Hampi

ವಾರಣಾಸಿಯ 'ಗಂಗಾ ಆರತಿಯಂತೆ' ಹಂಪಿಯಲ್ಲಿ ಪ್ರತಿ ಹುಣ್ಣಿಮೆಯಂದು 'ತುಂಗಾ ಆರತಿ'
ವಾರಣಾಸಿಯಲ್ಲಿ ನಡೆಯುವ ಗಂಗಾರತಿಂತೆ ‘ಇನ್ನೂ ಮುಂದೆ ಪ್ರತಿ ಹುಣ್ಣಿಮೆಯಂದು ತುಂಗಾ ಆರತಿ ಕಾರ್ಯಕ್ರಮ ಹಮ್ಮಿಕೊಳ್ಳಲು ಬಳ್ಳಾರಿ ಜಿಲ್ಲಾಡಳಿತ ನಿರ್ಧರಿಸಿದೆ.

ಹಂಪಿಯದ್ದು ಮಂತ್ರಮುಗ್ದಗೊಳಿಸುವ ಅದ್ಭುತ ಸೌಂದರ್ಯ: ನೀತಿ ಆಯೋಗದ ಸಿಇಒ ಅಮಿತಾಭ್ ಕಾಂತ್
ನೀತಿ ಆಯೋಗದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಅಮಿತಾಭ್ ಕಾಂತ್ ಹಂಪಿಯ ಸೌಂದರ್ಯವನ್ನು ವೀಕ್ಷಣೆ ಮಾಡಿದರು. ವಿಶ್ವಪಾರಂಪರಿಕ ತಾಣದ ಕುರಿತು ಅವರು ಮೆಚ್ಚುಗೆ ಸೂಚಿಸಿದರು.

ಹಂಪಿಯಲ್ಲಿನ ಪ್ರವಾಸಿ ಗೈಡ್'ಗಳಿಗೆ ಶೀಘ್ರದಲ್ಲೇ ಸಮವಸ್ತ್ರ, ಐಡಿ ಕಾರ್ಡ್ ವಿತರಣೆ!
ಬಳ್ಳಾರಿಯ ಹಂಪಿಯಲ್ಲಿ ನಕರಿ ಪ್ರವಾಸಿ ಗೈಡ್ ಗಳ ಹಾವಳಿಯನ್ನು ತಪ್ಪಿಸುವ ಸಲುವಾಗಿ ಜಿಲ್ಲಾಡಳಿತ ಮಂಡಳಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶೀಘ್ರದಲ್ಲೇ ಪ್ರವಾಸಿ ಗೈಡ್(ಮಾರ್ಗದರ್ಶಿ)ಗಳಿಗೆ ಸಮವಸ್ತ್ರ ಹಾಗೂ ಗುರುತಿನ ಚೀಟಿಗಳನ್ನು ನೀಡಲು ಮುಂದಾಗಿದೆ.

ಹಂಪಿಗೆ ಹೊರಟಿರಾ? ಹಾಗಿದ್ದರೆ ಮೊದಲು ನೀವು ಈಮೇಲ್ ಹೊಂದಿದ್ದೀರೆಂದು ಖಚಿತಪಡಿಸಿಕೊಳ್ಳಿ!
ನೀವು ಯಾವಾಗಲಾದರೂ ಬಳ್ಳಾರಿ ಜಿಲ್ಲೆಯ ಹಂಪಿಯ ವಿಶ್ವ ಪರಂಪರೆಯ ತಾಣಕ್ಕೆ ಭೇಟಿ ನೀಡು್ತ್ತೀರಾದರೆ ನಿಮಗೆ ಇಮೇಲ್ ಖಾತೆ ಇದೆ ಎಂದು ಖಚಿತಪಡಿಸಿಕೊಳ್ಳಿ. ಅಧಿಕಾರಿಗಳು ಈಗ ಬಾರ್ ಕೋಡ್ ಟಿಕೆಟ್‌ಗಳನ್ನು ನೀಡುತ್ತಿದ್ದು ಅದನ್ನು ಪ್ರವಾಸಿಗರ ಇಮೇಲ್ ಖಾತೆಗಳಿಗೆ ಕಳುಹಿಸಲಾಗುತ್ತದೆ.

