Hampi

ಹಂಪಿ ಸ್ಮಾರಕಗಳ ಸಂರಕ್ಷಿಸಲು ಶೀಘ್ರದಲ್ಲೇ ಮರದ ಬ್ಯಾರಿಕೇಡ್ ಅಳವಡಿಕೆ!
ಭಾರತೀಯ ಪುರಾತತ್ವ ಸಮೀಕ್ಷೆ (ASI) ಮತ್ತು ಹಂಪಿ ವಿಶ್ವ ಪರಂಪರೆಯ ಪ್ರದೇಶ ನಿರ್ವಹಣಾ ಪ್ರಾಧಿಕಾರ (HWHAMA) ಜಂಟಿಯಾಗಿ ಹಂಪಿಯಲ್ಲಿರುವ ಪ್ರಮುಖ ಸ್ಮಾರಕಗಳಿಗೆ ಮರದ ಬ್ಯಾರಿಕೇಡ್ ಅಳವಡಿಸಲು ಚಿಂತನೆ ನಡೆಸುತ್ತಿದೆ

ಹಂಪಿಯಲ್ಲಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಕ್ಕೆ ಮನಸೋತ ಪ್ರವಾಸಿಗರು
ಹಂಪಿ ಮತ್ತು ವಿಜಯನಗರ ಸಾಮ್ರಾಜ್ಯದ ಗತ ವೈಭವ ಸಾರುವ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಚಿತ್ರಗಳು, ಹಂಪಿಯಲ್ಲಿ ರಾರಾಜಿಸುತ್ತಿದ್ದು, ಈ ಚಿತ್ರಗಳಿಗೆ ಪ್ರವಾಸಿಗರು ಮನಸೋತಿದ್ದಾರೆ.

ಹಂಪಿಯಲ್ಲಿ ಮೂರು ದಿನಗಳಿಂದ ನಡೆದ ಜಿ-20 ಶೆರ್ಪಾ ಸಭೆ ಮುಕ್ತಾಯ
ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ ಮುಖ್ಯಸ್ಥ) ಅಮಿತಾಭ್ ಕಾಂತ್ ಅಧ್ಯಕ್ಷತೆಯಲ್ಲಿ ಪಾರಂಪರಿಕ ತಾಣ ಹಂಪಿಯಲ್ಲಿ ನಡೆದ ಜಿ20 ಶೆರ್ಪಾ ಮೂರನೇ ಸಭೆ ಭಾನುವಾರ ಮುಕ್ತಾಯಗೊಂಡಿತು.

ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಧಾನಿ ಪ್ರಸ್ತಾವನೆ, ಸದಸ್ಯ ರಾಷ್ಟ್ರಗಳ ಮೆಚ್ಚುಗೆ: ಅಮಿತಾಭ್ ಕಾಂತ್
ಈ ಭಾರಿ ಜಿ20 ಅಧ್ಯಕ್ಷತೆಯನ್ನು ಭಾರತ ವಹಿಸಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿಯವರು ಆಫ್ರಿಕಾ ಖಂಡದ ರಾಷ್ಟ್ರಗಳನ್ನು ಜಿ20ಗೆ ಸೇರಿಸಲು ಪ್ರಸ್ತಾಪಿಸಿದರು. ಹಂಪಿಯಲ್ಲಿ ನಡೆದಿರುವ ಮೂರನೇ ಶೆರ್ಪಾ ಸಭೆಯಲ್ಲಿ ಭಾರತದ ಪ್ರಸ್ತಾವನೆಗೆ ಎಲ್ಲಾ ಸದಸ್ಯ ರಾಷ್ಟ್ರಗಳು ಸಂಪೂರ್ಣವಾಗಿ ಬೆಂಬಲ ಸೂಚಿಸಿದವು ಎಂದು ಭಾರತೀಯ ನಿಯೋಗದ ಮುಖ್ಯಸ್ಥ (ಶೆರ್ಪಾ) ಅಮಿತಾಭ್ ಕಾಂತ್ ಹೇಳಿದರು

ಜಿ20 ಶೃಂಗಸಭೆಯ ಕೃಪೆ: ಹಂಪಿಯಲ್ಲಿನ ಮೂಲಸೌಕರ್ಯ ಅಭಿವೃದ್ಧಿ!
ಐತಿಹಾಸಿಕ ಹಂಪಿಯಲ್ಲಿ ನಡೆದ ಜಿ20 ಮೂರನೇ ಶೆರ್ಪಾ ಶೃಂಗಸಭೆಗೆ ವಿಧ್ಯುಕ್ತ ತೆರೆ ಬಿದ್ದಿದೆ. ಜಿ20 ಶೃಂಗಸಭೆಯ ಆತಿಥ್ಯವು ಮೂಲಸೌಕರ್ಯ ರಂಗದಲ್ಲಿ ಹಂಪಿಗೆ ವರದಾನವಾಗಿ ಪರಿಣಮಿಸಿದೆ. ಪಟ್ಟಣವು ಈಗ ಗುಂಡಿಗಳಿಲ್ಲದ ರಸ್ತೆಗಳು, ಕುಡಿಯುವ ನೀರಿನ ಸೌಲಭ್ಯ ಮತ್ತು ಉತ್ತಮ ಶೌಚಾಲಯಗಳನ್ನು ಹೊಂದಿದೆ.

