Hampi

ಜಿ-20 ಶೃಂಗಸಭೆಗೆ ಸಿದ್ಧತೆ ಹೆಸರಲ್ಲಿ ಹಂಪಿಯಲ್ಲಿ ಭಾರೀ ವಾಹನಗಳಿಗೆ ಪ್ರವೇಶ; ನಿಯಮ ಉಲ್ಲಂಘಿಸಿದ ಜಿಲ್ಲಾಡಳಿತ!
ವಿಜಯನಗರ ಜಿಲ್ಲೆ ಹಂಪಿಯಲ್ಲಿ ಜುಲೈ 13ರಿಂದ ಮೂರು ದಿನಗಳ ಕಾಲ ನಡೆಯಲಿರುವ ಜಿ20 ಶೆರ್ಪಾ ಮೀಟ್‌ಗೆ ಆತಿಥ್ಯ ವಹಿಸಲು ಸಜ್ಜಾಗುತ್ತಿರುವಾಗಲೇ ಯುನೆಸ್ಕೋ ಮತ್ತು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ನಿಯಮಗಳನ್ನು ಗಾಳಿಗೆ ತೂರಿರುವ ಅಧಿಕಾರಿಗಳು ವಿವಿಧೆಡೆಯಿಂದ ತೀವ್ರ ಟೀಕೆಗೆ ಗುರಿಯಾಗಿದ್ದಾರೆ.

ಹೊಸಪೇಟೆ: ಹಂಪಿಯಲ್ಲಿ ಜಿ-20 ಶೃಂಗಸಭೆಗೆ ಸಿದ್ಧತೆ ಆರಂಭ
ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಜುಲೈ 10-12ರವರೆಗೆ ನಡೆಯಲಿರುವ ಜಿ.20 ಶೃಂಗಸಭೆ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಮತ್ತು ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಿದ್ಧತೆ ಆರಂಭಗೊಂಡಿದೆ.

ಸ್ಥಳೀಯರ ವಿರೋಧ: ಹಂಪಿಯಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಸ್ಥಗಿತಗೊಳಿಸಿದ ಎಎಸ್‌ಐ
ಹಂಪಿಯ ಬಡವಿಲಿಂಗ ದೇವಸ್ಥಾನದ ಸುತ್ತ 10 ದಿನಗಳ ಹಿಂದೆ ಕೈಗೆತ್ತಿಕೊಂಡಿದ್ದ ಕಾಂಪೌಂಡ್ ಗೋಡೆ ನಿರ್ಮಾಣ ಕಾಮಗಾರಿಗೆ ಎಎಸ್ಐ ತಡೆ ನೀಡಿದೆ.

ಎಎಸ್ಐ ನಿಯಮ ಉಲ್ಲಂಘಿಸುತ್ತಿರುವ ಪ್ರವಾಸಿಗರು: ಹಂಪಿಯಲ್ಲಿ 50 ಹೆಚ್ಚುವರಿ ಸಿಸಿಟಿವಿ ಕ್ಯಾಮೆರಾಗಳ ಅಳವಡಿಸಲು ಅಧಿಕಾರಿಗಳು ಮುಂದು!
ವಿಶ್ವಪ್ರಸಿದ್ಧ ಹಂಪಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರು ಭಾರತೀಯ ಪುರಾತತ್ವ ಸರ್ವೇಕ್ಷಣೆಯ (ASI) ನಿಯಮಗಳನ್ನು ಉಲ್ಲಂಘನೆ ಮಾಡುತ್ತಿರುವ ಘಟನೆಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲು ವಿಜಯನಗರ ಜಿಲ್ಲಾಡಳಿತ ಮತ್ತು ಹಂಪಿ ವಿಶ್ವ ಪರಂಪರೆ ಪ್ರದೇಶ ನಿರ್ವಹಣಾ ಪ್ರಾಧಿಕಾರ ಮುಂದಾಗಿದೆ.

