Hampi

ಹೊಸಪೇಟೆ: ಹಂಪಿಯಲ್ಲಿ ಪ್ರವಾಸಿಗರ ದಂಡು, ಕೋವಿಡ್ ನಿಯಮ ಉಲ್ಲಂಘನೆ ಪರಿಶೀಲನೆಗೆ ಸಿಬ್ಬಂದಿಗಳ ನೇಮಕ
ವಿಶ್ವ ವಿಖ್ಯಾತ ಹಂಪಿಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ದಿನ ಕಳೆದಂತೆ ಹೆಚ್ಚಾಗುತ್ತಿದ್ದು, ಈ ನಡುವೆ ಸ್ಥಳಕ್ಕೆ ಭೇಟಿ ನೀಡುತ್ತಿರುವ ಪ್ರವಾಸಿಗರು ಕೋವಿಡ್ ನಿಯಮ ಉಲ್ಲಂಘಿಸುತ್ತಿರುವುದಕ್ಕೆ ಸ್ಥಳೀಯರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಜೀವವಿಲ್ಲದ ಕಲ್ಲುಗಳಿಗೆ ಸಂಗೀತ ನೀಡಿದ ಕುಶಲಕರ್ಮಿಗಳಿಗೆ ವಂದನೆ: ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು
ಉಪ ರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಶನಿವಾರ ಕುಟುಂಬ ಸಮೇತ ವಿಶ್ವ ವಿಖ್ಯಾತ ಹಂಪಿ ಸ್ಮಾರಕಕ್ಕೆ ಭೇಟಿ ನೀಡಿದ್ದಾರೆ.

ಲಾಕ್ ಡೌನ್ ಸಡಿಲಿಕೆ ನಂತರ ಹಂಪಿಯಲ್ಲಿ ಜನವೋ ಜನ: ಪ್ರವಾಸಿಗರಿಂದ ಕೋವಿಡ್ ನಿಯಮ ಉಲ್ಲಂಘನೆ; ಸ್ಥಳೀಯರಲ್ಲಿ ಆತಂಕ
ಲಾಕ್ ಡೌನ್ ತೆರವು ಮಾಡಿದ ನಂತರ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಸಹ ಕಳೆದ 15 ದಿನಗಳಿಂದ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ.

ಕೊರೋನಾ ನಿರ್ಬಂಧ ಸಡಿಲಿಕೆ: ವಿಶ್ವವಿಖ್ಯಾತ ತಾಣ ಹಂಪಿ ಇಂದಿನಿಂದ ಪ್ರವಾಸಿಗರಿಗೆ ಮುಕ್ತ
ವಿಶ್ವವಿಖ್ಯಾತ ಹಂಪಿ ಗುರುವಾರದಿಂದ (ಜೂ.24) ಪ್ರವಾಸಿಗರಿಗೆ ಮುಕ್ತವಾಗಿದೆ. ಐತಿಹಾಸಿಕ ವಿಶ್ವ ಪ್ರಸಿದ್ಧ ಹಂಪಿ ಸ್ಮಾರಕಗಳು ಇಂದಿನಿಂದ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಾಗಲಿವೆ.

ಶಿವನ ಪಾದ ಸೇರಿದ ಹಂಪಿಯ ಬಡವಿಲಿಂಗ ದೇವಸ್ಥಾನದ ಪೂಜಾರಿ ಕೃಷ್ಣ ಭಟ್
ಶಿವಪೀಠದ ಮೇಲೇರಿ ನಿತ್ಯವೂ ಪೂಜೆ ಸಲ್ಲಿಸಿ ಹೆಸರುವಾಸಿಯಾಗಿದ್ದ ಹಂಪಿಯ ಬಡವಿಲಿಂಗ ದೇವಸ್ಥಾನದ ಪೂಜಾರಿ ಕೃಷ್ಣ ಭಟ್ ಭಾನುವಾರ ಬೆಳಗಿನ ಜಾವ ನಿಧನರಾಗಿದ್ದಾರೆ. ಅವರಿಗೆ 94 ವರ್ಷ ವಯಸ್ಸಾಗಿತ್ತು.

