಕ್ ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಅಲ್ಲದೆ ಗುರಗಾಂವ್ ನ ನೂತನ ಆಯುಕ್ತರನ್ನಾಗಿ ಸಂದೀಪ್ ಖಿರವಾರ್ ಅವರನ್ನು ನೇಮಿಸಲಾಗಿದೆ. ಇನ್ನು ಟ್ರಾಫಿಕ್ ಜಾಮ್ ಕುರಿತಂತೆ ಪೊಲೀಸರ ಲೋಪ ಒಪ್ಪಿಕೊಂಡಿರುವ ಆಯುಕ್ತ ನವದೀಪ್ ಅವರು, ಟ್ರಾಫಿಕ್ ನಿರ್ವಹಣೆಯಲ್ಲಿ ನಾವು ಕೊಂಚ ತಡ ಮಾಡಿದೆವು ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ.
ಗುರಗಾಂವ್ ನಲ್ಲಿ ಗುರುವಾರದಿಂದ ಸತತ ಮೂರು ದಿನ ಸುರಿದ ಭಾರಿ ಮಳೆಯಿಂದಾಗಿ ಗುರುಗ್ರಾಮದಲ್ಲಿ 15 -20ಕಿ.ಮೀ. ಉದ್ದದ ಸಂಚಾರ ದಟ್ಟಣೆ ಉಂಟಾಗಿತ್ತು. ಇದರಿಂದಾಗಿ ವಿದ್ಯಾರ್ಥಿಗಳು, ನೌಕರರು, ಪ್ರಮುಖವಾಗಿ ರೋಗಿಗಳು ತೀವ್ರ ತೊಂದರೆ ಅನುಭವಿಸುವಂತಾಗಿತ್ತು. ಟ್ರಾಫಿಕ್ ಜಾಮ್ ಹಾಗೂ ಗುರಗಾಂವ್ ಪೊಲೀಸರ ಲೋಪದಿಂದ ಕೂಡಿದ ನಿರ್ವಹಣೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆಗೆ ಗುರಿಯಾಗಿತ್ತು.
ಸ್ವತಃ ಗುರುಗಾಂವ್ ಪೊಲೀಸರು ದೆಹಲಿ-ಗುರುಗಾಂವ್ ರಸ್ತೆಯಲ್ಲಿ ಪ್ರಯಾಣ ಮುಂದೂಡುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಮನವಿ ಮಾಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ನವದೆಹಲಿNew Delhitraffic jamheavy rainಭಾರಿ ಮಳೆಟ್ರಾಫಿಕ್ ಜಾಮ್Gurgaon-Delhi Highwayಗುರಗಾಂವ್-ದೆಹಲಿ ಹೆದ್ದಾರಿ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


