ರಾಜ್ಯ

ಹಂಪಿಯಲ್ಲಿ ನಿಯಮ ಮೀರಿ ಡ್ರೋಣ್ ಬಳಕೆ: ಕ್ರಮಕ್ಕೆ ಮುಂದಾದ ಅಧಿಕಾರಿಗಳು

ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಮತ್ತು ಸ್ಮಾರಕಗಳ ಮೂಲ ಸ್ವರೂಪದ ಸಂರಕ್ಷಣೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಪದೇ ಪದೇ ನಿಯಮ ಉಲ್ಲಂಘಟನೆಯಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇದ್ದು, ಪರವಾನಗಿ ಇಲ್ಲದೇ ಡ್ರೋಣ್ ಕ್ಯಾಮೆರಾಗಳ ಹಾರಾಟ ಎಗ್ಗಿಲ್ಲದೇ ಮುಂದುವರೆದಿವೆ.

ಹಂಪಿಯಲ್ಲಿ ನಿಯಮ ಮೀರಿ ಡ್ರೋಣ್ ಬಳಕೆ: ಕ್ರಮಕ್ಕೆ ಮುಂದಾದ ಅಧಿಕಾರಿಗಳು
ಸಂಗ್ರಹ ಚಿತ್ರ
Published On :

ಹೊಸಪೇಟೆ: ವಿಶ್ವವಿಖ್ಯಾತ ಪ್ರವಾಸಿ ತಾಣ ಹಂಪಿಯ ಸ್ಮಾರಕಗಳ ಸಂರಕ್ಷಣೆಗೆ ಮತ್ತು ಸ್ಮಾರಕಗಳ ಮೂಲ ಸ್ವರೂಪದ ಸಂರಕ್ಷಣೆಗೆ ಹಲವಾರು ನಿಯಮಗಳನ್ನು ಜಾರಿಗೆ ತಂದಿದ್ದರೂ ಪದೇ ಪದೇ ನಿಯಮ ಉಲ್ಲಂಘಟನೆಯಾಗುತ್ತಿರುವ ಘಟನೆಗಳು ಬೆಳಕಿಗೆ ಬರುತ್ತಲೇ ಇದ್ದು, ಪರವಾನಗಿ ಇಲ್ಲದೇ ಡ್ರೋಣ್ ಕ್ಯಾಮೆರಾಗಳ ಹಾರಾಟ ಎಗ್ಗಿಲ್ಲದೇ ಮುಂದುವರೆದಿವೆ. ಹೀಗಾಗಿ ಅಧಿಕಾರಿಗಳು ಕ್ರಮಗಳ ಕೈಗೊಳ್ಳಲು ಮುಂದಾಗಿದ್ದಾರೆ. 

ಹಂಪಿಯ ಮಾತಂಗ ಪರ್ವತದ ಬಳಿ ಪ್ರವಾಸಿಗರು ಕೆಲ ದಿನಗಳ ಹಿಂದಷ್ಟೇ ಸೂರ್ಯೋದಯದ ವೇಳೆಯಲ್ಲಿ ಡ್ರೋಣ್ ಕ್ಯಾಮೆರಾ ಹಾರಾಟ ನಡೆಸಿರುವ ಸುದ್ದಿ ಭಾರೀ ವೈರಲ್ ಆಗಿತ್ತು. 

ಕೇಂದ್ರ ಮತ್ತು ರಾಜ್ಯ ಪುರಾತತ್ವ ಇಲಾಖೆಗಳ ಅಧಿಕಾರಿಗಳ ಕಣ್ತಪ್ಪಿಸಿ ಡ್ರೋಣ್ ಕ್ಯಾಮೆರಾ ಹಾರಾಟ ನಡೆಸಲಾಗಿದೆ. ನಿಯಮಗಳ ಪ್ರಕಾರ ಪೊಲೀಸ್ ವರಿಷ್ಠಾಧಿಕಾರಿಗಳ ಪರವಾನಗಿ ಇಲ್ಲದೇ ಡ್ರೋಣ್ ಹಾರಾಟ  ನಡೆಸುವಂತಿಲ್ಲ. ಹಾಗಿದ್ದರೂ ಹಂಪಿಯಲ್ಲಿ ಪದೇ ಪದೇ ಡ್ರೋಣ್ ಗಳ ಹಾರಾಟ ನಡೆದಿರುವುದು ಕಂಡು ಬರುತ್ತಿದೆ. ಇದರಿಂದ ವಿಶ್ವ ಪರಂಪರೆ ತಾಣದ ಭದ್ರತೆಗು ಡ್ರೋಣ್'ಗಳ ಹಾರಾಟ ಆತಂಕವನ್ನು ತಂದಿದೆ. ಹೀಗಾಗಿ ಅಧಿಕಾರಿಗಳು ಇದೀಗ ಡ್ರೋಣ್ ಹಾರಾಟ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. 

