Hampi

ಹಂಪಿಯ ವಿರೂಪಾಕ್ಷ ದೇಗುಲದ ಬಳಿ ಅಕ್ರಮ ಹೋಟೆಲ್ ನಿರ್ಮಾಣ: ಕಾಮಗಾರಿಗೆ ಅಧಿಕಾರಿಗಳಿಂದ ತಡೆ
ಹಂಪಿ ಉತ್ಸವದ ಆಯೋಜನೆಯಲ್ಲಿ ಅಧಿಕಾರಿಗಳು ನಿರತರಾಗಿರುವುದನ್ನು ಲಾಭವಾಗಿ ಪಡೆದುಕೊಳ್ಳಲು ಮುಂದಾದ ಕೆಲವರು ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ (ಎಎಸ್‌ಐ) ಸಂರಕ್ಷಿತ ಪ್ರದೇಶದಲ್ಲಿರುವ ಪ್ರಸಿದ್ಧ ವಿರೂಪಾಕ್ಷ ದೇವಸ್ಥಾನದ ಸಮೀಪದಲ್ಲಿ ಅಕ್ರಮವಾಗಿ ಹೋಟೆಲ್ ಗಳ ನಿರ್ಮಾಣಕ್ಕೆ ಮುಂದಾಗಿದ್ದಾರೆ.

ಹಂಪಿ ಉತ್ಸವ 2023: ವಿಐಪಿ ಪಾಸ್'ಗಳ ರದ್ದುಪಡಿಸಿದರೂ ಜನರಿಂದ ನೀರಸ ಪ್ರತಿಕ್ರಿಯೆ
ಮೂರು ದಿನಗಳ ಹಂಪಿ ಉತ್ಸವಕ್ಕೆ ಈಗಾಗಲೇ ಚಾಲನೆ ಸಿಕ್ಕಿದ್ದು, ಎರಡನೇ ದಿನವೂ ಕೂಡ ಜನರಿಂದ ನೀರ ಪ್ರತಿಕ್ರಿಯೆಗಳು ವ್ಯಕ್ತವಾಗಿದೆ.

ಸದ್ಯದಲ್ಲಿಯೇ ಹಂಪಿ ಮತ್ತು ಮೈಸೂರು ಪ್ರವಾಸೋದ್ಯಮ ಸರ್ಕ್ಯುಟ್: ಸಿಎಂ ಬೊಮ್ಮಾಯಿ
ರಾಜ್ಯದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರವು ಹಂಪಿ ಮತ್ತು ಮೈಸೂರು ಪ್ರವಾಸೋದ್ಯಮ ಸರ್ಕ್ಯೂಟ್‌ಗಳನ್ನು ಶೀಘ್ರದಲ್ಲೇ ಪ್ರಾರಂಭಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಅವರು ನಿನ್ನೆ ಹಂಪಿ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.

ಹಂಪಿ ಬಳಿ ಕಳೆದ ತಿಂಗಳು ರಕ್ಷಿಸಲ್ಪಟ್ಟಿದ್ದ ಯುರೇಷಿಯನ್ ಗ್ರಿಫನ್ ವಲ್ಚರ್ ಮರಳಿ ಗೂಡಿಗೆ
ಕಳೆದ ತಿಂಗಳು ವಿಜಯನಗರ ಜಿಲ್ಲೆಯ ವಿಶ್ವವಿಖ್ಯಾತ ಹಂಪಿ ಬಳಿಯ ರಾಣಿಪೇಟೆಯಲ್ಲಿ ಶಾಲಾ ಮಕ್ಕಳ ಕೈಗೆ ಅಪರೂಪದ ಯುರೇಷಿಯನ್ ಗ್ರಿಫನ್ ರಣಹದ್ದುಗಳು ಸಿಕ್ಕಿದ್ದವು.

ಜಿ-20 ಸಭೆ: ಆಶೀಶ್ ಸಿನ್ಹಾ ನೇತೃತ್ವದ 6 ಸದಸ್ಯರ ತಂಡ ಹಂಪಿಗೆ ಭೇಟಿ
ಈ ವರ್ಷದ ಜುಲೈ ತಿಂಗಳಲ್ಲಿ ವಿಶ್ವ ವಿಖ್ಯಾತ ಹಂಪಿಯಲ್ಲಿ ಜಿ.20 ಸಭೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ಸಭೆಯ ಪೂರ್ವಭಾವಿಯಾಗಿ ವಿದೇಶಾಂಗ ಸಚಿವಾಲಯದ ಜಂಟಿ ಕಾರ್ಯದರ್ಶಿ (ಇಎಎಂ) ಆಶೀಶ್ ಸಿನ್ಹಾ ನೇತೃತ್ವದ ಆರು ಸದಸ್ಯರ ತಂಡವು ಇತ್ತೀಚೆಗೆ ಹಂಪಿಗೆ ಭೇಟಿ ನೀಡಿ, ಸಭೆ ನಡೆಸಿತು.

