Gurugram

ಗುರುಗ್ರಾಮನಲ್ಲಿ ಪಟಾಕಿ ಸ್ಫೋಟ: ಮತ್ತೆ ಮೂವರು ಗಾಯಾಳು ಸಾವು, ಸಾವಿನ ಸಂಖ್ಯೆ 6ಕ್ಕೆ ಏರಿಕೆ
ಕಳೆದ ವಾರ ಗುರುಗ್ರಾಮ್‌ನ ಮನೆಯೊಂದರಲ್ಲಿ ಪಟಾಕಿ ಸ್ಫೋಟದಲ್ಲಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮೂವರು ಶುಕ್ರವಾರ ಸಾವನ್ನಪ್ಪಿದ್ದು, ಘಟನೆಯಲ್ಲಿ ಮೃತಪಟ್ಟವರ ಸಂಖ್ಯೆ 6 ಕ್ಕೆ ಏರಿಕೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಲೋಕಸಭೆ ಭದ್ರತಾ ವಿಭಾಗದ ನಿವೃತ್ತ ಅಧಿಕಾರಿಗೆ 1 ಕೋಟಿ ರೂ. ವಂಚನೆ
ಮ್ಯೂಚುವಲ್ ಫಂಡ್‌ಗಳು ಮತ್ತು ಷೇರುಗಳಲ್ಲಿ ಹೂಡಿಕೆ ಮಾಡುವ ನೆಪದಲ್ಲಿ 1 ಕೋಟಿ ರೂಪಾಯಿಗೂ ಹೆಚ್ಚು ಹಣವನ್ನು ವಂಚಿಸಲಾಗಿದೆ ಎಂದು ಲೋಕಸಭೆಯ ಭದ್ರತಾ ವಿಭಾಗದ ನಿವೃತ್ತ ಉಪನಿರ್ದೇಶಕರೊಬ್ಬರು ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಐಸಿಯುನಲ್ಲಿ ಮುಲಾಯಂ ಸಿಂಗ್ ಯಾದವ್, ಆರೋಗ್ಯ ಪರಿಸ್ಥಿತಿ ಗಂಭೀರ- ಆಸ್ಪತ್ರೆ ಹೇಳಿಕೆ
ಸಮಾಜವಾದಿ ಪಕ್ಷ ಸಂಸ್ಥಾಪಕ ಮುಲಾಯಂ ಸಿಂಗ್ ಯಾದವ್ ಅವರ ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡುಬಂದಿಲ್ಲ. ಇಲ್ಲಿನ ಮೇದಾಂತ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಆರೋಗ್ಯ ಪರಿಸ್ಥಿತಿ ಗಂಭೀರವಾಗಿದೆ ಎಂದು ಆಸ್ಪತ್ರೆ ಗುರುವಾರ ಹೇಳಿದೆ.

ದೆಹಲಿಯಲ್ಲಿ ಭಾರೀ ಮಳೆ: ಗುರುಗ್ರಾಮ್ ಖಾಸಗಿ ಕಚೇರಿಗಳಿಗೆ ವರ್ಕ್ ಫ್ರಮ್ ಹೋಮ್ ಸಲಹೆ, ಶಾಲೆಗಳಿಗೆ ರಜೆ ಘೋಷಣೆ
ದೆಹಲಿ ಮತ್ತು ರಾಷ್ಟ್ರ ರಾಜಧಾನಿ ಪ್ರದೇಶದಲ್ಲಿ ಕಳೆದ ಎರಡು ದಿನಗಳಿಂದ ಭಾರೀ ಮಳೆಯಾಗುತ್ತಿದ್ದು, ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

ಶಾಲೆಯೊಳಗೆ 11 ವರ್ಷದ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು!
ಶಾಲೆಯಲ್ಲಿ 11 ವರ್ಷದ ವಿದ್ಯಾರ್ಥಿನಿಯೊಬ್ಬಳು ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಗುರುಗಾಂವ್: ಮುಸ್ಲಿಂ ಎಂಬ ಕಾರಣಕ್ಕೆ ಸ್ನೇಹಿತನನ್ನೇ ಹೊಡೆದು ಕೊಂದ ಯುವಕರು!
ಮುಸ್ಲಿಂ ಎಂಬ ಕಾರಣಕ್ಕೆ ಯುವಕನೊಬ್ಬನನ್ನು ಮೂವರು ಹೊಡೆದು ಕೊಂದಿರುವ ಘಟನೆ ಪಲ್ವಾಲ್ ಎಂಬಲ್ಲಿ ನಡೆದಿದ್ದು, ಈ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಪಾಕ್ ಪರ ಘೋಷಣೆ ಕೂಗಿದ ಗುರುಗ್ರಾಮ ವ್ಯಕ್ತಿ ವಿರುದ್ಧ ಕೇಸ್; ಖಿನ್ನತೆ ಇದಕ್ಕೆ ಕಾರಣ ಎಂದ ಪತ್ನಿ
ಅಪಾರ್ಟ್ ಮೆಂಟ್ ನ ಬಾಲ್ಕನಿಯಿಂದ ಪಾಕಿಸ್ತಾನದ ಪರ ಘೋಷಣೆ ವ್ಯಕ್ತಿಯೋರ್ವನ ವಿರುದ್ಧ ಹರ್ಯಾಣ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಗುರುಗ್ರಾಮ್ ನಿಂದ ಬಿಹಾರಕ್ಕೆ ಸೈಕಲ್ ನಲ್ಲಿ 1,200 ಕಿ.ಮೀ ಪ್ರಯಾಣಿಸಿ ತಂದೆಯನ್ನು ಕರೆತಂದ 'ಶ್ರವಣ ಕುಮಾರಿ'
ಮನಸ್ಸಿದ್ದರೆ ಮಾರ್ಗ ಎಂಬ ಮಾತನ್ನು 15 ವರ್ಷದ ಈ ಬಾಲಕಿ ಸಾಧಿಸಿ ತೋರಿಸಿದ್ದಾಳೆ. ಬಿಹಾರದ ಪಾಟ್ನಾ ಸಮೀಪ ದರ್ಬಾಂಗದ ಜ್ಯೋತಿ ಕುಮಾರಿ ಎಂಬಾಕೆ ತನ್ನ ಅನಾರೋಗ್ಯ ತಂದೆಯನ್ನು ಚಿಕಿತ್ಸೆಗೆ ಹರ್ಯಾಣದ ಗುರುಗ್ರಾಮ್ ನಿಂದ ಬಿಹಾರದ ದರ್ಬಾಂಗಗೆ ಸೈಕಲ್ ನಲ್ಲಿ ಕರೆತಂದಿದ್ದಳು.

ಮಾರುತಿ ಸುಜೂಕಿಯ 2 ಉತ್ಪಾದನಾ ಘಟಕಗಳು ತಾತ್ಕಾಲಿಕ ಸ್ಥಗಿತ!
ದೇಶದ ಅತಿ ದೊಡ್ಡ ಕಾರು ತಯಾರಕ ಸಂಸ್ಥೆ ಮಾರುತಿ ಸುಜೂಕಿ ಲಿಮಿಟೆಡ್ ದೇಶದ ಎರಡು ಪ್ರದೇಶಗಳಲ್ಲಿರುವ ಉತ್ಪಾದನಾ ಘಟಕಗಳನ್ನು ಸ್ಥಗಿತಗೊಳಿಸಲು ನಿರ್ಧರಿಸಿದೆ.