ಹಂಪಿಯತ್ತ ಮುಖ ಮಾಡಿದ ಪ್ರವಾಸಿಗರು: ಮೊಬೈಲ್ ವ್ಯಾನ್ ಮೂಲಕ ಕೋವಿಡ್ ಪರೀಕ್ಷೆಗೆ ಮುಂದಾದ ಅಧಿಕಾರಿಗಳು
ರಾಜ್ಯದಲ್ಲಿ ಕೊರೋನಾ ಅಬ್ಬರ ಇಳಿಯುತ್ತಿದ್ದಂತೆಯೇ ಐತಿಹಾಸಿಕ ಪ್ರವಾಸಿ ತಾಣವಾಗಿರುವ ಹಂಪಿಯತ್ತ ಪ್ರವಾಸಿಗರು ಮುಖ ಮಾಡಿದ್ದು, ದಿನ ಕಳೆಯುತ್ತಿದಂತೆಯೇ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾ ಆಡಳಿತ ಮಂಡಳಿಯ ಅಧಿಕಾರಿಗಳು ಮೊಬೈಲ್ ಕೋವಿಡ್ ವ್ಯಾನ್ ಮೂಲಕ ಕೊರೋನಾ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

ಹಂಪಿಯಲ್ಲಿ ನಿಯಮ ಮೀರಿ ಡ್ರೋಣ್ ಬಳಕೆ: ಕ್ರಮಕ್ಕೆ ಮುಂದಾದ ಅಧಿಕಾರಿಗಳು
ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಮತ್ತು ಸ್ಮಾರಕಗಳ ಮೂಲ ಸ್ವರೂಪದ ಸಂರಕ್ಷಣೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಪದೇ ಪದೇ ನಿಯಮ ಉಲ್ಲಂಘಟನೆಯಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇದ್ದು, ಪರವಾನಗಿ ಇಲ್ಲದೇ ಡ್ರೋಣ್ ಕ್ಯಾಮೆರಾಗಳ ಹಾರಾಟ ಎಗ್ಗಿಲ್ಲದೇ ಮುಂದುವರೆದಿವೆ.

ನಿಯಮ ಮೀರಿ ಸ್ಮಾರಕಗಳನ್ನು ಮುಟ್ಟುತ್ತಿದ್ದ ಪ್ರವಾಸಿಗರು: ಸಂರಕ್ಷಣೆಗಾಗಿ ಸುತ್ತ ಸರಪಳಿ, ಬ್ಯಾರಿಕೇಡ್ ಅಳವಡಿಕೆ!
ವಿಶ್ವ ಪಾರಂಪರಿಕ ತಾಣಗಳಲ್ಲಿ ಒಂದಾಗಿರುವ ಹಂಪಿಯ ಸಂರಕ್ಷಿತ ಸ್ಮಾರಕದೊಳಗೆ ನಿಯಮಗಳು ಉಲ್ಲಂಘನೆಯಾಗುತ್ತಿರುವ ಸಾಕಷ್ಟು ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಸ್ಮಾರಕವನ್ನು ಮುಟ್ಟು, ಅದರ ಮೇಲೆ ಹತ್ತಿ ಫೋಟೋಗಳನ್ನು ತೆಗೆಯುತ್ತಿರುವ ಘಟನೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕಠಿಣ ನಿಯಮಗಳನ್ನು ಅಧಿಕಾರಿಗಳು ಜಾರಿಗೆ ತಂದಿದ್ದಾರೆ.

ಹಂಪಿಯಲ್ಲಿ ಜೋಡಿಯ ಪ್ರಿ ವೆಡ್ಡಿಂಗ್ ಫೋಟೋ-ವಿಡಿಯೊ ಶೂಟ್: ಸಾರ್ವಜನಿಕರ ತೀವ್ರ ಆಕ್ರೋಶ
ಪ್ರಿ ವೆಡ್ಡಿಂಗ್ ಫೋಟೋ ಶೂಟ್ ಇತ್ತೀಚೆಗೆ ಲೇಟೆಸ್ಟ್ ಟ್ರೆಂಡ್. ಮದುವೆಯಾಗಲು ಹೊರಟಿರುವ ಜೋಡಿಯೊಂದು ವಿಶ್ವಪ್ರಸಿದ್ಧ ಪರಂಪರೆ ತಾಣ ಹಂಪಿಯಲ್ಲಿ ಪ್ರಿ ವೆಡ್ಡಿಂಗ್ ಫೋಟೋ, ವಿಡಿಯೊ ಶೂಟ್ ಮಾಡಿಸಿಕೊಂಡಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ.