ಮಳೆ ವಿಕೋಪದಿಂದ ರಕ್ಷಿಸಲು ಹಂಪಿ ಸ್ಮಾರಕಕ್ಕೆ 'ಪ್ರವಾಹ ನಿರೋಧಕ' ಅಳವಡಿಕೆ
ವಿಶ್ವ ಪಾರಂಪರಿಕ ತಾಣವಾದ ಹಂಪಿ ಕಳೆದ ವರ್ಷದ ಪ್ರವಾಹಕ್ಕೆ ಹಾನಿಗೀಡಾಗಿತ್ತು. ಈ ವರ್ಷ ಕೂಡ ಪ್ರವಾಹ ಉಂಟಾಗಿ ಹಾನಿಯಾಗಬಾರದು ಎಂಬ ಉದ್ದೇಶದಿಂದ ಭಾರತೀಯ ಪುರಾತತ್ವ ಇಲಾಖೆ ಪ್ರವಾಹ ನಿರೋಧಕವನ್ನು ಅಳವಡಿಸುತ್ತಿದೆ.

ಮಳೆಗೆ ಹಂಪಿಯ ಶಿವ-ದುರ್ಗಾದೇವಿ ದೇಗುಲದ ಗೋಡೆಗಳು ಕುಸಿತ
ಕಳೆದ 4-5 ದಿನಗಳಿಂದ ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ವಿಶ್ವಪರಂಪರೆ ಹೊಂದಿರುವ ಹಂಪಿಯ ಲೋಕಪಾವನಿ ಬಳಿಯ ಶಿವ-ದುರ್ಗಾದೇವಿ ದೇವಸ್ಥಾನದ ಗೋಡೆಗಳು ಕುಸಿದುಬಿದ್ದವೆ ಎಂದು ತಿಳಿದುಬಂದಿದೆ.

ವಿಶ್ವ ವಿಖ್ಯಾತ ಹಂಪಿ ಪ್ರವಾಸಿಗರಿಗೆ ಇಂದಿನಿಂದ ಮುಕ್ತ!
ಕಳೆದ ನಾಲ್ಕು ತಿಂಗಳಿನಿಂದ ಪ್ರವಾಸಿಗರಿಲ್ಲದೆ ಬಣಗುಡುತಿದ್ದ ವಿಶ್ವ ವಿಖ್ಯಾತ ಹಂಪಿಗೆ ಇಂದಿನಿಂದ ಜೀವ ಕಳೆ ಬರುತ್ತಿದೆ.

ವಿಶ್ವಪ್ರಸಿದ್ಧ ಹಂಪಿ ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತ
ಪ್ರವಾಸ ಪ್ರಿಯರಿಗೆ ಸಿಹಿಸುದ್ದಿ! ವಿಶ್ವಪ್ರಸಿದ್ಧ ಹಂಪಿಯು ಸೋಮವಾರದಿಂದ ಪ್ರವಾಸಿಗರಿಗೆ ಮುಕ್ತವಾಗಲಿದೆ. ಕರ್ನಾಟಕ್ ಪ್ರವಾಸಿಗಳಿಗೆ ತೆರೆದುಕೊಂಡಾಗಲೂ ಹಂಪಿ ಮತ್ತಿತರೆ ತಾಣಗಳು ಪ್ರವಾಸಿಗರಿಗೆ ಪ್ರವೇಶ ನಿರಾಕರಿಸಿದ್ದು ಇದೀಗ ಅವುಗಳು ಪ್ರವಾಸಿಗರನ್ನು ಕೈಬೀಸಿ ಕರೆಯಲು ಸಿದ್ದವಾಗಿದೆ.

ಕೋವಿಡ್-19 ಸಮಯದಲ್ಲಿ ಪ್ರವಾಸ ಹೋಗಲು ಸಾಧ್ಯವಾಗುತ್ತಿಲ್ಲವೇ? ಸರ್ಕಾರ ಒದಗಿಸುತ್ತಿದೆ ವರ್ಚುವಲ್ ಟೂರಿಸಂ!
ಕೋವಿಡ್-19 ಸಮಯದಲ್ಲಿ ಈ ಬಾರಿ ಹಲವರಿಗೆ ತಮ್ಮ ಇಷ್ಟದ ಸ್ಥಳಗಳಿಗೆ ಹೋಗಲು ಸಾಧ್ಯವಾಗದಿರಬಹುದು. ಪ್ರವಾಸೋದ್ಯಮಕ್ಕೆ ಇದರಿಂದ ಭಾರೀ ಹೊಡೆತ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕ ಸರ್ಕಾರ ಪ್ರವಾಸಿ ಪ್ರಿಯರಿಗೆ ದೇವಸ್ಥಾನಗಳು, ಸ್ಮಾರಕಗಳು, ಜಲಪಾತಗಳ ವರ್ಚುವಲ್ ಪ್ರವಾಸ ಸೌಲಭ್ಯವನ್ನು ಕಲ್ಪಿಸಿಕೊಡಲಿದೆ.