ಕೇಂದ್ರ ಸರ್ಕಾರದ ಸ್ವದೇಶ್ ದರ್ಶನ್ ಯೋಜನೆ: ಕರ್ನಾಟಕದ ಹಂಪಿ, ಮೈಸೂರು ಆಯ್ಕೆ
ದೇಶದಲ್ಲಿ ಪ್ರವಾಸೋದ್ಯಮವನ್ನು ಉತ್ತೇಜಿಸಲು ಕೇಂದ್ರ ಪ್ರವಾಸೋದ್ಯಮ ಸಚಿವಾಲಯ ಸ್ವದೇಶ್ ದರ್ಶನ್ ಯೋಜನೆ ಆರಂಭಿಸಿದ್ದು, ಈ ಸ್ವದೇಶ್ ದರ್ಶನ್ 2.0 ಯೋಜನೆಗೆ ಹಂಪಿ ಹಾಗೂ ಮೈಸೂರು ಆಯ್ಕೆಯಾಗಿವೆ. ಇದಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.

ಹಂಪಿ: ಮಚ್ಚೆಯುಳ್ಳ ಅಪರೂಪದ ಮರಗೂಬೆ ಪಕ್ಷಿ ಗೋಚರ: ಪಕ್ಷಿ ವೀಕ್ಷಕರಲ್ಲಿ ಕುತೂಹಲ
ಹಂಪಿ ದರೋಜಿ ಪಕ್ಷಿಗಳ ಪಟ್ಟಿಗೆ ಈಗ ಮರದ ಹಕ್ಕಿ ಎಂದೇ ಪರಿಗಣಿತವಾಗಿರುವ ಮಚ್ಚೆಯುಳ್ಳ ಮರದ ಗೂಬೆ ಸೇರ್ಪಡೆಯಾಗಿದೆ. ಈ ಪ್ರದೇಶದಲ್ಲಿ ಇಬ್ಬರು ಪಕ್ಷಿಪ್ರೇಮಿಗಳು ಈ ಪಕ್ಷಿಯನ್ನು ಪತ್ತೆಹಚ್ಚಿದ್ದಾರೆ. ಅವರೇ ಪಕ್ಷಿ ವೀಕ್ಷಕರಾದ ಸಂತೋಷ್ ಹಂಪಿ ಮತ್ತು ಶಬರೀಶ್ ಜಿ ಎ.

ಜಿ20 ಪ್ರತಿನಿಧಿಗಳಿಗೆ ಹಂಪಿ, ನಂದಿ ಬೆಟ್ಟ ಪ್ರವಾಸ ಆಯೋಜನೆ!
ರಾಜ್ಯದ ಶ್ರೀಮಂತ ಸಂಸ್ಕೃತಿ ಮತ್ತು ಪರಂಪರೆ ಮತ್ತು ಕೈಗಾರಿಕಾ ಮತ್ತು ತಂತ್ರಜ್ಞಾನದ ಶಕ್ತಿಯನ್ನು ಜಿ20 ಪ್ರತಿನಿಧಿಗಳ ಮುಂದೆ ಪ್ರದರ್ಶಿಸಲು ರಾಜ್ಯ ಪ್ರವಾಸೋದ್ಯಮ ಇಲಾಖೆಯು ಸಿದ್ಧತೆ ನಡೆಸಿದೆ ಎಂದು ತಿಳಿದುಬಂದಿದೆ.

ಬಂಜರು ಭೂಮಿಯನ್ನು ನಿತ್ಯಹರಿದ್ವರ್ಣ ಕಿರು ಅರಣ್ಯವನ್ನಾಗಿ ಪರಿವರ್ತಿಸಿದ ವನ್ಯಜೀವಿ ಛಾಯಾಗ್ರಾಹಕ ಪಂಪಯ್ಯ ಮಳಿಮಠ!
ಇದು ವನ್ಯಜೀವಿ ಛಾಯಾಚಿತ್ರಗ್ರಾಹಕರೊಬ್ಬರು ಬರಡು ಭೂಮಿಯನ್ನು ನಂದನವಾಗಿಸಿದ ಸಾಹಸದ ಕಥೆ. ಮರವು ಬೀಜದಿಂದ ಪ್ರಾರಂಭವಾಗುತ್ತದೆ ಅದೇ ರೀತಿ ಮನುಷ್ಯನ ಆಸೆ-ಆಕಾಂಕ್ಷೆಗಳು ಕೂಡ ಸಣ್ಣ ಬೀಜದಿಂದ ಆರಂಭವಾಗಿ ನಂತರ ಹೆಮ್ಮರವಾಗುತ್ತದೆ.