ಹಂಪಿ ಸ್ಮಾರಕದ ಮೇಲೆ ನೃತ್ಯದ ರೀಲ್ಸ್ ಮಾಡಿ ಬಂಧನಕ್ಕೊಳಗಾಗಿದ್ದ ದೀಪಕ್ ಗೌಡಗೆ ಜಾಮೀನು
ರೀಲ್ಸ್ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿ ಬಂಧನಕ್ಕೊಳಗಾಗಿದ್ದ ಇನ್ ಸ್ಟಾಗ್ರಾಂ ಖ್ಯಾತಿಯ ದೀಪಕ್ ಗೌಡಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಹಂಪಿ: ಹೋಳಿ ಬಣ್ಣಗಳಲ್ಲಿ ಮಿಂದೆದ್ದ ಪ್ರವಾಸಿಗರು, ಬಣ್ಣದೋಕುಳಿ ಆಡಿದ ವಿದೇಶಿಗರು
ವಿಶ್ವವಿಖ್ಯಾತ ಹಂಪಿ ವೀಕ್ಷಣೆಗೆ ಬಂದಿದ್ದ ದೇಶ, ವಿದೇಶದ ಪ್ರವಾಸಿಗರು ಸ್ಥಳೀಯರ ಜತೆಗೂಡಿ ಪರಸ್ಪರ ಬಣ್ಣ ಎರಚಿಕೊಂಡು ಹೋಳಿಯನ್ನು ಸಂಭ್ರಮದಿಂದ ಆಚರಿಸಿದರು. ಸ್ಮಾರಕಗಳ ವೀಕ್ಷಣೆಗೆ ಕಳೆದ ನಾಲ್ಕೈದು ದಿನಗಳಿಂದ ಹಂಪಿಯಲ್ಲಿ ಬೀಡುಬಿಟ್ಟಿದ್ದ ವಿದೇಶಿ ಪ್ರವಾಸಿಗರು ಹೋಳಿ ಬಣ್ಣಗಳಲ್ಲಿ ಮಿಂದೆದ್ದರು.

ರೀಲ್ಸ್'ಗಾಗಿ ಹಂಪಿ ಸ್ಮಾರಕದ ಮೇಲೆ ನೃತ್ಯ: ಯುವಕನ ಪತ್ತೆ ಹಚ್ಚಿದ ಪೊಲೀಸರು, ವಿಚಾರಣೆಗೆ ಹಾಜರಾಗುವಂತೆ ಸೂಚನೆ
ರೀಲ್ಸ್ಗಾಗಿ ಹಂಪಿಯ 14ನೇ ಶತಮಾನದ ಸ್ಮಾರಕವನ್ನೇರಿ ನೃತ್ಯ ಮಾಡಿದ್ದ ಯುವಕನನ್ನು ಹಂಪಿ ಪೊಲೀಸರು ಪತ್ತೆ ಹಚ್ಚಿದ್ದು, ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದ್ದಾರೆಂದು ತಿಳಿದುಬಂದಿದೆ.

ಹಂಪಿ ಸ್ಮಾರಕದ ಮೇಲೆ ಹತ್ತಿ ಯುವಕನ ಡ್ಯಾನ್ಸ್; ಎಎಸ್ ಐ ನಿಯಮ ಉಲ್ಲಂಘನೆ; ಪೊಲೀಸರಿಂದ ಸ್ವಯಂಪ್ರೇರಿತ ಕೇಸು ದಾಖಲು
ಹಂಪಿಯ ಹೇಮಕೂಟ ಬೆಟ್ಟದಲ್ಲಿ ಯುವಕರು ಕುಣಿದು ಕುಪ್ಪಳಿಸುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, 14ನೇ ಶತಮಾನದ ಪುರಾತನ ಸ್ಮಾರಕದ ಮಂಟಪಕ್ಕೆ ಹತ್ತುತ್ತಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ವ್ಯಾಪಕ ವಿರೋಧ ವ್ಯಕ್ತವಾಗಿ ಹಂಪಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಂಪಿ: ಪವಿತ್ರ ಪುರಂದರ ಮಂಟಪದಲ್ಲಿ ವಿದೇಶಿಯರ ಮೋಜು ಮಸ್ತಿ; ಸಿಗರೇಟ್, ಮದ್ಯಸೇವನೆ; ಸ್ಥಳೀಯರಿಂದ ದೂರು
ಶ್ವಪ್ರಸಿದ್ಧ ಹಂಪಿಯ ಪುರಂದರ ಮಂಟಪದೊಳಗೆ ಕುಳಿತು ವಿದೇಶಿಯರು ಸೋಮವಾರ ಮದ್ಯ ಸೇವಿಸಿರುವುದು ಕಂಡು ಬಂದಿದೆ. ಹಂಪಿಯಲ್ಲಿ ಮದ್ಯ, ಮಾಂಸಾಹಾರ ಸೇವನೆ ಮೇಲೆ ನಿಷೇಧವಿದೆ. ಪುರಂದರ ಮಂಟಪದ ಬಳಿ ಸೇರಿದಂತೆ ಕೆಲವೆಡೆ ಈ ಬಗ್ಗೆ ನಾಮಫಲಕಗಳನ್ನೂ ಹಾಕಲಾಗಿದೆ.