ಭಾರತೀಯ ಪುರಾತತ್ವ ಇಲಾಖೆಯ ಹಿರಿಯ ಅಧಿಕಾರಿಗಳು ಮಾತನಾಡಿ, ಡ್ರೋಣ್ ಹಾರಾಟ ನಡೆಸಿದ್ದರ ಕುರಿತ ವಿಡಿಯೋಗಳನ್ನು ಸಂಗ್ರಹಿಸಲಾಗಿದೆ. ಶೀಘ್ರದಲ್ಲೇ ಈ ಕುರಿತ ಮಾಹಿತಿಯನ್ನು ಪೊಲೀಸರಿಗೆ ನೀಡಲಾಗುತ್ತದೆ ಎಂದು ಹೇಳಿದ್ದಾರೆ. 

ಹಂಪಿ ಬಳಿ ಡ್ರೋಣ್ ಹಾರಾಟ ನಡೆಸುತ್ತಿರುವ ಕುರಿತು ಸ್ಥಳೀಯ ಮಾರ್ಗದರ್ಶಕರು ಮಾಹಿತಿ ನೀಡಿದ್ದರು. ನಾವೂ ಕೂಡ ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸಿದ್ದೇವೆ. ಸಾಕಷ್ಟು ಬಾರಿ ಕೆಲ ಪ್ರವಾಸಿಗರು ಅಕ್ರಮವಾಗಿ ಡ್ರೋಣ್ ಹಾರಾಟ ನಡೆಸುತ್ತಲಿರುತ್ತಾರೆ. ಮಾರುಕಟ್ಟೆಗಳಲ್ಲಿ ಭಾರವಿಲ್ಲದ ಡ್ರೋಣ್ ಗಳು ಲಭ್ಯವಾಗುತ್ತಿದ್ದು, ಇದು ಭದ್ರತೆಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ ಎಂದು ತಿಳಿಸಿದ್ದಾರೆ. 

ಹಂಪಿಯಲ್ಲಿರುವ ಸ್ಥಳೀಯ ಉದ್ಯಮಿ ಮಂಜುನಾಥ್ ಅವರು ಮಾತನಾಡಿ, ಕೆಲವರು ಹ್ಯಾಂಡ್ಹೆಲ್ಡ್ ಡ್ರೋನ್‌ಗಳನ್ನು ಬಳಕೆ ಮಾಡಿ ಬೆಳಗಿನ ಜಾವ ಅಥವಾ ಸಂಜೆ ವೇಳೆಯಲ್ಲಿ ಬಳಕೆ ಮಾಡುತ್ತಿರುತ್ತಾರೆ. ಹಂಪಿಯ ಸುತ್ತಮುತ್ತಲೂ ಸಾಕಷ್ಟು ಸಿಸಿಟಿವಿಗಳನ್ನು ಅಳವಡಿಸಲಾಗಿದೆ. ಕೆಲ ದಿನಗಳ ಹಿಂದಷ್ಟೇ ನವಜೋಡಿಗಳು ಡ್ರೋಣ್ ಬಳಸಿ ಪ್ರೀವೆಡ್ಡಿಂಗ್ ಫೋಟೋಶೂಟ್ ನಡೆಸಿದೆ. ಪೊಲೀಸರು ದೂರು ದಾಖಲಿಸಿಕೊಂಡಿದ್ದರೂ ಈ ವರೆಗೂ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿಲ್ಲ ಎಂದಿದ್ದಾರೆ. 

ಹಂಪಿಯ ಸುತ್ತಮುತ್ತಲೂ ಡ್ರೋಣ್ ಬಳಕೆ ಮಾಡುವುದನ್ನು ನಿಷೇಧಿಸಲಾಗಿದೆ. ಶೀಘ್ರದಲ್ಲೇ ಈ ಬಗ್ಗೆ ಸೂಚನೆ ಹಾಗೂ ಎಚ್ಚರಿಕೆಯ ಫಲಕಗಳನ್ನೂ ಹಾಕಲಾಗುತ್ತದೆ. ಒಂದು ವೇಳೆ ಅಕ್ರಮವಾಗಿ ಡ್ರೋಣ್ ಗಳನ್ನು ಹಾರಾಟ ನಡೆಸಿದ್ದೇ ಆದರೆ, ಭದ್ರತಾ ಸಿಬ್ಬಂದಿಗಳು ವಶಕ್ಕೆ ಪಡೆಯಲಿದ್ದಾರೆಂದು ಹಂಪಿಯ ಎಎಸ್ಐ ಉಪ ಅಧೀಕ್ಷಕ ಪಿ. ಕಾಳಿಮುತ್ತು ಅವರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.