ಹಂಪಿಯಲ್ಲಿ ಜಿ20 ಶೃಂಗಸಭೆ: ಭದ್ರತೆಗೆ 100 ಸಿಸಿಟಿವಿ ಕ್ಯಾಮೆರಾ, 300 ಮಂದಿ ಪೊಲೀಸರ ನಿಯೋಜನೆ
ಜಿ20 ಶೃಂಗಸಭೆ ಭಾನುವಾರದಿಂದ ಹಂಪಿಯಲ್ಲಿ ಆರಂಭವಾಗಲಿದ್ದು, ಸುಮಾರು 52 ದೇಶಗಳಿಂದ ಬರಲಿರುವ ಗಣ್ಯರ ಭದ್ರತೆಗಾಗಿ 100 ಸಿಸಿಟಿವಿ ಕ್ಯಾಮೆರಾಗಳು ಹಾಗೂ ಕೇಂದ್ರೀಯ ಭದ್ರತಾಪಡೆಗಳು, ಎಸ್ಪಿಗಳು, ಡಿವೈಎಸ್ಪಿಗಳು ಸೇರಿದಂತೆ 300 ಮಂದಿ ಪೊಲೀಸರನ್ನು ನಿಯೋಜಿಸಲಾಗಿದೆ.

ಜುಲೈ 9 ರಿಂದ 16ರವರೆಗೆ ಜಿ20 ಶೃಂಗಸಭೆಯ ಮೂರನೇ ಶೆರ್ಪಾ ಸಭೆ: ಹಂಪಿಯಲ್ಲಿ 43 ರಾಷ್ಟ್ರಗಳು ಭಾಗಿ
ಜುಲೈ 9 ರಿಂದ 16ರವರೆಗೆ ವಿಶ್ವಪ್ರಸಿದ್ದ ಹಂಪಿಯಲ್ಲಿ ನಡೆಯುವ ಜಿ20 ಶೃಂಗಸಭೆಯ ಮೂರನೇ ಪ್ರಮುಖ ಸಭೆಯಲ್ಲಿ ಜಾಗತಿಕ ಮಟ್ಟದ ಒಟ್ಟು ಜಿ20 ಶೃಂಗಸಭೆಯ 20 ಸದಸ್ಯ ರಾಷ್ಟ್ರಗಳು, 9 ಆಹ್ವಾನಿತ ರಾಷ್ಟ್ರಗಳು ಸೇರಿ 43 ರಾಷ್ಟ್ರಗಳು ಭಾಗವಹಿಸಲಿವೆ.

ಹಂಪಿಯಲ್ಲಿ ಅಕ್ರಮ ರೆಸಾರ್ಟ್‌ಗಳ ತಪಾಸಣೆಗೆ ಟಾಸ್ಕ್ ಪೋರ್ಸ್ ರಚನೆ!
ಹಂಪಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಅಕ್ರಮ ರೆಸಾರ್ಟ್‌ಗಳು ಮತ್ತು ಹೊಟೇಲ್‌ಗಳು ಅತಿಯಾಗಿ ತಲೆ ಎತ್ತಿದ ಕಾರಣ, ಆತಿಥ್ಯ ಕ್ಷೇತ್ರದಲ್ಲಿನ ಅಕ್ರಮಗಳನ್ನು ಪರಿಶೀಲಿಸಲು ಅಧಿಕಾರಿಗಳು ಕಾರ್ಯಪಡೆಯನ್ನು ರಚಿಸಲು ಯೋಜಿಸುತ್ತಿದ್ದಾರೆ.

ಹಂಪಿಯ ಪಾರಂಪರಿಕ ಪ್ರದೇಶದಲ್ಲಿ ಒಂದೇ ವಾರದಲ್ಲಿ 17 ರೆಸಾರ್ಟ್, ರೆಸ್ಟೋರೆಂಟ್‌ಗಳು ನೆಲಸಮ
ಪಾರಂಪರಿಕ ಪ್ರದೇಶವಾದ ಹಂಪಿ ಸುತ್ತಮುತ್ತಲಿನ 17 ರೆಸಾರ್ಟ್‌ಗಳು ಮತ್ತು ರೆಸ್ಟೋರೆಂಟ್‌ಗಳನ್ನು ಕಳೆದ ಒಂದು ವಾರದಿಂದ ಅಧಿಕಾರಿಗಳು ನೆಲಸಮಗೊಳಿಸಿದ್ದಾರೆ. ಈ ಎಲ್ಲಾ ರೆಸಾರ್ಟ್‌ಗಳಿಗೆ ಮೂರು ತಿಂಗಳ ಹಿಂದೆ ನೋಟಿಸ್ ನೀಡಿದ್ದರೂ ಸಹ ಚಾಲನೆಯಲ್ಲಿದ್ದವು.

